Asianet Suvarna News Asianet Suvarna News

ಸಿಇಟಿಗೆ ಈ ಬಾರಿ ದಾಖಲೆಯ 3.75 ಲಕ್ಷ ಮಂದಿ ನೋಂದಣಿ

ಇದುವರೆಗೆ 3,75,399 ಮಂದಿ ನೋಂದಣಿ ಮಾಡಿಕೊಂಡಿದ್ದು ದಾಖಲೆಯಾಗಿದೆ. ಕಳೆದ ವರ್ಷಕ್ಕಿಂತ 1 ಲಕ್ಷಕ್ಕೂ ಹೆಚ್ಚು ಮಂದಿ ಈ ಬಾರಿಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ(ಸಿಇಟಿ) ಅರ್ಜಿ ಸಲ್ಲಿಸಿದ್ದಾರೆ.

Record 3.75 lakh Candidates Registered for CET in Karnataka grg
Author
First Published Mar 19, 2024, 9:25 AM IST

ಬೆಂಗಳೂರು(ಮಾ.19):  ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏಪ್ರಿಲ್‌ನಲ್ಲಿ ನಡೆಸುವ 2024ನೇ ಸಾಲಿನ ಯುಜಿ ಸಿಇಟಿಗೆ ಈಗಾಗಲೇ 3.75 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿದ್ದು, ಇದುವರೆಗೆ ನೋಂದಾಯಿಸದವರಿಗಾಗಿ ಮಾ.20ರವರೆಗೆ ಮತ್ತೊಂದು ಅವಕಾಶ ನೀಡಲಾಗಿದೆ. ಇದು ಕೊನೆಯ ಅವಕಾಶ ಮತ್ತೆ ಅವಧಿ ವಿಸ್ತರಿಸುವುದಿಲ್ಲ ಎಂದು ಪ್ರಾಧಿಕಾರ ಹೇಳಿದೆ.

ಇದುವರೆಗೆ 3,75,399 ಮಂದಿ ನೋಂದಣಿ ಮಾಡಿಕೊಂಡಿದ್ದು ದಾಖಲೆಯಾಗಿದೆ. ಕಳೆದ ವರ್ಷಕ್ಕಿಂತ 1 ಲಕ್ಷಕ್ಕೂ ಹೆಚ್ಚು ಮಂದಿ ಈ ಬಾರಿಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ(ಸಿಇಟಿ) ಅರ್ಜಿ ಸಲ್ಲಿಸಿದ್ದಾರೆ.

2024ರ ಸಿಇಟಿ ಪರೀಕ್ಷೆ ದಿನಾಂಕ ಪ್ರಕಟ, ವಿಷಯಾವಾರು ಮಾಹಿತಿ ಇಲ್ಲಿದೆ

ಸಿಇಟಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಅವಕಾಶವು ಮುಕ್ತಾಯಗೊಂಡಿದ್ದರೂ ವಿದ್ಯಾರ್ಥಿಗಳು ಹಾಗೂ ಪೋಷಕರ ಬೇಡಿಕೆ ಹಿನ್ನೆಲೆಯಲ್ಲಿ ಮಾ.18ರಿಂದ 20ರವರೆಗೆ ಮತ್ತೊಂದು ಅವಕಾಶ ನೀಡಲಾಗಿದೆ. ನೋಂದಾಯಿಸಿದವರಿಗೆ ಶುಲ್ಕ ಸಲ್ಲಿಸಲು ಮಾ.21 ಕೊನೆಯ ದಿನವಾಗಿರುತ್ತದೆ. ಇದುವರೆಗೆ ನೋಂದಣಿ ಮಾಡಿಕೊಳ್ಳದವರು ಪ್ರಾಧಿಕಾರದ ವೆಬ್‌ಸೈಟ್‌ https://kea.kar.nic.in ಮೂಲಕ ನೋಂದಣಿ ಅಥವಾ ಅರ್ಜಿ ಸಲ್ಲಿಸಬಹುದು. ನಿಗದಿಯಂತೆ ಏ.18 ಮತ್ತು 19ರಂದು ಸಿಇಟಿ ನಡೆಯಲಿದೆ. ಈಗ ನೋಂದಾಯಿಸುವವರು ಬೆಂಗಳೂರು ನಗರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios