Asianet Suvarna News Asianet Suvarna News

ಮೇ 4 ರಂದು ನಿಗದಿಯಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-2 ಮುಂದೂಡಿಕೆ, ಡೀಟೆಲ್ಸ್ ಇಲ್ಲಿದೆ

2023-24ರ ದ್ವಿತೀಯ ಪಿಯುಸಿ ಪರೀಕ್ಷೆ -2ರ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ  ಪ್ರಕಟಿಸಿದ್ದು.  ಮೇ 4 ರಂದು ನಿಗದಿಯಾಗಿದ್ದ ಗೃಹ ವಿಜ್ಞಾನ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ  

Karnataka second PUC Time Table 2024 for Exam 2 Home science subject date Postponed  gow
Author
First Published Apr 24, 2024, 3:34 PM IST

ಬೆಂಗಳೂರು (ಏ.24): 2023-24ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ  ಪ್ರಕಟಿಸಿತ್ತು. ಇದೀಗ ಏಪ್ರಿಲ್ 29ರಿಂದ ಮೇ 16ರವರೆಗೆ ಪರೀಕ್ಷೆ ನಡೆಯಲಿದ್ದು,  ಮೇ 4 ರಂದು ನಿಗದಿಯಾಗಿದ್ದ ಗೃಹ ವಿಜ್ಞಾನ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ  ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. 

ಮೇ 4 ರಂದು ನಿಗದಿಯಾಗಿದ್ದ ಗೃಹ ವಿಜ್ಞಾನ ಪರೀಕ್ಷೆ ಮುಂದೂಡಿಕೆಯಾಗಿದ್ದು, ಈ ಪರೀಕ್ಷೆಯನ್ನು ಮೇ 9 ರಂದು ಬೆಳಿಗ್ಗೆ 10:15 ಕ್ಕೆ ನಡೆಸಲು ನಿಗದಿಯಾಗಿದೆ. ಇ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷಾ ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.

ಪರೀಕ್ಷೆ ವೇಳಾಪಟ್ಟಿ ಇಂತಿದೆ
ಏ 29ರಂದು -ಕನ್ನಡ, ಅರೆಬಿಕ್ 
ಏ 30ರಂದು - ಇತಿಹಾಸ, ಭೌತಶಾಸ್ತ್ರ
ಮೇ 2ರಂದು-ಇಂಗ್ಲಿಷ್
ಮೇ 3ರಂದು-ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 4ರಂದು ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ,
ಮೇ 9ರಂದು ಗಣಿತ, ಶಿಕ್ಷಣಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗೃಹ ವಿಜ್ಞಾನ
ಮೇ 11ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮೇ 13ರಂದು ಅರ್ಥಶಾಸ್ತ್ರ
ಮೇ 14ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಮೇ 15ರಂದು ಹಿಂದಿ
ಮೇ 16ರಂದು ತಮಿಳು ಇತರೆ ಭಾಷಾ ವಿಷಯಗಳ ಪರೀಕ್ಷೆ

ಎಲ್ಲ ವಿಷಯಗಳಿಗೆ ತಲಾ 80 ಅಂಕಗಳಿವೆ. ಪ್ರತಿದಿನ ಬೆಳಗ್ಗೆ 10.15ರಿಂದ 1.30ರವರೆಗೆ ಪರೀಕ್ಷೆ ನಡೆಯಲಿದೆ. ಅನುತ್ತೀರ್ಣರಾದವರು ಪೂರಕ ಪರೀಕ್ಷೆ ಕೂಡ ಇದೇ ಸಮಯದಲ್ಲಿ ಬರೆಯಬಹುದು. ಪುನರಾವರ್ತಿತ ಅಭ್ಯರ್ಥಿಗಳು ಅಭ್ಯರ್ಥಿಗಳು ಹಾಗೂ ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಕೂಡ ಪರೀಕ್ಷೆ ಬರೆಯಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಇಟಿ ಪರೀಕ್ಷೆ ಯಲ್ಲಿ ಔಟ್ ಆಫ್ ಸಿಲಬಸ್ ವಿಚಾರ ಕೆಇಎ ನಿರ್ದೇಶಕರ ತಲೆದಂಡಸಾಧ್ಯತೆ?
ಸಿಇಟಿ ಪರೀಕ್ಷೆ ಯಲ್ಲಿ ಔಟ್ ಆಫ್ ಸಿಲಬಸ್ ನೀಡಿದ ಹಿನ್ನೆಲೆ ವ್ಯಾಪಕ ವರೋಧ ವ್ಯಕ್ತವಾಗಿದ್ದು, ಕೆಇಎ ನಿರ್ದೇಶಕರ ತಲೆದಂಡ  ಆಗುವ ಸಾಧ್ಯತೆ ಇದೆ. ಕೆಇಎ ನಿರ್ದೇಶಕಿ ರಮ್ಯಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಎತ್ತಗಂಡಿ ಮಾಡಲು ಸಿದ್ಧತೆ ನಡೆಸಿದೆ. ನಿರ್ದೇಶಕಿ ರಮ್ಯಾ ಅವರನ್ನು ವರ್ಗಾವಣೆ ಮಾಡುವಂತೆ ಉನ್ನತ ಶಿಕ್ಷಣ ಸಚಿವ ಸುಧಾಕರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ರಮ್ಯಾ ಎತ್ತಂಗಡಿ ಸಾಧ್ಯತೆ ಹೆಚ್ಚಿದೆ. ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್  ಪ್ರಶ್ನೆಗಳನ್ನು ಪರಿಶೀಲಿಸಿ ವರದಿ ಕೊಡಲು ಸಮಿತಿ ರಚನೆ ಮಾಡಲಾಗಿದೆ. ಸಮಿತಿ ರಚನೆಯಾಗಿ ಮೂರು ದಿನ ಮಾಡಲಾಗಿದ್ದು,  ಮತ್ತೊಂದು ‌ಕಡೆ ಸಮಿತಿಯಲ್ಲಿರುವ ತಜ್ಞರ ಹೆಸರನ್ನ ಬಹಿರಂಗ ಪಡಿಸುವಂತೆ ಎಬಿವಿಪಿ ಒತ್ತಾಯ ಮಾಡಿದೆ.

Follow Us:
Download App:
  • android
  • ios