Asianet Suvarna News Asianet Suvarna News

ಬ್ಯೂಟಿ ವಿತ್‌ ಬ್ರೈನ್‌: 90ರ ದಶಕದಲ್ಲಿಯೇ ಹೈಸ್ಕೂಲ್‌ನಲ್ಲಿ ಶೇ.92% ; ಈಕೆ ದೇಶದ ಕಿರಿಯ ಐಎಎಸ್‌ ಅಧಿಕಾರಿ

ಭಾರತದ ಅತ್ಯಂತ ಕಿರಿಯ ವಯಸ್ಸಿನ ಐಎಎಸ್ ಅಧಿಕಾರಿ ಎಂದು ಖ್ಯಾತಿಯಾಗಿರುವ ಸ್ಮಿತಾ ಸಬರ್‌ವಾಲ್ ಅವರು 90ರ ದಶಕದಲ್ಲಿಯೇ ಪ್ರೌಢಶಾಲೆಯಲ್ಲಿ ಶೇ.92 ಪರ್ಸೆಂಟೇಜ್ ಗಳಿಸಿದ್ದರು.

90s kid IAS smita sabharwal 92 percentage get high school She is youngest IAS officer in India sat
Author
First Published Feb 10, 2024, 8:59 PM IST

ಬೆಂಗಳೂರು (ಫೆ.10): ಬೆಳೆಯುವ ಸಿರಿ ಮೊಳಕೆಯಲ್ಲಿಯೇ ನೋಡು ಎಂಬ ಕನ್ನಡ ಗಾದೆಗೆ ದೇಶದ ಅತ್ಯಂತ ಕಿರಿಯ ಐಎಎಸ್‌ ಅಧಿಕಾರಿಯಾಗಿ ಆಯ್ಕೆಯಾಗಿರುವ ಸ್ಮಿತಾ ಸಬರ್ವಾಲ್ ಸಾಕ್ಷಿಯಾಗಿದ್ದಾರೆ. 90ರ ದಶಕದಲ್ಲಿ ಜಸ್ಟ್ ಪಾಸ್ ಆಗಬೇಕೆಂದುಕೊಳ್ಳುವ ಕಾಲದಲ್ಲಿಯೇ ಹೈಸ್ಕೂಲ್ ಶಿಕ್ಷಣದಲ್ಲಿ ಶೇ.92 ಪರ್ಸೆಂಟೇಜ್ ತೆಗೆದು ದೇಶದಲ್ಲಿ ಉನ್ನತ ಶಿಖರಕ್ಕೇರುವ ಭರವಸೆ ಮೂಡಿಸಿದ್ದರು. ಈಗ ಸ್ಮಿತಾ ಭಾರತೀಯ ನಾಗರಿಕ ಸೇವೆ (ಐಎಎಸ್‌) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಶಿಕ್ಷಣ ವ್ಯವಸ್ಥೆ ತುಂಬಾ ಉತ್ತಮವಾಗಿದೆ. ನಮ್ಮ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಬೋರ್ಡ್‌ ಪರೀಕ್ಷೆಯಲ್ಲಿ ಶೇ.100 ಪ್ರತಿಶತ ಗಳಿಸುವ ವಿದ್ಯಾರ್ಥಿಗಳಿದ್ದಾರೆ. ಆದರೆ, 90ರ ದಶಕದಲ್ಲಿ ಶಿಕ್ಷಣದ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಭಾವನೆ ಹೀಗಿರಲಿಲ್ಲ. ಶೇ.40 ಬಂದರೆ ಸಾಕು ಎನ್ನುವವರಿದ್ದರು. ಇನ್ನು ಕೆಲವರು ಫಸ್ಟ್ ಕ್ಲಾಸ್ ಅಥವಾ ಡಿಸ್ಟಿಂಕ್ಷನ್ ಶೇ.85 ಬಂದ್ರೆ ಸಾಕು ಎನ್ನುವವರಿದ್ದರು. ಆದರೆ, 1995ರಲ್ಲಿಯೇ ಎಸ್ಸೆಸ್ಸೆಲ್ಸಿ ಶಿಕ್ಷಣ ಪೂರೈಸಿದ ಸ್ಮಿತಾ ಸಬರ್‌ವಾಲ್ ಅವರು ಶೇ.92.2 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. 

ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಜಾಮೀನು ರಹಿತ ವಾರೆಂಟ್ ಜಾರಿ

ನವದೆಹಲಿಯ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷಾ ಮಂಡಳಿಯ ವ್ಯಾಪ್ತಿಗೊಳಪಟ್ಟ ಸಿಕಂದರಾಬಾದ್‌ನ ಸೇಂಟ್ ಅನ್ನಾ ಪ್ರೌಢಶಾಲೆಯಲ್ಲಿ ಸ್ಮಿತಾ ಅವರು ಹೈಸ್ಕೂಲ್ ಶಿಕ್ಷಣ ಪೂರೈಸಿದ್ದಾರೆ. ಈ ಬಗ್ಗೆ ಸ್ವತಃ ಸ್ಮಿತಾ ಸಬರ್‌ವಾಲ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಅಂಕಪಟ್ಟಿ ಹಂಚಿಕೊಂಡಿದ್ದಾರೆ. ಒಟ್ಟು 5 ವಿಷಯಗಳನ್ನು ಅಧ್ಯಯನ ಮಾಡಿದ್ದು, ಇಂಗ್ಲೀಷ್ 94, ಹಿಂದಿ 94, ಎಕನಾಮಿಕ್ಸ್ 90, ಸ್ಟ್ರಕ್ಚರ್ ಆಫ್ ಕಾಮರ್ಸ್ 86 ಹಾಗೂ ಪ್ರಿನ್ಸಿಪಲ್ ಆಫ್ ಅಕೌಂಟ್ಸ್ 97 ಅಂಕ ಗಳಿಸಿದ್ದಾಳೆ. ಇನ್ನು ಗ್ರೇಡ್‌ನಲ್ಲಿ 'ಎ' ಗ್ರೇಡ್ ಪಡೆದುಕೊಂಡಿದ್ದಾರೆ.

ಭಾರತದ ಅತ್ಯಂತ ಕಿರಿಯ ಐಎಎಸ್‌ ಅಧಿಕಾರಿ:
ಇನ್ನು ಐಎಎಸ್‌, ಐಪಿಎಸ್‌ ಆಫೀಸರ್‌ ಆಗುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಜ್ಞಾನ, ಶ್ರದ್ಧೆ, ಪರಿಶ್ರಮದ ಅಗತ್ಯವಿದೆ. ಕೆಲವೊಬ್ಬರು ಒಂದೆರಡು ಸಾರಿ ಎಕ್ಸಾಂ ಬರೆದು ಆಗಲ್ಲ ಅಂತ ಬಿಟ್ಟು ಬಿಡುತ್ತಾರೆ. ಆದ್ರೆ, ಇವರು ಬ್ಯೂಟಿ ವಿತ್ ಬ್ರೈನ್ ಅನ್ನುತ್ತಾರಲ್ಲ ಹಾಗೆ.. ಭಾರತದ ಅತ್ಯಂತ ಕಿರಿಯ ಮಹಿಳಾ ಐಎಎಸ್‌ ಅಧಿಕಾರಿಯಾಗಿದ್ದಾರೆ. ಕೇವಲ 22ನೇ ವಯಸ್ಸಿನಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದವರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೂ ಅಲ್ಲದೇ ಉತ್ತಮ ರ್ಯಾಂಕಿಂಗ್ ಪಡೆದುಕೊಂಡಿದ್ದಾರೆ. 

ಮೃಣಾಲ್ ಠಾಕೂರ್‌ಗೆ ಬಾಡಿ ಶೇಮಿಂಗ್ ಕಮೆಂಟ್; ಹೌದು.., ನನ್ನ ತೊಡೆಗಳು ದಪ್ಪಗಿವೆ ಏನಿವಾಗ? ಎಂದ್ರು ನಟಿ

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಜನಿಸಿದ ಸ್ಮಿತಾ ದಾಸ್ ಅವರು ನಿವೃತ್ತ ಸೇನಾ ಕರ್ನಲ್‌ ಮಗಳಾಗಿದ್ದಾರೆ. ಸ್ಮಿತಾ ತಮ್ಮ ಶಾಲಾ ಶಿಕ್ಷಣವನ್ನು ಸೇಂಟ್ ಆನ್ಸ್‌ನಲ್ಲಿ ಮಾಡಿದರು. 12ನೇ ತರಗತಿಯಲ್ಲಿ ಸ್ಮಿತಾ ಕ್ಲಾಸ್ ಟಾಪರ್ ಆಗಿದ್ದರು. ಹೈದರಾಬಾದ್‌ನ ಸೇಂಟ್ ಫ್ರಾನ್ಸಿಸ್‌ನಿಂದ ವಾಣಿಜ್ಯ ಪದವಿ ಪಡೆದರು. ಸ್ಮಿತಾ ಸಬರ್‌ವಾಲ್ ಅವರು 2000ರಲ್ಲಿ ಐಎಎಸ್‌ ಪರೀಕ್ಷೆಯನ್ನು ಪಾಸಾದರು. ಈ ಮೂಲಕ ಕೇವಲ 22 ವರ್ಷಕ್ಕೆ ಯುಪಿಎಸ್‌ಸಿ ಪರೀಕ್ಷೆಗಳನ್ನು ಪಾಸ್ ಮಾಡಿದ ಭಾರತದ ಅತ್ಯಂತ ಕಿರಿಯ ಮಹಿಳಾ ಐಎಎಸ್ ಅಧಿಕಾರಿಯಾಗಿದ್ದಾರೆ. 

ಸ್ಮಿತಾ ಸಬರ್‌ವಾಲ್ ಅವರು ವಾರಂಗಲ್, ವಿಶಾಖಪಟ್ಟಣಂ, ಕರೀಂನಗರ ಮತ್ತು ಚಿತ್ತೂರು ಸೇರಿದಂತೆ ತೆಲಂಗಾಣದ ಹಲವಾರು ಸ್ಥಳಗಳಲ್ಲಿ ಸ್ಮಿತಾ ಸಬರ್‌ವಾಲ್‌ ಅಧಿಕಾರ ನಿರ್ವಹಿಸಿದ್ದಾರೆ. ಸಿಎಂ ಕಚೇರಿಗೆ ನೇಮಕಗೊಂಡ ಅತ್ಯಂತ ಕಿರಿಯ ಅಧಿಕಾರಿ ಎಂಬ ಹೆಗ್ಗಳಿಕೆಗೆ  ಸ್ಮಿತಾ ಸಬರ್‌ವಾಲ್ ಪಾತ್ರರಾಗಿದ್ದಾರೆ. ಐಎಎಸ್ ಅಧಿಕಾರಿ ಸ್ಮಿತಾ ಸಬರ್ವಾಲ್ ಅವರು ಜನರ ಅಧಿಕಾರಿ ಎಂದೇ ಜನಪ್ರಿಯರಾಗಿದ್ದಾರೆ. ಸ್ಮಿತಾ ಅಗರ್‌ವಾಲ್‌ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಆಗಾಗ ತಾವು ಭಾಗವಹಿಸುವ ಕಾರ್ಯಕ್ರಮದ ಫೋಟೋ, ಸೆಲ್ಫೀಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅವರು ಟ್ವಿಟರ್‌ನಲ್ಲಿ 4.18 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

Follow Us:
Download App:
  • android
  • ios