Asianet Suvarna News Asianet Suvarna News

ನೀರಿನ ದರ ಏರಿಕೆ ತಡೆದಿದ್ದೆ, ಶಾಸಕರೇಕೆ ಸುಮ್ಮನಿದ್ದಾರೆ: ಖಾದರ್‌

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾಯಿತ ಸರ್ಕಾರ ಇಲ್ಲದಿದ್ದಾಗ ನನ್ನ ಗಮನಕ್ಕೆ ಬಾರದೆ ಆಡಳಿತಾಧಿಕಾರಿ ಗೃಹ ಬಳಕೆ ಕುಡಿಯುವ ನೀರಿನ ದರ ಏರಿಕೆ ಆದೇಶ ಮಾಡಿದ್ದರು. ಆದರೆ ಈ ಆದೇಶ ಕಾರ್ಯರೂಪಕ್ಕೆ ಬಂದದ್ದೇ ಬಿಜೆಪಿ ಕಾಲದಲ್ಲಿ. ಶಾಸಕ ವೇದವ್ಯಾಸ ಕಾಮತ್‌ ಆಗ ಏಕೆ ಸುಮ್ಮನಿದ್ದರು ಎಂದು ಮಾಜಿ ಉಸ್ತುವಾರಿ ಸಚಿವ, ಶಾಸಕ ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ.

water price increase came in to force during bjp rule says U T Khader
Author
Bangalore, First Published Nov 6, 2019, 10:07 AM IST

ಮಂಗಳೂರು(ನ.06): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾಯಿತ ಸರ್ಕಾರ ಇಲ್ಲದಿದ್ದಾಗ ನನ್ನ ಗಮನಕ್ಕೆ ಬಾರದೆ ಆಡಳಿತಾಧಿಕಾರಿ ಗೃಹ ಬಳಕೆ ಕುಡಿಯುವ ನೀರಿನ ದರ ಏರಿಕೆ ಆದೇಶ ಮಾಡಿದ್ದರು. ಆದರೆ ಈ ಆದೇಶ ಕಾರ್ಯರೂಪಕ್ಕೆ ಬಂದದ್ದೇ ಬಿಜೆಪಿ ಕಾಲದಲ್ಲಿ. ಶಾಸಕ ವೇದವ್ಯಾಸ ಕಾಮತ್‌ ಆಗ ಏಕೆ ಸುಮ್ಮನಿದ್ದರು ಎಂದು ಮಾಜಿ ಉಸ್ತುವಾರಿ ಸಚಿವ, ಶಾಸಕ ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ.

‘ಯು.ಟಿ. ಖಾದರ್‌ ಉಸ್ತುವಾರಿ ಸಚಿವರಾಗಿದ್ದಾಗ ಬಿಲ್‌ ಏರಿಕೆ ಆದೇಶವಾಗಿತ್ತು’ ಎಂಬ ಶಾಸಕ ಕಾಮತ್‌ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ಜೂನ್‌ 15ರಂದು ಪಾಲಿಕೆ ಆಡಳಿತಾಧಿಕಾರಿಯು ನನ್ನ ಗಮನಕ್ಕೆ ತಾರದೆ ನೀರಿನ ಬಿಲ್‌ ಏರಿಕೆ ಮಾಡಿದ್ದರು. ಇದು ನನ್ನ ಗಮನಕ್ಕೆ ಬಂದಾಗ ಆದೇಶ ಜಾರಿಯಾಗದಂತೆ ತಡೆಹಿಡಿದಿದ್ದೆ. ನಾನು ಅಧಿಕಾರದಲ್ಲಿರುವವರೆಗೂ ಆದೇಶ ಪಾಲನೆಗೆ ಅವಕಾಶವನ್ನೇ ಕೊಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಂಗಳೂರು: 'ಬಿಎಸ್‌ವೈ ಶಾಸಕರ ಕುದುರೆ ವ್ಯಾಪಾರದ ಸಿಇಒ'..!

ಬಳಿಕ ಬಿಜೆಪಿ ಅಧಿಕಾರಕ್ಕೆ ಬಂತು. ಆಗ ಪಾಲಿಕೆಗೆ ಹೊಸ ಆಯುಕ್ತರನ್ನು ನಿಯೋಜಿಸಲಾಯಿತು. ಅದರ ನಂತರವೇ ನೀರಿನ ಬಿಲ್‌ ಆದೇಶ ಪಾಲನೆಯಾದದ್ದು. ಅವರದ್ದೇ ಆಳ್ವಿಕೆ ಇದ್ದಾಗ ಬಿಲ್‌ ಏರಿಕೆಯಾದದ್ದನ್ನು ವೇದವ್ಯಾಸ ಕಾಮತ್‌ ಏಕೆ ತಡೆಹಿಡಿಯಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಶಾಸಕರಿಗೆ ನಿಜವಾಗಿಯೂ ಜನತೆಯ ಮೇಲೆ ಕಾಳಜಿ ಇದ್ದರೆ ಪಾಲಿಕೆಯಲ್ಲಿ ಮುಂದಿನ ಚುನಾಯಿತ ಸರ್ಕಾರ ಬಂದು ಸೂಕ್ತ ನಿರ್ಣಯ ಕೈಗೊಳ್ಳುವವರೆಗೆ ಈ ಆದೇಶ ಪಾಲನೆಯನ್ನು ಶಾಸಕನ ನೆಲೆಗಟ್ಟಿನಲ್ಲಿ ನಿಂತು ತಡೆಹಿಡಿಯಲಿ ಎಂದು ಆಗ್ರಹಿಸಿದ್ದಾರೆ.

ಅಮಿತ್ ಶಾಗೆ ತಾಕತ್ತಿದ್ರೆ ಬಿಎಸ್‌ವೈಯನ್ನು ತೆಗೆದು ಬಿಸಾಡಲಿ: ಕಾಂಗ್ರೆಸ್ ನಾಯಕ

ಶಾಸಕ ಕಾಮತ್‌ ತನ್ನ ವಿಫಲತೆಯನ್ನು ಮುಚ್ಚಿಡಲು ಇನ್ನೊಬ್ಬರ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಆರೋಪ ಮಾಡುವ ಮೊದಲು ಕನಿಷ್ಠ ತಿಳುವಳಿಕೆ ಇರಬೇಕಿತ್ತು. ಆದರೆ ಅವರು ಅಷ್ಟೂದಿನಗಳ ಕಾಲ ಕೋಮಾದಲ್ಲಿದ್ದರು ಎಂದು ಖಾದರ್‌ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಅಭಯಚಂದ್ರ ಜೈನ್‌, ಮೊಹಿಯುದ್ದೀನ್‌ ಬಾವ, ಮುಖಂಡರಾದ ಶಾಹುಲ್‌ ಹಮೀದ್‌, ನಿತ್ಯಾನಂದ ಶೆಟ್ಟಿಮತ್ತಿತರರಿದ್ದರು.

ಆಡಿಯೊ ಬಿಡುಗಡೆ ದಕ್ಷಿಣಕನ್ನಡಕ್ಕೆ ಅವಮಾನ

ಸಿಎಂ ಯಡಿಯೂರಪ್ಪ ಆಡಿಯೊ ಬಹಿರಂಗಗೊಳಿಸಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಎನ್ನುವ ಆರೋಪ ಕೇಳಿಬಂದಿರುವುದು ದ.ಕ. ಜಿಲ್ಲೆಗೆ ಆದ ಅವಮಾನ. ಅವರದ್ದೇ ಪಕ್ಷದ ಸಿಎಂ ಆಡಿಯೊ ಹೊರ ಹಾಕುವುದು ಬಿಜೆಪಿಯ ಆಂತರಿಕ ವ್ಯವಸ್ಥೆಯನ್ನು ಹೊರಗೆಡವಿದೆ. ರಾಜ್ಯದಲ್ಲಿ ಪ್ರವಾಹದ ದೊಡ್ಡ ಕಂಟಕ ಎದುರಾಗಿರುವಾಗ ಇವರಿಗೆ ರಾಜಕೀಯವೇ ಮುಖ್ಯವಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್‌ ದೂರಿದ್ದಾರೆ.

Follow Us:
Download App:
  • android
  • ios