Asianet Suvarna News Asianet Suvarna News

ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಹಾಸನದಲ್ಲಿ ಮೂವರು ಅರೆಸ್ಟ್

2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ  ಮೂವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ.

Praveen Nettaru murder case NIA arrests three accused in Hassan gow
Author
First Published May 10, 2024, 12:41 PM IST

ಹಾಸನ (ಮೇ.10): 2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ  ಮೂವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ.

ಸುಳ್ಯ ಮೂಲದ ಮುಸ್ತಾಫ್ ಪೈಚಾರ್, ಸೋಮವಾರಪೇಟೆ ಮೂಲದ ಇಲಿಯಾಸ್ ಹಾಗೂ ಸಿರಾಜ್‌ನ್ನು ವಶಕ್ಕೆ ಪಡೆಯಲಾಗಿದೆ. ಸಕಲೇಶಪುರ ತಾಲೂಕಿನ ಆನೆಮಹಲ್‌ನಲ್ಲಿ ಆರೋಪಿಗಳನ್ನು ಎನ್‌ಐಎ ವಶಕ್ಕೆ ಪಡೆದಿದೆ.

ಕೊಡಗು: SSLC ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿ ಬರ್ಬರ ಹತ್ಯೆ!

ಆನೆಮಹಲ್‌ನ ಸಿರಾಜ್ ಬಳಿ ಕೆಲಸಕ್ಕೆ ಸೇರಿದ್ದ ಮುಸ್ತಾಫಾ ಪೈಚಾರ್ ಹಾಗೂ ಇಲಿಯಾಸ್ ಬಂಧಿಸಿದ್ದು, ಈ  ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸಿರಾಜ್ ಎನ್‌ಐಎ ವಶಕ್ಕೆ ಪಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸುಳ್ಯದ ಶಾಂತಿನಗರ ನಿವಾಸಿ  ಮುಸ್ತಾಫ್ ಪೈಚಾರ್ (43)  ನಾಲ್ಕನೇ ಆರೋಪಿಯಾಗಿದ್ದ.  

ಪ್ರವೀಣ ನೆಟ್ಟಾರು ಕೊಲೆ ನಡೆದ ಸಂದರ್ಭದಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿತ್ತು. ಬಸವರಾಜ್‌ ಬೊಮ್ಮಾಯಿ ಸಿಎಂ ಆಗಿದ್ದರು.  ನಳೀನ್‌ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದರು. ಬಿಜೆಪಿ ಆಡಳಿತದಲ್ಲೇ ತಮ್ಮದೇ ಕಾರ್ಯಕರ್ತನೋರ್ವನ ಹತ್ಯೆ ಇಡೀ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಬಳಿಕ ಬೆಳ್ಳಾರೆಗೆ  ನಳೀನ್‌ ಕುಮಾರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾರು ಅಲ್ಲಾಡಿಸಿ, ಕೆಳಗಿಳಿಯದಂತೆ ಆಕ್ರೋಶ ವ್ಯಕ್ತವಾಗಿತ್ತು. ಇದು ರಾಜ್ಯ ಸರ್ಕಾರದ ಬುಡವೇ ಅಲುಗಾಡುವಂತೆ ಭಯ ಹುಟ್ಟಿಸಿದ ಪ್ರಕರಣವಾಗಿತ್ತು.

ಮಗಳ ಪ್ರೀತಿಗೆ ಅಡ್ಡ ನಿಂತು ಭಗ್ನಪ್ರೇಮಿಗೆ ಚಾಕು ಇರಿದ ಅಪ್ಪ, ಬಿಡಿಸಲು ಬಂದ ಸಹೋದರನೂ ಬಲಿ!

 2022ರ ನವೆಂಬರ್‌ನಲ್ಲಿ ಮೊಹಮ್ಮದ್‌ ಮುಸ್ತಾಫ್‌ ಪೈಚಾರ್‌ ತಲೆಮರೆಸಿಕೊಂಡಿದ್ದ. ಈತನೂ ಸೇರಿದಂತೆ ಉಮರ್‌ ಫಾರೂಕ್‌, ತುಫೈಲ್‌, ಅಬೂಬಕ್ಕರ್‌ ಸಿದ್ದಿಕ್‌ ಪತ್ತೆಗೆ ಒಟ್ಟು 14 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು. ಈ ಪೈಕಿ ಮಡಿಕೇರಿ ನಿವಾಸಿ ತುಫೈಲ್‌ ನನ್ನು ಈ ಹಿಂದೆ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

Follow Us:
Download App:
  • android
  • ios