Asianet Suvarna News Asianet Suvarna News

IPL 2024 ಚೆನ್ನೈ ಸೂಪರ್ ಕಿಂಗ್ಸ್ vs ಲಖನೌ ಸೂಪರ್ ಜೈಂಟ್ಸ್: ಸ್ಪಿನ್ ಅಖಾಡದಲ್ಲಿ ಗೆಲ್ಲೋರ್ಯಾರು?

ಚೆನ್ನೈ ತಂಡದಲ್ಲಿ ಉತ್ತಮ ಗುಣಮಟ್ಟದ ಬೌಲರ್‌ಗಳಿದ್ದು, ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಲಖನೌ ಬ್ಯಾಟರ್‌ಗಳಿಗೆ ಭಾರಿ ಸವಾಲು ಎದುರಾಗಬಹುದು. ಜಡೇಜಾ ಜೊತೆ ಹೆಚ್ಚುವರಿ ಸ್ಪಿನ್ನರ್‌ ಆಗಿ ತೀಕ್ಷಣ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಪ್ರಮುಖ ಬ್ಯಾಟರ್‌ ಶಿವಂ ದುಬೆ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

IPL 2024 Lucknow Super Giants take on Chennai Super Giants challenge  kvn
Author
First Published Apr 19, 2024, 12:58 PM IST

ಲಖನೌ: 17ನೇ ಆವೃತ್ತಿ ಐಪಿಎಲ್‌ನಲ್ಲಿ ಶುಕ್ರವಾರ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಲಖನೌ ಸೂಪರ್‌ ಜೈಂಟ್ಸ್‌ ಸವಾಲು ಎದುರಾಗಲಿದ್ದು, ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಸತತ 2 ಸೋಲು ಕಂಡಿರುವ ಲಖನೌ ಸೂಪರ್ ಜೈಂಟ್ಸ್ ತವರಿನ ಅಂಕಗಳದಲ್ಲಿ ಗೆಲ್ಲುವ ಮೂಲಕ ಜಯದ ಹಳಿಗೆ ಮರಳುಕ ಕಾತರದಲ್ಲಿದೆ. ಈ ಬಾರಿ ಚೆನ್ನೈ 6ರಲ್ಲಿ 4 ಪಂದ್ಯ ಗೆದ್ದಿದ್ದರೆ, ಲಖನೌ 3 ಗೆಲುವು ದಾಖಲಿಸಿವೆ.

ಚೆನ್ನೈ ತಂಡದಲ್ಲಿ ಉತ್ತಮ ಗುಣಮಟ್ಟದ ಬೌಲರ್‌ಗಳಿದ್ದು, ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಲಖನೌ ಬ್ಯಾಟರ್‌ಗಳಿಗೆ ಭಾರಿ ಸವಾಲು ಎದುರಾಗಬಹುದು. ಜಡೇಜಾ ಜೊತೆ ಹೆಚ್ಚುವರಿ ಸ್ಪಿನ್ನರ್‌ ಆಗಿ ತೀಕ್ಷಣ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಪ್ರಮುಖ ಬ್ಯಾಟರ್‌ ಶಿವಂ ದುಬೆ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಬಗ್ಗೆ ಅಚ್ಚರಿ ಅಭಿಪ್ರಾಯ ತಿಳಿಸಿದ ರೋಹಿತ್ ಶರ್ಮಾ..!

ಮತ್ತೊಂದೆಡೆ ಲಖನೌ ಅಸ್ಥಿರ ಆಟವಾಡುತ್ತಿದ್ದು, ಹ್ಯಾಟ್ರಿಕ್‌ ಸೋಲು ತಪ್ಪಿಸಲು ಎದುರು ನೋಡುತ್ತಿದೆ. ಕಳೆದೆರಡು ಪಂದ್ಯಗಳಿಗೆ ಗೈರಾಗಿದ್ದ ಪ್ರಚಂಡ ವೇಗಿ ಮಯಾಂಕ್‌ ಯಾದವ್‌ ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ಪೂರನ್‌ ಮಾತ್ರ ಮಿಂಚುತ್ತಿದ್ದು, ನಾಯಕ ಕೆ.ಎಲ್‌.ರಾಹುಲ್‌ ಸ್ಟ್ರೈಕ್‌ರೇಟ್‌ ಹೆಚ್ಚಿಸುವತ್ತ ಗಮನಹರಿಸಬೇಕಿದೆ.

ಒಟ್ಟು ಮುಖಾಮುಖಿ: 03

ಚೆನ್ನೈ: 01

ಲಖನೌ: 01

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್‌ ಗಾಯಕ್ವಾಡ್(ನಾಯಕ), ರಚಿನ್‌ ರವೀಂದ್ರ, ಅಜಿಂಕ್ಯ ರಹಾನೆ, ಡ್ಯಾರಿಲ್‌ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂ ಎಸ್ ಧೋನಿ, ಶಾರ್ದೂಲ್‌ ಠಾಕೂರ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್‌ ರೆಹಮಾನ್.

ಲಖನೌ ಸೂಪರ್ ಜೈಂಟ್ಸ್‌: ಕ್ವಿಂಟನ್ ಡಿ ಕಾಕ್‌, ಕೆ ಎಲ್ ರಾಹುಲ್‌(ನಾಯಕ), ದೀಪಕ್ ಹೂಡಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರನ್‌, ಕೃನಾಲ್‌ ಪಾಂಡ್ಯ, ರವಿ ಬಿಷ್ಣೋಯ್‌, ಮೊಹ್ಸಿನ್‌ ಖಾನ್, ಶಾಮರ್‌, ಯಶ್‌ ಠಾಕೂರ್.

ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

Follow Us:
Download App:
  • android
  • ios