Asianet Suvarna News Asianet Suvarna News

IPL 2024 ಚೆನ್ನೈ ಸೂಪರ್ ಕಿಂಗ್ಸ್ - ಗುಜರಾತ್ ಟೈಟಾನ್ಸ್ ನಡುವೆ ಇಂದು ಬಿಗ್ ಫೈಟ್

5 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದಿದ್ದರೆ, ಮುಂಬೈಯನ್ನು ಮಣಿಸಿ ಗುಜರಾತ್‌ ಶುಭಾರಂಭ ಮಾಡಿತ್ತು. ಚೆನ್ನೈನ ಋತುರಾಜ್‌ ಗಾಯಕ್ವಾಡ್‌ ಮತ್ತು ಗುಜರಾತ್‌ನ ಶುಭ್‌ಮನ್‌ ಗಿಲ್‌ ಇಬ್ಬರೂ ಮೊದಲ ಬಾರಿ ಐಪಿಎಲ್‌ನಲ್ಲಿ ನಾಯಕತ್ವ ವಹಿಸುತ್ತಿದ್ದು, ಗೆಲುವಿನ ಓಟ ಮುಂದುವರಿಸುವ ಕಾತರದಲ್ಲಿದ್ದಾರೆ.

IPL 2024 Chennai Super Kings take on Gujarat Titans in Chennai kvn
Author
First Published Mar 26, 2024, 8:48 AM IST

ಚೆನ್ನೈ(ಮಾ.26): ಇಬ್ಬರು ಯುವ ನಾಯಕರೊಂದಿಗೆ ಕಣಕ್ಕಿಳಿದಿರುವ, ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿರುವ, ಕ್ರಮವಾಗಿ ಕಳೆದೆರಡು ಆವೃತ್ತಿಗಳ ಚಾಂಪಿಯನ್‌ ತಂಡಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ಮಂಗಳವಾರ ಪರಸ್ಪರ ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಇಲ್ಲಿನ ಚೆಪಾಕ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

5 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದಿದ್ದರೆ, ಮುಂಬೈಯನ್ನು ಮಣಿಸಿ ಗುಜರಾತ್‌ ಶುಭಾರಂಭ ಮಾಡಿತ್ತು. ಚೆನ್ನೈನ ಋತುರಾಜ್‌ ಗಾಯಕ್ವಾಡ್‌ ಮತ್ತು ಗುಜರಾತ್‌ನ ಶುಭ್‌ಮನ್‌ ಗಿಲ್‌ ಇಬ್ಬರೂ ಮೊದಲ ಬಾರಿ ಐಪಿಎಲ್‌ನಲ್ಲಿ ನಾಯಕತ್ವ ವಹಿಸುತ್ತಿದ್ದು, ಗೆಲುವಿನ ಓಟ ಮುಂದುವರಿಸುವ ಕಾತರದಲ್ಲಿದ್ದಾರೆ.

ಚೆನ್ನೈನ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದ್ದು, ರಚಿನ್‌ ರವೀಂದ್ರ, ಡ್ಯಾರಿಲ್‌ ಮಿಚೆಲ್‌, ಶಿವಂ ದುಬೆ, ರವೀಂದ್ರ ಜಡೇಜಾ ಲಯ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ. ಮುಸ್ತಾಫಿಜುರ್‌ ರಹಮಾನ್‌ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದು, ಈ ಪಂದ್ಯದಲ್ಲಿ ತುಷಾರ್‌ ದೇಶಪಾಂಡೆ ಬದಲು ಶಾರ್ದೂಲ್‌ ಠಾಕೂರ್‌ ಅಥವಾ ಮುಕೇಶ್‌ ಚೌಧರಿ ಕಣಕ್ಕಿಳಿಯಬಹುದು.

ಅತ್ತ ಗುಜರಾತ್‌ ಟೈಟಾನ್ಸ್ ಕಳೆದ ಆವೃತ್ತಿ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಈ ಪಂದ್ಯದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಆಡುವ ಸಾಧ್ಯತೆಯಿದೆ. ಶುಭ್‌ಮನ್ ಗಿಲ್‌, ಸಾಯಿ ಸುದರ್ಶನ್‌, ರಶೀದ್‌ ಖಾನ್ ಪ್ರದರ್ಶನ ನಿರ್ಣಾಯಕವೆನಿಸಿದೆ.

ಒಟ್ಟು ಮುಖಾಮುಖಿ: 05

ಚೆನ್ನೈ: 03

ಗುಜರಾತ್‌: 02

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್‌ ಗಾಯಕ್ವಾಡ್(ನಾಯಕ), ರಚಿನ್‌ ರವೀಂದ್ರ, ಅಜಿಂಕ್ಯ ರಹಾನೆ, ಡ್ಯಾರಿಲ್‌ ಮಿಚೆಲ್‌, ರವೀಂದ್ರ ಜಡೇಜಾ, ಸಮೀರ್‌ ರಿಜ್ವಿ, ಎಂ ಎಸ್ ಧೋನಿ, ದೀಪಕ್‌ ಚಹರ್, ಮಹೀಶ್ ತೀಕ್ಷಣ, ತುಷಾರ್‌ ದೇಶಪಾಂಡೆ/ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್‌ ರೆಹಮಾನ್.

ಗುಜರಾತ್ ಟೈಟಾನ್ಸ್: ಶುಭ್‌ಮನ್ ಗಿಲ್‌(ನಾಯಕ), ವೃದ್ದಿಮಾನ್ ಸಾಹ, ಸಾಯಿ ಸುದರ್ಶನ್‌, ಡೇವಿಡ್ ಮಿಲ್ಲರ್‌, ಅಜ್ಮತುಲ್ಲಾ ಓಮರ್ಝೈ, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ಉಮೇಶ್‌ ಯಾದವ್, ಸಾಯಿ ಕಿಶೋರ್‌, ಸ್ಪೆನ್ಸರ್‌ ಜಾನ್ಸನ್, ಮೋಹಿತ್‌ ಶರ್ಮಾ.

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.
 

Follow Us:
Download App:
  • android
  • ios