Asianet Suvarna News Asianet Suvarna News

ಸೈಡ್ ರೋಲಲ್ಲಿ ಆ್ಯಕ್ಟ್ ಮಾಡಿ, ಹೀರೋಯಿನ್‌ ಆಗಿ ಚಿತ್ರರಂಗವನ್ನಾಳಿದ ನಟಿಯರಿವರು!

ಇಂದು ಜನಪ್ರಿಯತೆಯ ಉತ್ತಂಗದಲ್ಲಿರುವ ಹಲವು ಹೀರೋಯಿನ್‌ ಗಳು ಹಿಂದೊಮ್ಮೆ ಚಿಕ್ಕಪುಟ್ಟ ಪಾತ್ರಗಳಲ್ಲಿಯೂ ನಟಿಸಿದ್ದರು. ಅಂತಹ ಪ್ರಮುಖ 8 ತಾರೆಯರು ತಮ್ಮ ಮೊದಲ ಚಿತ್ರಗಳಲ್ಲಿ ಎಕ್ಟ್ರಾ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು. ಅವರ್ಯಾರು ಗೊತ್ತಾ?
 

Some of top Indian heroines who started their journey with extra actor sum
Author
First Published Apr 15, 2024, 5:27 PM IST

ಚಿತ್ರರಂಗದಲ್ಲಿ ಮಿಂಚಬೇಕು ಎನ್ನುವ ಆಸೆಯಿಂದ ಬಹಳಷ್ಟು ಯುವಕ-ಯುವತಿಯರು ಈ ಕ್ಷೇತ್ರಕ್ಕೆ ಬರುತ್ತಾರೆ. ಇಂದಿನ ದಿನಗಳಲ್ಲಿ ಪ್ರತಿಭೆಯೊಂದಿದ್ದರೆ ಅಲ್ಲಿ ಅವಕಾಶಗಳು ಸಿಗುವ ಸಾಧ್ಯತೆ ಸಾಕಷ್ಟಿದೆ. ಆದರೆ, ಪ್ರತಿಭೆ ಇದ್ದರೂ ಅವಕಾಶಗಳಿಗಾಗಿ ಪ್ರಯತ್ನಿಸಿ ಸೋತು ಹೋದವರು ಎಷ್ಟೋ ಮಂದಿ. ಹಿಂದೆಲ್ಲ ಚಿತ್ರರಂಗದಲ್ಲಿ ಅವಕಾಶ ಕೊಡಿಸುತ್ತೇನೆಂದು ಹೇಳುತ್ತ ಯುವತಿಯರಿಗೆ ಮೋಸ ಮಾಡುವ ಜನ ಬಹಳಷ್ಟಿದ್ದರು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಆ ರೀತಿ ಮೋಸ ಹೋಗುವ ಸಂದರ್ಭಗಳು ಕಡಿಮೆಯಾಗಿವೆ. ಆದರೂ ಅವಕಾಶ ಗಿಟ್ಟಿಸುವುದು ಸುಲಭವಲ್ಲ. ಹೀಗಾಗಿ, ಮೊದಲು ಯಾವುದಾದರೊಂದು ಚಿಕ್ಕಪುಟ್ಟ ರೋಲ್‌ ನಲ್ಲಾದರೂ ಸರಿ, ಮೊದಲು ನಟಿಸಬೇಕು, ಆ ಬಳಿಕ ಒಂದೊಂದೇ ಹೆಜ್ಜೆಯಿಡುತ್ತ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲವುಳ್ಳವರು ಸಾಕಷ್ಟಿದ್ದಾರೆ. ಇಂದು ಪ್ರಖ್ಯಾತರಾಗಿರುವ ಹಲವು  ಟಾಪ್‌ ಹೀರೋಯಿನ್‌ ಗಳು ಹಿಂದೆ ಸಹ ಸಣ್ಣದೊಂದು ಪಾತ್ರದಲ್ಲಿ ನಟಿಸಿರುವವರಿದ್ದಾರೆ. ಏಕಾಏಕಿ ಹೀರೋಯಿನ್‌ ಪಾತ್ರದಲ್ಲೇ ನಟಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಮೊದಲು ಚಿಕ್ಕಪಾತ್ರದಲ್ಲೇ ನಟಿಸಿದರೂ ಕೊನೆಗೆ ಟಾಪ್‌ ಹೀರೋಯಿನ್‌ ಆಗಿರುವ ಆ ಪ್ರಮುಖ ಹೆಸರುಗಳು ಯಾವುವು ಗೊತ್ತಾ? ಅವರು ಎಕ್ಸ್ಟ್ರಾ ಕಲಾವಿದರಾಗಿ ಅಥವಾ ಪೋಷಕ ಪಾತ್ರಗಳಲ್ಲಿ ಮೊದಲು ಕಾಣಿಸಿಕೊಂಡಿದ್ದರು ಎನ್ನುವುದು ವಿಶೇಷ.
 
•    ಮುಮ್ತಾಜ್‌ (Mumtaz)
ಹಿಂದಿ (Hindi) ಚಿತ್ರರಂಗ (Film) ಕಂಡ ಪ್ರತಿಭಾವಂತ ನಟಿಯರಲ್ಲಿ ಮುಮ್ತಾಜ್‌ ಒಬ್ಬರು. ತುಂಬುಕೆನ್ನೆಯ, ಮುದ್ದುಮುಖದ ಮುಮ್ತಾಜ್‌ ಪ್ರಮುಖ ಹೀರೋಗಳೊಂದಿಗೆ ನಟಿಸಿದ್ದಾರೆ. “ಫೌಲಾದ್‌’ ಚಿತ್ರದಲ್ಲಿ ಲೀಡ್‌ ರೋಲ್‌ (Lead Role) ದೊರೆಯುವುದಕ್ಕೂ ಮುನ್ನ ಅವರು “ಸ್ತ್ರೀʼ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಎಕ್ಸ್ಟ್ರಾ ಕಲಾವಿದರಾಗಿ ಬಣ್ಣ ಹಚ್ಚಿದ್ದರು. ಇವರು ಎರಡು ಫಿಲಂಫೇರ್‌ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಹಿಂದಿ ಚಿತ್ರರಂಗ ಸದಾಕಾಲ ನೆನಪಿಡುವ “ದೋ ರಾಸ್ತೇಂʼ, “ಆಪ್‌ ಕಿ ಕಸಂʼ, “ಬ್ರಹ್ಮಚಾರಿʼ ಮುಂತಾದ ಚಿತ್ರಗಳಲ್ಲಿ ಮುಮ್ತಾಜ್‌ ಲೀಡ್‌ ಪಾತ್ರಗಳಲ್ಲಿ ಇದ್ದಾರೆ.

ಬಿಂಕದ ಸಿಂಗಾರಿ... ಡಾ.ರಾಜ್​ ಹಾಡಿಗೆ ಸೀತಾ-ರಾಮ ಮಾಡರ್ನ್​ ಸ್ಟೆಪ್​: ಮನಸೋತ ಅಭಿಮಾನಿಗಳು

•    ತ್ರಿಷಾ ಕೃಷ್ಣನ್‌ (Trisha Krishnan)
ದಕ್ಷಿಣ ಭಾರತದ (South India) ಸಿನಿಮಾ ಕ್ವೀನ್‌ ಎನಿಸಿಕೊಂಡಿರುವ ತಾರೆ ತ್ರಿಷಾ ಕೃಷ್ಣನ್‌, “ಜೋಡಿʼ ಎನ್ನುವ ಸಿನಿಮಾದಲ್ಲಿ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕವೇ ಅವರಿಗೆ ಹೀರೋಯಿನ್‌ (Heroine) ಪಾತ್ರ ದೊರೆತದ್ದು.

•    ಕಾಜಲ್‌ ಅಗರ್ವಾಲ್‌ (Kajal Agarwal)
ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚಿರುವ ಕಾಜಲ್‌ ಅಗರ್ವಾಲ್‌ ಪ್ರಮುಖ ನಟಿಯಾಗುವುದಕ್ಕೂ ಮೊದಲು ಐಶ್ವರ್ಯಾ ರೈ ನಟನೆಯ “ಕ್ಯೂಂ ಹೋಗಯಾ ನಾʼ ಎನ್ನುವ ಚಿತ್ರದಲ್ಲಿ ಎಕ್ಸ್ಟ್ರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

•    ವಮಿಕಾ ಗಬ್ಬಿ (Wamica Gabbi)
ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ವಮಿಕಾ ಗಬ್ಬಿ “ಜಬ್‌ ವಿ ಮೆಟ್‌ʼ ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ನಟಿಸಿದ್ದರು. ನಾಲ್ಕಾರು ಮಂದಿ ಹುಡುಗಿಯರು (Girls) ಇರುವ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದರು.

•    ಸಾಯಿ ಪಲ್ಲವಿ (Sai Pallavi)
ದಕ್ಷಿಣ ಭಾರತದ ಹೆಸರಾಂತ ನಟಿ ಸಾಯಿಪಲ್ಲವಿ. ನೈಸರ್ಗಿಕ ಬ್ಯೂಟಿ ಎಂದೇ ಅವರನ್ನು ಕರೆಯಲಾಗುತ್ತದೆ. ನಟಿ ಕಂಗನಾ ರಣಾವತ್‌ ಅವರ “ಧೂಮ್‌ ಧಾಮ್‌ʼ ಎನ್ನುವ ಚಿತ್ರದಲ್ಲಿ ಅವರು ಪುಟ್ಟ (Small) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರು ವೃತ್ತಿಯಲ್ಲಿ ವೈದ್ಯೆ. ಜಾರ್ಜಿಯಾ ವಿವಿಯಲ್ಲಿ ಓದುತ್ತಿರುವಾಗಲೇ ಹೀರೋಯಿನ್‌ ಆಗಿ ಮೊದಲ ಸಿನಿಮಾ “ಪ್ರೇಮಂʼನಲ್ಲಿ ನಟಿಸಿದರು.

ಬಾಲಿವುಡ್​ ಸ್ಟಾರ್​ ನಟರ ಇನ್ನೊಂದು ಮುಖ ಅನಾವರಣಗೊಳಿಸಿದ ನಟಿ ವಿದ್ಯಾ ಬಾಲನ್​

•    ಕೃತಿ ಶೆಟ್ಟಿ (Kriti Shetty)
ತಮಿಳು, ತೆಲುಗು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕರಾವಳಿ ಬೆಡಗಿ ಕೃತಿ ಶೆಟ್ಟಿ ಹೃತಿಕ್‌ ರೋಷನ್‌ ಅಭಿನಯದ “ಸೂಪರ್‌ 30ʼ ಸಿನಿಮಾದಲ್ಲಿ (Cinema) ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ತಮ್ಮ 10ನೇ ವಯಸ್ಸಿನಲ್ಲೇ ಜಾಹೀರಾತಲ್ಲೂ ನಟಿಸಿದ್ದರು. 

•    ಶ್ರೀಲೀಲಾ (Shrileela)
ದಕ್ಷಿಣ ಭಾರತದ ಮತ್ತೊಂದು ಪ್ರಮುಖ ಹೆಸರು ಶ್ರೀಲೀಲಾ. ಪ್ರಮುಖ ಪಾತ್ರಗಳಲ್ಲಿ ನಟಿಸುವುದಕ್ಕೂ ಮುನ್ನ “ಚಿತ್ರಾಂಗದಾʼ ಸಿನಿಮಾದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದರು.
 

Follow Us:
Download App:
  • android
  • ios