ಮಹಿಳೆಯಿಂದ ಮಹಿಳೆಯರಿಗಾಗಿ: ಬಜೆಟ್ ನಮ್ಮದೇ ಮಕ್ಕಳ ಭವಿಷ್ಯಕ್ಕಾಗಿ!
ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020 ಮಂಡನೆ ಆರಂಭ| ಬಜೆಟ್ ಭಾಷಣ ಓದುತ್ತಿರುವ ನಿರ್ಮಲಾ ಸೀತಾರಾಮನ್| ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ವಿಶೇಷ ಯೋಜನೆ ಘೋಷಣೆ| ಬೇಟಿ ಪಡಾವೋ ಕಾರ್ಯಕ್ರಮ ಯಶಸ್ವೀ ಅನುಷ್ಠಾನಕ್ಕೆ ಒತ್ತು| 10 ಕೋಟಿ ಕುಟುಂಬಕ್ಕೆ ಪೌಷ್ಠಿಕ ಆಹಾರ ಪೂರೈಕೆಗೆ ಆದ್ಯತೆ| ಮಹಿಳೆಯರ ಬಲವರ್ಧನೆಗೆ 28,600 ಕೋಟಿ ರೂ ಮೀಸಲು|
ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ದೇಶದ ಮಹಿಳಾ ಸಮುದಾಯದತ್ತ ತಮ್ಮ ಚಿತ್ತ ಹರಿಸಿರುವ ನಿರ್ಮಲಾ ಸೀತಾರಾಮನ್, ಮಹಿಳಾ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ.
ಸಾಮಾಜಿಕ ಕಾಳಜಿ ಕ್ಷೇತ್ರ-ಕೇರಿಂಗ್ ಸೊಸೈಟಿ ಪ್ರಾರಂಭ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಕ್ಕೆ ಉತ್ತೇಜನ, ಬೇಟಿ ಪಡಾವೋ ಕಾರ್ಯಕ್ರಮ ಯಶಸ್ವೀ ಅನುಷ್ಠಾನಕ್ಕೆ ನಿರ್ಮಲಾ ಒತ್ತು ನೀಡಿದ್ದಾರೆ.
ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಶುರು: ಪ್ರಯಾಣ ಇನ್ನು ಸುಲಭ ಗುರು!
ಬಾಲಕರಿಗಿಂತ ಬಾಲಕಿಯರ ಶಿಕ್ಷಣದಲ್ಲಿಯೇ ಪ್ರಗತಿಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, 10 ಕೋಟಿ ಕುಟುಂಬಕ್ಕೆ ಪೌಷ್ಠಿಕ ಆಹಾರ ಪೂರೈಕೆಗೆ ಆದ್ಯತೆ ನೀಡಿದ್ದಾರೆ. 6 ಲಕ್ಷ ಅಂಗನವಾಡಿಗಳಲ್ಲಿ ಸ್ಮಾರ್ಟ್ ಫೋನ್ ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಪೌಷ್ಠಿಕ ಆಹಾರ ಪೂರೈಕೆ ಯೋಜನೆಗೆ 35,600 ಕೋಟಿ ರೂ. ಮೀಸಲಿಡಲಗಿದೆ.
ಮಹಿಳೆಯರ ಬಲವರ್ಧನೆಗೆ 28,600 ಕೋಟಿ ರೂ ಮೀಸಲಿಡಲಾಗಿದ್ದು, ಪರಿಶಿಷ್ಟ ಜಾತಿ ಅಭಿವೃದ್ಧಿಗೆ 85,000 ಕೋಟಿ ರೂ., ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 53,700 ಕೋಟಿ ರೂ. ಹಾಗೂ ದಿವ್ಯಾಂಗರ ಅಭಿವೃದ್ಧಿಗಾಗಿ 59 ಸಾವಿರ ಕೋಟಿ ರೂ. ಅನುದಾನ ಘೋಷಿಸಲಾಗಿದೆ.
ಇನ್ಮುಂದೆ ಆನ್‌ಲೈನ್ ಡಿಗ್ರಿ ವ್ಯವಸ್ಥೆ: ವಿದ್ಯಾರ್ಥಿ ಸಮುದಾಯಕ್ಕೆ ಬಂಪರ್!
"