Asianet Suvarna News Asianet Suvarna News

Lok Sabha Election 2024: ಮೋದಿ ಮೂರನೇ ಬಾರಿ ಗೆದ್ರೆ ಈ ಎಲ್ಲಾ ಸ್ಟಾಕ್‌ಗಳದ್ದು ಮಿಂಚಿನ ಓಟ ಅಂತಾರೆ ತಜ್ಞರು!

ಬಿಜೆಪಿಯ ಚುನಾವಣೆಯ ಪ್ರಣಾಳಿಕ ಸ್ಟಾಕ್‌ ಮಾರ್ಕೆಟ್‌ ತಜ್ಷರ ಗಮನಸೆಳೆದಿದೆ. ಹಾಗೇನಾದರೂ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಗೆಲುವು ಸಾಧಿಸಿದಲ್ಲಿ ಯಾವೆಲ್ಲಾ ಕ್ಷೇತ್ರದ ಯಾವೆಲ್ಲಾ ಸ್ಟಾಕ್‌ಗಳು ಲಾಭ ಮಾಡಿಕೊಳ್ಳಬಹುದು ಎನ್ನುವ ಮಾಹಿತಿ ನೀಡಿದ್ದಾರೆ.
 

Lok Sabha Election 2024 PM Modi wins a third term These stocks may benefit says PhillipCapital san
Author
First Published Apr 16, 2024, 4:21 PM IST

ನವದೆಹಲಿ (ಏ.16): ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯಾದ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದೆ. ಇದರ ಬೆನ್ಲಲಿಯೇ ಮಾರುಕಟ್ಟೆ ವಿಶ್ಲೇಷಕ ಕಂಪನಿಯಾದ ಫಿಲಿಪ್‌ ಕ್ಯಾಪಿಟಲ್‌, ಪ್ರಣಾಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಆಶ್ವಾಸನೆಯ ಮೇಲೆ ಕೆಲವೊಂದು ಷೇರುಗಳನ್ನು ಶಾರ್ಟ್‌ಲಿಸ್ಟ್‌ ಮಾಡಿದೆ. ಅಂಬುಜಾ ಸಿಮೆಂಟ್‌ನಿಂದ ಟಾಟಾ ಮೋಟಾರ್ಸ್‌ವರೆಗೆ, ಗುಜರಾತ್‌ ಗ್ಯಾಸ್‌ನಿಂದ ಸುವೇನ್‌ ಫಾರ್ಮಾವರೆಗೆ ಎಲ್ಲಾ ಹಾಟ್‌ ಸ್ಟಾಕ್‌ಗಳನ್ನು ಕಂಪನಿ ಪಟ್ಟಿ ಮಾಡಿದೆ. ಆಟೋಮೊಬೈಲ್ಸ್‌, ಸಿಮೆಂಟ್ಸ್‌, ಮೆಟಲ್‌, ರಿಯಲ್‌ ಎಸ್ಟೇಟ್‌, ಫೈನಾನ್ಶಿಯಲ್‌, ಫಾರ್ಮಾಸ್ಯುಟಿಕಲ್‌, ಹೋಟೆಲ್‌ ಹಾಗೂ ಏರ್‌ಲೈನ್‌ ವಲಯಗಳು ಮೋದಿ ಮೂರನೇ ಟರ್ಮ್‌ನಲ್ಲಿ ದೊಡ್ಡ ಮಟ್ಟದ ಬೆಂಬಲ ಪಡೆದುಕೊಳ್ಳಲಿವೆ. ಆ ಕಾರಣಕ್ಕಾಗಿ ವಲಯದ ಸ್ಟಾಕ್‌ಗಳಲ್ಲಿ ದೊಡ್ಡ ಮಟ್ಟದ ಏರಿಕೆ ಕಾಣಬಹುದು ಎಂದು ಅಂದಾಜಿಸಲಾಗಿದೆ. ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಚುನಾವಣೆಯಲ್ಲಿ ಗೆದ್ದರೆ ಮತ್ತು ಹೊಸ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಿದರೆ ಕೆಳಗೆ ಪಟ್ಟಿ ಮಾಡಲಾದ ಷೇರುಗಳು ಪ್ರಯೋಜನ ಪಡೆದುಕೊಳ್ಳಬಹುದು ಎನ್ನಲಾಗಿದೆ.

ಬಿಜೆಪಿಯ ಚುನಾವಣಾ ಪ್ರಣಾಳಿಕೆಯು ನೀತಿಯ ಮುಂದುವರಿಕೆಯನ್ನು ಸೂಚಿಸಿದೆ. ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದ ಸ್ಪಷ್ಟತೆ, ಆತ್ಮವಿಶ್ವಾಸ ಇರುವ ಕಾರಣ ಮಾರುಕಟ್ಟೆಯಲ್ಲಿ ಇದು ಲಾಭವಾಗಬಹುದು ಎನ್ನಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ವಲಯಗಳು ಮತ್ತು ವಿಭಾಗಗಳಾದ್ಯಂತ ವಿಶಾಲ-ಆಧಾರಿತ ಗಮನವನ್ನು ನಾವು ನಿರೀಕ್ಷಿಸುತ್ತೇವೆ. ಹೀಗಾಗಿ, ನಾವು ದೀರ್ಘಾವಧಿಯ ದೃಷ್ಟಿಕೋನದಿಂದ ಭಾರತದ ಆರ್ಥಿಕತೆ ಮತ್ತು ಷೇರುಗಳ ವಿಚಾರದಲ್ಲಿ ಬುಲ್ಲಿಶ್‌ ಆಗಿದ್ದೇವೆ ಎಂದು ಬ್ರೋಕರೇಜ್ ಹೇಳಿದೆ. 2030 ರ ಹಣಕಾಸು ವರ್ಷದಲ್ಲಿ, ಫಿಲಿಪ್ ಕ್ಯಾಪಿಟಲ್ ಭಾರತವು $ 6.7 ಟ್ರಿಲಿಯನ್ ಆರ್ಥಿಕತೆಯನ್ನು ನಿರೀಕ್ಷೆ ಮಾಡಿದ್ದು, ನಿಫ್ಟಿ 50 ಸೂಚ್ಯಂಕವು 40,000 ದಾಟುವ ಅಂದಾಜು ಮಾಡಿದೆ.

ಫಿಲಿಪ್ ಕ್ಯಾಪಿಟಲ್ ಪ್ರಕಾರ ಹೆಚ್ಚು ಲಾಭ ಪಡೆಯುವ ಸಾಧ್ಯತೆಯಿರುವ ಷೇರುಗಳು ಮತ್ತು ವಲಯಗಳ ಪಟ್ಟಿ:
ಕೈಗೆಟುಕುವ ವಸತಿ (AH):
ಹುಡ್ಕೋದಂಥ ಸಾಲದಾತ ಸರ್ಕಾರಿ ಕಂಪನಿಗಳು, ಲೋಹಗಳು (ಪ್ರಮುಖ ಸ್ಟೀಲ್‌ ಕಂಪನಿಗಳು), ಕೈಗೆಟುಕುವ ಮನೆಗಳಿಗೆ ಸಾಲವನ್ನು ನೀಡುವ ಎನ್‌ಬಿಎಫ್‌ಸಿಗಳು, ಸಿಮೆಂಟ್ (ಅಲ್ಟ್ರಾಟೆಕ್ ಮತ್ತು ಅಂಬುಜಾ ಸಿಮೆಂಟ್) ವಲಯಗಳಿಗೆ ಪಾಸಿಟಿವ್‌ ಅಂಶವಾಗಿದೆ.

ಪ್ರವಾಸೋದ್ಯಮ: ಹೋಟೆಲ್‌ ಸ್ಟಾಕ್‌ಗಳು (ಇಂಡಿಯನ್‌ ಹೋಟೆಲ್ಸ್‌ ಮತ್ತು ಇತರ ಪ್ರಮುಖ ಕಂಪನಿಗಳು), ವಿಮಾನಯಾನ (ಸಂಪೂರ್ಣ ವಲಯ) ಹಾಗೂ ಕ್ರೆಡಿಟ್‌ ಕಾರ್ಡ್‌ ನೀಡುವ ಕಂಪನಿಗಳಿಗೆ ಲಾಭದಾಯಕ.

ರೈಲ್ವೆ ಮೂಲಸೌಕರ್ಯ (ನವೀನ ಸೌಕರ್ಯ ಹಾಗೂ ಅಭಿವೃದ್ದಿ): ದೇಶದ ಪ್ರಮುಖ ಸ್ಟೀಲ್‌ ಕಂಪನಿಗಳೊಂದಿಗೆ ಎಪಿಎಲ್‌ ಅಪೊಲೋ (APL Apollo), ಜೆಟಿಎಲ್‌ (JTL) ಹಾಗೂ ಹೈಟೆಕ್‌ ಪೈಪ್ಸ್‌ ಕಂಪನಿಗಳಿಗೆ ಪಾಸಿಟಿವ್‌ ಅಂಶ.

ಎಲೆಕ್ಟ್ರಿಕ್ ವಾಹನಗಳು: ಆಟೋ ತಯಾರಕರು (ಟಾಟಾ ಮೋಟಾರ್ಸ್, ಟಿವಿಎಸ್ ಮೋಟಾರ್) ಮತ್ತು ಎನ್‌ಬಿಎಫ್‌ಸಿ (ಶ್ರೀರಾಮ್ ಫೈನಾನ್ಸ್, ಸುಂದರಂ ಫೈನಾನ್ಸ್ ಮತ್ತು ಚೋಲಾ).
ಆಟೋ ಬಿಡಿಭಾಗ ಪೂರೈಕೆದಾರರು: ಸಂವರ್ಧನ ಮದರ್ಸನ್ ಮತ್ತು ಸೋನಾ ಬಿಎಲ್‌ಡಬ್ಲ್ಯು

ಮುದ್ರಾ ಸಾಲದ ಮಿತಿ ವಿಸ್ತರಣೆ: ಪಿಎಸ್‌ಯು ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಲಾಭ

ಎಂಎಸ್‌ಎಂಇಗೆ ವರ್ಕಿಂಗ್ ಕ್ಯಾಪಿಟಲ್: ಶ್ರೀರಾಮ್ ಫೈನಾನ್ಸ್, ಮಾಸ್ ಫೈನಾನ್ಶಿಯಲ್ ಸರ್ವಿಸಸ್ ಮತ್ತು ಬಜಾಜ್ ಫೈನಾನ್ಸ್.

ನೈಸರ್ಗಿಕ ಅನಿಲ: ಗೈಲ್‌ (GAIL), ಪೆಟ್ರೋನೆಟ್‌ ಎಲ್‌ಎನ್‌ಜಿ (Petronet LNG), ಐಜಿಎಲ್‌ (IGL), ಮಹಾನಗರ ಗ್ಯಾಸ್, ಗುಜರಾತ್ ಗ್ಯಾಸ್, IRM ಎನರ್ಜಿ, ಅದಾನಿ ಟೋಟಲ್ ಗ್ಯಾಸ್ ಜೊತೆಗೆ ವೆಲ್ಸ್ಪನ್ ಕಾರ್ಪ್, ಮಹಾರಾಷ್ಟ್ರ ಸೀಮ್‌ಲೆಸ್‌ ಮತ್ತು ರತ್ನಮಣಿ ಮೆಟಲ್‌ನಂಥ ಪೈಪ್ ಷೇರುಗಳು.

ಬೆಳೆ ಎಂಎಸ್‌ಪಿಏರಿಕೆ: ಎಸ್ಕಾರ್ಟ್ಸ್ ಕುಬೋಟಾ ಮತ್ತು M&M ನಂತಹ ಟ್ರಾಕ್ಟರ್ ಸ್ಟಾಕ್‌ಗಳು ಜೊತೆಗೆ ಎನ್‌ಬಿಎಫ್‌ಸಿಗಳಾದ ಮಹೀಂದ್ರ & ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸಸ್, ಶ್ರೀರಾಮ್ ಫೈನಾನ್ಸ್, ಸುಂದರಂ ಫೈನಾನ್ಸ್ ಮತ್ತು ಚೋಲಾ ಫೈನಾನ್ಸ್.

ಹರ್ ಘರ್ ಜಲ್ ಯೋಜನೆ: ಜಿಂದಾಲ್ ಸಾ, ವೆಲ್ಸ್ಪನ್ ಕಾರ್ಪ್, ಎಲೆಕ್ಟ್ರೋಸ್ಟೀಲ್ ಕಾಸ್ಟಿಂಗ್ಸ್, ಹೈಟೆಕ್ ಪೈಪ್ಸ್, ಜೆಟಿಎಲ್ ಇಂಡಸ್ಟ್ರೀಸ್, ಸೂರ್ಯ ರೋಶ್ನಿ ಮತ್ತು ಎಪಿಎಲ್ ಅಪೋಲೋ ಟ್ಯೂಬ್ಸ್.

ಫಾರ್ಮಾ (ಉತ್ಪಾದನೆ ಮತ್ತು ಸಂಶೋಧನಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು): ದಿವಿಸ್ ಲ್ಯಾಬೋರೇಟರೀಸ್ (Divi's Laboratorie), ಸೈಂಜನ್‌ (Syngene), ಸುವೆನ್ ಫಾರ್ಮಾ (Suven Pharma) ಮತ್ತು ಅಮಿ ಆರ್ಗಾನಿಕ್ಸ್ (Ami Organics).

ಗ್ರಾಮೀಣ ಚೇತರಿಕೆ:  ಡಾಬರ್, ಇಮಾಮಿ ಮತ್ತು ಬಜಾಜ್ ಕನ್ಶುಮನರ್‌ ಪ್ರಮುಖ ಫಲಾನುಭವಿ ಕಂಪನಿ. ಎಚ್‌ಯುಎಲ್‌, ಕೋಲ್ಗೇಟ್ ಮತ್ತು ಬ್ರಿಟಾನಿಯಾ ಸಾಧಾರಣ ಮಾಭ ಮಾಡಿಕೊಳ್ಳಬಹುದು

PM ಇ-ಬಸ್: ಅಶೋಕ್ ಲೇಲ್ಯಾಂಡ್, ಟಾಟಾ ಮೋಟಾರ್ಸ್, JBM ಆಟೋ ಮತ್ತು ಒಲೆಕ್ಟ್ರಾ ಗ್ರೀನ್ಟೆಕ್.


ಏಪ್ರಿಲ್ 19 ರಂದು ಪ್ರಾರಂಭವಾಗುವ ಲೋಕಸಭೆ ಚುನಾವಣೆ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಮತಗಳ ಎಣಿಕೆ ನಡೆಯಲಿದೆ.

ಸೂಚನೆ: ಇದು ಮಾರುಕಟ್ಟೆ ವಿಶ್ಲೇಷಕ ಕಂಪನಿಯ ಅಭಿಪ್ರಾಯ. ಹೂಡಿಕೆ ಮಾಡುವ ಮುನ್ನ ನಿಮ್ಮ ತಜ್ಞರನ್ನು ಸಂಪರ್ಕಿಸಿ ಸಲಹೆ ಕೇಳಿದ ಬಳಿಕವೇ ನಿರ್ಧಾರ ಮಾಡಿ.
 

Follow Us:
Download App:
  • android
  • ios