Asianet Suvarna News Asianet Suvarna News

ಬೃಹತ್ ಟ್ಯಾಕ್ಸ್ ಹಗರಣ ಬಯಲು: ಕೋಟಿ ಕೋಟಿ ಹಣ ಲೂಟಿ!

ಕಂಡು ಕೇಳರಿಯದ ತೆರಿಗೆ ವಂಚನೆ ಪ್ರಕರಣ ಬಯಲು! ಬರೋಬ್ಬರಿ 57 ಬಿಲಿಯನ್ ಯೂರೋ ಹಣ ಲೂಟಿ! ತೆರಿಗೆ ವಂಚನೆಗೆ ಬೆಚ್ಚಿ ಬಿದ್ದ ಯೂರೋಪಿಯನ್ ರಾಷ್ಟ್ರಗಳು! ಜರ್ಮನಿ, ಫ್ರಾನ್ಸ್ ಸೇರಿದಂತೆ 11 ರಾಷ್ಟ್ರಗಳಲ್ಲಿ ತೆರಿಗೆ ವಂಚನೆ! ಯೂರೋಪ್‌ನ ರಾಷ್ಟ್ರೀಯ ಖಜಾನೆ ಫುಲ್ ಖಾಲಿ! ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಜರ್ಮನಿ ಸರ್ಕಾರ 
 

Europe Lost 55 bn Euros Amid Massive Tax Scam
Author
Bengaluru, First Published Oct 18, 2018, 5:25 PM IST

ಬರ್ಲಿನ್(ಅ.17): ಬೃಹತ್ ತೆರಿಗೆ ವಂಚನೆ ಪ್ರಕರಣ ಬಯಲಾದ ಪರಿಣಾಮ ಇಡೀ ಯೂರೋಪ್ ತತ್ತರಿಸಿ ಹೋಗಿದೆ. ಟ್ಯಾಕ್ಸ್ ಹಗರಣದಿಂದ ಯೂರೋಪ್ ನ ರಾಷ್ಟ್ರೀಯ ಖಜಾನೆಗೆ ಬರೋಬ್ಬರಿ 57 ಬಿಲಿಯನ್ ಯೂರೋ ನಷ್ಟವಾಗಿದೆ.

ಜರ್ಮನಿ, ಫ್ರಾನ್ಸ್, ಸ್ಪೇನ್, ಇಟಲಿ, ನೆದರಲ್ಯಾಂಡ್, ಡೆನ್ಮಾರ್ಕ್, ಬೆಲ್ಜಿಯಂ, ಆಸ್ಟ್ರೀಯಾ, ನಾರ್ವೆ, ಸ್ವಿಡ್ಜರಲ್ಯಾಂಡ್ ಮತ್ತು ಫಿನ್ಲ್ಯಾಂಡ್ ರಾಷ್ಟ್ರಗಳಲ್ಲಿ ಬೃಹತ್ ತೆರಿಗೆ ವಂಚನೆ ನಡೆದಿದ್ದು, ಇದರಿಂದ ಯೂರೋಪ್ ಆರ್ಥಿಕತೆ ಮೇಲೆ ಊಹಿಸಲಸಾಧ್ಯವಾದ ದುಷ್ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

ಈ ರಾಷ್ಟ್ರಗಳ ಪೈಕಿ ಜರ್ಮನಿಯೊಂದರಲ್ಲೇ 31.8 ಬಿಲಿಯನ್ ಯೂರೋ ಮೊತ್ತದ ತೆರಿಗೆ ವಂಚನೆ ನಡೆದಿದ್ದು, ಅಲ್ಲಿನ ಸರ್ಕಾರ ಉನ್ನತ ತನಿಖೆಗೆ ಸಿದ್ಧವಿದೆ ಎಂದು ಹಣಕಾಸು ಸಚಿವರು ಭರವಸೆ ನೀಡಿದ್ದಾರೆ.

ಇನ್ನುಳಿದಂತೆ ಫ್ರಾನ್ಸ್ ನಲ್ಲಿ 17 ಬಿಲಿಯನ್ ಯೂರೋ, ಇಟಲಿಯಲ್ಲಿ 4.5, ಡೆನ್ಮಾರ್ಕ್ ನಲ್ಲಿ 1.7 ಮತ್ತು ಬೆಲ್ಜಿಯಂನಲ್ಲಿ 201 ಮಿಲಿಯನ್ ಯೂರೋ ತೆರಿಗೆ ವಂಚನೆ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios