Asianet Suvarna News Asianet Suvarna News

ಹೊಸ ಆಡಿ ಇ MTB ಸೈಕಲ್ ಲಾಂಚ್, ಇದರ ಬೆಲೆಗೆ SUV ಕಾರು ಮನೆಗೆ ತರಬಹುದು!

ಐಷಾರಾಮಿ ಹಾಗೂ ದುಬಾರಿ ಕಾರುಗಳ ಪೈಕಿ ಆಡಿ ಮೂಂಚೂಣಿಯ ಬ್ರ್ಯಾಂಡ್. ಆಡಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನೂ ಬಿಡುಗಡೆ ಮಾಡಿದೆ. ಇದೀಗ ಹೊಚ್ಚ ಹೊಸ ಮೌಂಟೈನ್ ಇ ಸೈಕಲ್ ಬಿಡುಗಡೆ ಮಾಡಿದೆ. ಇ-ಎಂಟಿಬಿ ಹೆಸರಿನ ಈ ಎಲೆಕ್ಟ್ರಿಕ್ ಸೈಕಲ್ ಬೆಲೆಗೆ , ಕಾರು ಖರೀದಿಸಬಹುದು.
 

Audi Electric launch eMTB mountain bike With whopping price rs 8 17 lakh ckm
Author
First Published May 7, 2024, 6:32 PM IST

ಕ್ಯಾಲಿಫೋರ್ನಿಯಾ(ಮೇ.07) ಭಾರತದಲ್ಲಿ ಆಡಿ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಐಷಾರಾಮಿ ಹಾಗೂ ದುಬಾರಿ ಕಾರುಗಳ ಪೈಕಿ ಆಡಿ ಮುಂಚೂಣಿಯ ಬ್ರ್ಯಾಂಡ್. ಅತ್ಯುತ್ತಮ ವಿನ್ಯಾಸ, ಪವರ್, ಐಷಾರಾಮಿಗೆ ಹೆಸರುವಾಸಿಯಾಗಿರುವ ಆಡಿ ಬ್ರ್ಯಾಂಡ್ ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಆಡಿ ಹೊಚ್ಚ ಹೊಸ ಇ ಬೈಸಿಕಲ್ ಬಿಡುಗಡೆ ಮಾಡಿದೆ. ಮೌಂಟೈನ್ ಇ ಸೈಕಲ್ ಇದಾಗಿದ್ದು, ಇದರ ಬೆಲೆಗೆ ಭಾರತದಲ್ಲಿ ಹೊಸ SUV ಕಾರು ಖರೀದಿಸಲು ಸಾಧ್ಯವಿದೆ.  

ಇ ಎಂಟಿಬಿ ಹೆಸರಿನ ಈ ಮೌಂಟೈನ್ ಎಲೆಕ್ಟ್ರಿಕ್ ಸೈಕಲ್ ಬೆಲೆ 9795 ಅಮೆರಿಕನ್ ಡಾಲರ್. ಅಂದರೆ ಭಾರತೀಯ ರೂಪಾಯಿಗಳಲ್ಲಿ 8.17  ಲಕ್ಷ ರೂಪಾಯಿ. 8 ಲಕ್ಷ ರೂಪಾಯಿಗೆ ಭಾರತದಲ್ಲಿ ಎಸ್‌ಯುವಿ ಕಾರು ಖರೀದಿಸಬಗುದು. ಮಹೀಂದ್ರ 3ಎಕ್ಸ್ಒ, ಟಾಟಾ ನೆಕ್ಸಾನ್, ಸೇರಿದಂತೆ ಎಸ್‌ಯುವಿ ಕಾರುಗಳ ಬೆಲೆಗಿಂತ ದುಬಾರಿಯಾಗಿದೆ. ಟಾಟಾ ನೆಕ್ಸಾನ್ ಎಕ್ಸ್ ಶೋ ರೂಂ ಬೆಲೆ 8.14 ಲಕ್ಷ ರೂಪಾಯಿ ಬೆಲೆಯಿಂದ ಆರಂಭಗೊಳ್ಳುತ್ತದೆ. 

31 ನಿಮಿಷದಲ್ಲೇ ಚಾರ್ಜಿಂಗ್, 600 ಕಿ.ಮೀ ಮೈಲೇಜ್: 5 ಲಕ್ಷ ರೂಗೆ ಬುಕ್ ಮಾಡಿ ಆಡಿ Q8 eಟ್ರಾನ್!

ಆಡಿ ಬ್ರ್ಯಾಂಡ್‌ನನ ಡಕಾರ್ ವಿನ್ನಿಂಗ್ ಕಾರು ಆಡಿ ಆರ್‌ಎಸ್ ಕ್ಯೂ ಇ ಟೊರ್ನ್ ಕಾರಿನಿಂದ ಸ್ಪೂರ್ತಿ ಪಡೆದು ಹೊಚ್ಚ ಹೊಸ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಲಾಗಿದೆ. ಮೌಂಟೈನ್ ಸೈಕಲ್ ಎಂದೇ ಗುರುತಿಸಿಕೊಂಡಿರುವ ಇ-ಎಂಟಿಬಿ ಸೈಕಲ್ ಹಲವು ವಿಶೇಷತೆಗಳನ್ನು ಹೊಂದಿದೆ. ಜೊತೆಗೆ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜೀ ಆಗಿಲ್ಲ. XEF 1.9 ಫ್ಯಾಕ್ಟರಿ ಬೈಕ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಇ ಬೈಸಿಕಲ್ ನಿರ್ಮಾಣ ಮಾಡಲಾಗಿದೆ.

ಮುಂಭಾಗದಲ್ಲಿ 29 ಇಂಚಿನ್ ಟೈಯರ್ ಹಾಗೂ ರೇರ್ 27.5 ಇಂಚಿನ ಟೈಯರ್ ಬಳಸಲಾಗಿದೆ. ಟ್ಯೂಬ್‌ಲೆಸ್ ಟೈಯರ್, ಹೊಂದಿಸಬಲ್ಲ ಸಸ್ಪೆನ್ಶನ್, GRAM GX ಗೇರ್ಸ್ ಸೇರಿದಂತೆ ಕೆಲ ಫೀಚರ್ಸ್ ಇದರಲ್ಲಿದೆ. ಇನ್ನು 720 Wh 36v ಲೀಥಿಯಂ ಬ್ಯಾಟರಿ ಪ್ಯಾಕ್ ಬಳಸಲಾಗಿದೆ. S-MAG 250W ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 150 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. 

ಕ್ಯಾಲಿಫೋರ್ನಿಯಾದಲ್ಲಿ ಟಗರು ಹವಾ, ಕಾರಿನ ನಂಬರ್ ಪ್ಲೇಟ್‌ಗೆ ಮನಸೋತ ಧನಂಜಯ್!

ಇವಿ, ಇಕೋ, ಟೌನ್ ಹಾಗೂ ಸ್ಪೊರ್ಟ್ ಎಂಬ ನಾಲ್ಕು ಮೂಡ್‌ಗಳಿವೆ. ಇ ಬೈಸಿಕಲ್ ವೇಗ ಗರಿಷ್ಠ 32 ಕಿ.ಮೀ. ಡಿಜಿಟಲ್ ಡಿಸ್‌ಪ್ಲೆ ಹೊಂದಿದೆ. ಸೈಕಲ್ ಸ್ಪೀಡ್, ಬ್ಯಾಟರಿ ವಿವರ, ರೂಟ್ ಮ್ಯಾಪ್ ಸೇರಿದಂತೆ ಹಲವು ಫೀಚರ್ಸ್ ಈ ಡಿಸ್‌ಪ್ಲೇನಲ್ಲಿ ಲಭ್ಯವಿದೆ. ಇದೇ ತಿಂಗಳಲ್ಲಿ ಅಮೆರಿಕ ಮಾರುಕಟ್ಟೆಯಲ್ಲಿ ಇ ಬೈಕ್ ಲಭ್ಯವಾಗಲಿದೆ.
 

Follow Us:
Download App:
  • android
  • ios