Asianet Suvarna News Asianet Suvarna News

ಇನ್ನೂ ಎಚ್ಚೆತ್ತುಕೊಳ್ಳದಿದ್ರೆ ಬೆಂಗಳೂರಿಗೆ ಕಾದಿದೆ ಆಪತ್ತು!

ನೀರು ಖಾಲಿಯಾಗಿ ಬೆಂಗ್ಳೂರು ಮತ್ತೊಂದು ಕೇಪ್‌ಟೌನ್‌ ಆಗಲಿದೆ| ಚೆನ್ನೈ ಮತ್ತು ಬೆಂಗಳೂರು ನಗರಗಳು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ ರೀತಿ ನೀರಿಲ್ಲದೇ ಬರಿದಾಗಲಿದೆ| ಬೆಳೆಯುತ್ತಿರುವ ನಗರೀಕರಣ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕಳಪೆ ಜಲ ನಿರ್ವಹಣೆ ನೀರಿನ ಕೊಳಗಳು ಬತ್ತಿಹೋಗಲು, ನೀರಿನ ಮಟ್ಟಇಳಿಯಲು ಕಾರಣ|ಬೆಂಗಳೂರಿನ ಕೆರೆಗಳು ವಿಷಕಾರಿಯಾಗಿ ನೊರೆ ತುಂಬಿಕೊಂಡಿವೆ|

Terribly Condition in Upcoming Days in Bengaluru
Author
Bengaluru, First Published Oct 31, 2019, 8:18 AM IST

ನವದೆಹಲಿ[ಅ.30]: ಒಂದು ವೇಳೆ ಜನರು ಈಗಲೂ ಜಲ ಸಂರಕ್ಷಣೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳದೇ ಹೋದರೆ ತಮಿಳುನಾಡು ರಾಜಧಾನಿ ಚೆನ್ನೈ ಮತ್ತು ಬೆಂಗಳೂರು ನಗರಗಳು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ ರೀತಿ ನೀರಿಲ್ಲದೇ ಬರಿದಾಗಲಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

13ನೇ ವಿಶ್ವಜಲ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕಳಪೆ ಜಲ ನಿರ್ವಹಣೆ ನೀರಿನ ಕೊಳಗಳು ಬತ್ತಿಹೋಗಲು, ನೀರಿನ ಮಟ್ಟಇಳಿಯಲು ಕಾರಣವಾಗಿಲಿವೆ. ಬೆಂಗಳೂರಿನ ಕೆರೆಗಳು ವಿಷಕಾರಿಯಾಗಿ ನೊರೆ ತುಂಬಿಕೊಂಡಿವೆ. ಹೆಚ್ಚಿನ ಸಂಖ್ಯೆಯ ಜನರು ಕೊಳವೆ ನೀರಿನ ಬದಲು ನೀರಿನ ಟ್ಯಾಂಕರ್‌ ಮೇಲೆ ಅವಲಂಬಿತರಾಗಿದ್ದಾರೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೆ 5000 ಕ್ಯುಬಿಕ್‌ ಮೀಟರ್‌ನಷ್ಟು ನೀರಿನ ಲಭ್ಯತೆ ಇತ್ತು. ಆದರೆ, ಈಗ 1540 ಕ್ಯುಬಿಕ್‌ ಮೀಟರ್‌ಗೆ ಇಳಿಕೆಯಾಗಿದೆ. ಒಂದು ವೇಳೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಚೆನ್ನೈ ಅಷ್ಟೇ ಅಲ್ಲ ಬೆಂಗಳೂರು ಕೂಡ ಕೇಪ್‌ಟೌನ್‌ ರೀತಿ ನೀರಿಲ್ಲದೇ ಬರಿದಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಪ್‌ಟೌನ್‌ಗೆ ಏನಾಗಿತ್ತು?

2017​-18ರಲ್ಲಿ ದಕ್ಷಿಣ ಆಫ್ರಿಕಾದ ರಾಜಧಾನಿ ಕೇಪ್‌ ಟೌನ್‌ ನೀರಿಲ್ಲದೇ ಸಂಪೂರ್ಣ ಬರಿದಾಗಿತ್ತು. ಆ ಬಳಿಕ ಶೂನ್ಯ ನೀರಿನ ಬಳಕೆ ದಿನವನ್ನು ಜಾರಿಗೊಳಿಸಲಾಯಿತು. ನೀರಿನ ಬಳಕೆಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ಕೊಳವೆ ಬಾವಿಗಳನ್ನು ಬಂದ್‌ ಮಾಡಲಾಗಿತ್ತು.

Follow Us:
Download App:
  • android
  • ios