Asianet Suvarna News Asianet Suvarna News

ಗರ್ಭಿಣಿ ಶಾರೀರಿಕ ಸಂಬಂಧದಿಂದ ದೂರವಿರೋದು ಯಾಕೆ ?

ಗರ್ಭಿಣಿ (Pregnant) ಯಾಗಿರುವುದು ಯಾವುದೇ ಮಹಿಳೆಗೆ (Woman) ಅತ್ಯಂತ ವಿಶೇಷ ಅನುಭವ. ತಾಯಿಯಾಗುವ ಖುಷಿಯಲ್ಲಿ ಅವರು ತೇಲಿ ಹೋಗುತ್ತಾರೆ. ಈ ಸಂದರ್ಭದಲ್ಲಿ ಅವರು ಹಲವಾರು ದೈಹಿಕ (Physical) ಹಾಗೂ ಮಾನಸಿಕ (Mental) ಸಮಸ್ಯೆಗಳನ್ನು ಎದುರಿಸುತ್ತಾರೆ. ಜೊತೆಗೆ ಸಂಗಾತಿಯಿಂದ ಶಾರೀರಿಕ ಸಂಬಂಧದಿಂದ (Relationship|) ದೂರವಿರುತ್ತಾರೆ. ಅದು ಯಾಕೆ ನಿಮಗೆ ಗೊತ್ತಾ ?

Changes in Sexual Desire in Women and Their Partners Vin
Author
Bengaluru, First Published May 20, 2022, 5:27 PM IST

ಗರ್ಭಿಣಿ (Pregnant) ಯಾದಾಗ ಮಹಿಳೆ (Woman) ತನ್ನ ಜೊತೆಗೆ, ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಹಿಳೆ ತನ್ನ ಗರ್ಭದಲ್ಲಿ ಮತ್ತೊಂದು ಜೀವನವನ್ನು ನಿರ್ವಹಿಸುತ್ತಿರುತ್ತಾಳೆ. ಇದರಿಂದಾಗಿ ಅವರು ಈ ಸಮಯದಲ್ಲಿ ಅನೇಕ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅಂದರೆ ಸರಿಯಾಗಿ ತಿನ್ನುವುದು, ಸಮಯಕ್ಕೆ ಸರಿಯಾಗಿ ಮಲಗುವುದು, ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳುವುದು ಮತ್ತು ಇತರ ಅನೇಕ ವಿಷಯಗಳು ಸೇರಿವೆ. ಗರ್ಭಿಣಿಯಾದಾಗ ಮಹಿಳೆಯಲ್ಲಿ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳಾಗುತ್ತವೆ. ಅನೇಕ ಸಮಸ್ಯೆಗಳನ್ನೂ ಆಕೆ ಎದುರಿಸಬೇಕಾಗುತ್ತದೆ. ಹೀಗಾಗಿ ಲೈಂಗಿಕ ಜೀವನದ (Sex) ಬಗ್ಗೆ ಹೆಚ್ಚು ಆಸಕ್ತಿ ಇರುವುದಿಲ್ಲ.

ಗರ್ಭಿಣಿ 9 ತಿಂಗಳವರೆಗೆ ತನ್ನ ಹಾಗೂ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ (Health) ನೋಡಿಕೊಳ್ಳಬೇಕಾಗುತ್ತದೆ. ಪ್ರತಿ ದಿನವೂ ಒಂದೊಂದು ಬದಲಾವಣೆ ಕಾಣಿಸಿಕೊಳ್ಳುತ್ತದೆ. ಇದು ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆ. ಗರ್ಭಿಣಿಯಾದಾಗ ಎಲ್ಲ ಮಹಿಳೆಯರು ಒಂದೇ ರೀತಿ ಇರೋದಿಲ್ಲ. ಶಾರೀರಿಕ ಸಂಬಂಧ ಬೆಳೆಸುವ ಇಚ್ಛೆ ಕೂಡ ಕಡಿಮೆಯಾಗಿರುತ್ತದೆ. ಗರ್ಭಿಣಿ ಯಾಕೆ ಸಂಬಂಧ ಬೆಳೆಸಲು ನಿರಾಕರಿಸ್ತಾಳೆ ಎನ್ನುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

ತಾಯಿಯಾಗುತ್ತಿದ್ದೀರಿ ಎಂದಾದರೆ ದೇಹದಲ್ಲಾಗುತ್ತೆ ಈ ಬದಲಾವಣೆಗಳು!

ಗರ್ಭಿಣಿ ಶಾರೀರಿಕ ಸಂಬಂಧ ಬೆಳೆಸಲು ನಿರಾಕರಿಸುವುದು ಯಾಕೆ ?

ಪ್ರತಿಯೊಬ್ಬ ಮಹಿಳೆಗೂ ಅಮ್ಮನಾಗುವುದು ಜೀವನದ ಒಂದು ಬಹುದೊಡ್ಡ ಘಟ್ಟ. ಜೀವನದ ಅತ್ಯಂತ ಖುಷಿ ಸಮಯ. ಹಾಗಾಗಿ ಅವರು ಈ ಸಮಯವನ್ನು ಸಾಕಷ್ಟು ಎಂಜಾಯ್ ಮಾಡಲು ಬಯಸುತ್ತಾರೆ. ಹೀಗಾಗಿ ಲೈಂಗಿಕ ಜೀವನವನ್ನು ಕಡೆಗಣಿಸುತ್ತಾರೆ. ಹಾರ್ಮೋನ್ ಬದಲಾವಣೆಯಿಂದ ಸಂಬಂಧ ಬೆಳೆಸುವ ಇಚ್ಛೆ ಕೆಲವರಿಗೆ ಹೆಚ್ಚಾದ್ರೆ ಮತ್ತೆ ಕೆಲವರಿಗೆ ಕಡಿಮೆಯಾಗುತ್ತದೆ. ಅನೇಕ ಮಹಿಳೆಯರಿಗೆ ಇದು ಕಿರಿಕಿರಿಯುಂಟು ಮಾಡುತ್ತದೆ.

ಆರಂಭದ ತಿಂಗಳುಗಳಲ್ಲಿ ಸುಸ್ತು ಹೆಚ್ಚಾಗಿರುವುದರಿಂದ ಮಹಿಳೆಯರು ಶಾರೀರಿಕ ಸಂಬಂಧದಿಂದ ದೂರ ಇರ್ತಾರೆ. ಶಾರೀರಿಕ ಸಂಬಂಧ ಬೆಳೆಸುವುದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದೆಂಬ ಭಯ ಅನೇಕ ಗರ್ಭಿಣಿಯರನ್ನು ಕಾಡುತ್ತದೆ. ಹಾಗಾಗಿ ಅವರು ಶಾರೀರಿಕ ಸಂಬಂಧ ನಿರಾಕರಿಸುತ್ತಾರೆ.

ತನ್ನೊಳಗೆ ಜೀವವೊಂದು ಕುಡಿಯೊಡೆಯುತ್ತಿದೆ ಎನ್ನುವುದು ಪ್ರತಿ ಮಹಿಳೆ(Woman) ಗೆ ರೋಮಾಂಚನ (Thrill) ತರುತ್ತದೆ. ಹಾಗೆಯೇ ಆತಂಕವನ್ನೂ ಒಡ್ಡುತ್ತದೆ. ಮುಂದೆ ಹೇಗೋ ಏನೋ ಎನ್ನುವ ಒತ್ತಡ (Tension) ಕಾಡುತ್ತದೆ. ಸರಿಯಾಗಿ ಆರೈಕೆ ಮಾಡುವವರಿಲ್ಲದೆ ಹೋದಲ್ಲಿ ಮಾನಸಿಕವಾಗಿ ಆಕೆ ಬಸವಳಿಯುತ್ತಾಳೆ. ಹೀಗಾಗಿ ಸೆಕ್ಸ್ ಬಗ್ಗೆಯೂ ಆಕೆಗೆ ಹೆಚ್ಚು ಆಸಕ್ತಿ (Interest) ಇರುವುದಿಲ್ಲ.

ಹೆಣ್ಣು ಗರ್ಭಧರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಗರ್ಭಾವಸ್ಥೆಯಲ್ಲಿ (pregnancy period) ಮಹಿಳೆಯರು ತುಂಬಾನೇ ಕೇರ್ ಫುಲ್ ಆಗಿರಬೇಕು. ಬರುವ ಮಗುವಿಗೆ ಯಾವುದೇ ಸಮಸ್ಯೆ ಬರದಂತೆ ಮತ್ತು ಯಾವಾಗಲೂ ಆರೋಗ್ಯವಾಗಿರಲು ಪ್ರತಿಯೊಬ್ಬ ಮಹಿಳೆಯೂ ತನ್ನ ಬಗ್ಗೆ ವಿಶೇಷ ಕಾಳಜಿ (Care) ವಹಿಸಬೇಕು. ಹೀಗಾಗಿ ಮಹಿಳೆ ಈ ಸಂದರ್ಭದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುತ್ತಾಳೆ.

ಆದರೆ, ಮಗು (Baby) ಹುಟ್ಟಿದ ಬಳಿಕ ಹೆಣ್ಣಿನ ಲೈಂಗಿಕ ಆಸಕ್ತಿ ಕುಗ್ಗುತ್ತದೆ ಎಂಬ ಮಾತಿದೆ. ಇದಕ್ಕೆ ಕಾರಣ ಆಕೆಯ ದೇಹ ಹಲವಾರು ಮಾರ್ಪಾಡುಗಳನ್ನು ಕಂಡು ತಿರುಗಿ ಹಿಂದಿನಂತಾಗುವ ಪ್ರಕ್ರಿಯೆಯಲ್ಲಿ ಸೆಕ್ಸ್ ಮೇಲಿನ ಆಸಕ್ತಿ ಸ್ವಲ್ಪ ಕಡಿಮೆ ಆಗಬಹುದು. ಜೊತೆಗೆ ಈಸ್ಟ್ರೋಜನ್ ಮಟ್ಟವೂ (Estrogen Level) ಆಗ ಕಡಿಮೆ ಇರುತ್ತದೆ. ಆದರೆ ಇದೆಲ್ಲ ಹೆರಿಗೆಯಾಗಿ ಎರಡು ವಾರದಿಂದ ತಿಂಗಳವರೆಗಿನ ದೇಹಸ್ಥಿತಿ. ಆ ಬಳಿಕ ಆಕೆಯ ದೇಹದಲ್ಲಿ ಬದಲಾವಣೆ ಆಗುತ್ತಿದ್ದರೂ ಸೆಕ್ಸ್ ಬಯಕೆ ಮೊದಲಿನಂತಾಗುವ ಸಾಧ್ಯತೆ ಇದೆ. 

Follow Us:
Download App:
  • android
  • ios