ಕನ್ನಡ ಕಿರುತೆರೆಯಲ್ಲಿ ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಅಶ್ವಿನಿಯಾಗಿ ಮಿಂಚಿದ ನಟಿ ಮಯೂರಿ ಕ್ಯಾತರಿ.
Image credits: Instagram
ಸಿನಿಮಾಗಳಲ್ಲೂ ನಟನೆ
ಸೀರಿಯಲ್ ಬಳಕೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲೂ ನಟಿಸಿದ್ರು ಸುಂದರಿ, ಆದರೆ ಯಶಸ್ಸು ಸಿಕ್ಕಿದ್ದು ಮಾತ್ರ ಕಡಿಮೆಯೇ.
Image credits: Instagram
ಬಿಗ್ ಬಾಸ್ ಕನ್ನಡದಲ್ಲೂ ಸ್ಪರ್ಧಿ
ಮಯೂರಿ ಬಿಗ್ ಬಾಸ್ ಸೀಸನ್ 9ರಲ್ಲೂ ಭಾಗವಹಿಸಿದ್ದರು, ಆದರೆ ಮಗನನ್ನು ಬಿಟ್ಟು ಬಂದು, ಆಟದಲ್ಲಿ ಗಮನ ಹರಿಸಲಾಗದೆ ಬಂದ ತಿಂಗಳೊಳಗೆ ಮನೆಯಿಂದ ಹೊರ ನಡೆದಿದ್ದರು.
Image credits: Instagram
ಡಿವೋರ್ಸ್ ವದಂತಿ
ಕೊರೋನಾ ಸಮಯದಲ್ಲಿ ಮದುವೆಯಾಗಿ, ಸ್ವಲ್ಪ ಸಮಯದಲ್ಲೇ ಮಗುವಿಗೆ ತಾಯಿಯಾಗಿದ್ದ ಮಯೂರಿ, ಸದ್ಯ ಗಂಡನಿಂದ ಡಿವೋರ್ಸ್ ಪಡೆದಿದ್ದಾರೆ, ಗಂಡನಿಂದ ದೂರ ಇದ್ದಾರೆ ಎನ್ನುವ ವದಂತಿ ಇದೆ.
Image credits: Instagram
ಸಖತ್ ಬಿಂದಾಸ್
ಇತ್ತೀಚೆಗಂತೂ ನಟಿ ಬಿಂದಾಸ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದುಬೈನಲ್ಲಿ ಮಯೂರಿ ಲೈಫ್ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದರು.
Image credits: Instagram
ಸೀರೆಯಲ್ಲಿ ನೀರೆ
ಇದೀಗ ಮಯೂರಿ ಚಾಕ್ಲೆಟ್ ಬಣ್ಣದ ರೇಷ್ಮೆ ಸೀರೆಯುಟ್ಟು, ಮೈತುಂಬಾ ಬಂಗಾರ ತೊಟ್ಟು, ವಧುವಿನಂತೆ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ.
Image credits: Instagram
ಹುಬ್ಳಿ ಹುಡುಗಿ ಅಂದಕ್ಕೆ ಸೋತ ಫ್ಯಾನ್ಸ್
ಹುಬ್ಳಿ ಹುಡುಗಿಯ ಈ ಟ್ರೆಡಿಶನಲ್ ಅವತಾರ ನೋಡಿ ಅಭಿಮಾನಿಗಳು ಮನಸೋತಿದ್ದು, ಸೌಂದರ್ಯದ ಗೊಂಬೆ, ಮುದ್ದು ಮುದ್ದಾಗಿದ್ಯಾ ಹುಬ್ಳಿ ಹುಡುಗಿ, ಅಪ್ಸರೆ ಎಂದು ಕಾಮೆಂಟ್ ಮಾಡಿದ್ದಾರೆ.
Image credits: Instagram
ಕರಿಯರ್
ನಟನೆ ವಿಷ್ಯಕ್ಕೆ ಬಂದ್ರೆ ಮಯೂರಿ ಕೊನೆಯದಾಗಿ ನನ್ನ ದೇವ್ರು ಸೀರಿಯಲ್ ನಲ್ಲಿ ನಟಿಸಿದ್ದರು. ಇದು ಎರಡು ತಿಂಗಳಲ್ಲೇ ಕೊನೆ ಕಂಡಿತ್ತು. ಇದಾದ ನಂತರ ನಟಿ ಯಾವುದೇ ಸೀರಿಯಲ್, ಸಿನಿಮಾದಲ್ಲಿ ನಟಿಸಿಲ್ಲ.