Kannada

ಅನ್ನಕ್ಕೆ ಸಾಂಬಾರ್‌ ಮಾಡೋಕಾಗಲ್ವಾ? 2 ನಿಮಿಷದಲ್ಲಾಗೋ 5 ಅಡುಗೆ ಟ್ರೈ ಮಾಡಿ!

Kannada

ತುಂಬ ಟೈಮ್‌ ಬೇಕು

ಸಾಂಬಾರ್‌ ಮಾಡಲು ಟೈಮ್‌ ಬೇಕಾಗುತ್ತದೆ. ಅಷ್ಟೇ ಅಲ್ಲದೆ ನಿತ್ಯವೂ ಸಾಂಬಾರ್‌ ಅಂದರೆ ಬೇಸರ. ಹೀಗಾಗಿ ಮಜ್ಜಿಗೆ ಬಳಸಿ ಅನ್ನದ ಜೊತೆ ತಿನ್ನುವ ಈ ಪದಾರ್ಥಗಳನ್ನು ಕೆಲವೇ ನಿಮಿಷದಲ್ಲಿ ಮಾಡಿ.

Image credits: AI Photo
Kannada

ತಂಬುಳಿ

ಮಾವಿನಕಾಯಿ ತಿರುಳಿಗೆ ಸ್ವಲ್ಪ ತೆಂಗಿನತುರಿ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದಕ್ಕೆ ಜೀರಿಗೆ, . ಉದ್ದಿನಬೇಳೆ, ಸಾಸಿವೆ, ಇಂಗು, ಹಸಿಮೆಣಸು ಹಾಕಿ ಒಗ್ಗರಣೆ ಕೊಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. 

Image credits: AI Photo
Kannada

ನೀರು ಸಾರು

ಬಾಳೇಕಾಯಿ/ ಹಲಸಿನ ಕಾಯಿ ತೊಳೆ / ಬೆಂಡೇಕಾಯಿ ಹೋಳಿಗೆ ನೀರು ಹಾಕಿ ಬೇಯಿಸಿ. ಅದಕ್ಕೆ ಇಂಗು, ಉದ್ದಿನಬೇಳೆ, ಸಾಸಿವೆ, ಜೀರಿಗೆ, ಹಸಿಮೆಣಸು ಹಾಕಿ ಒಗ್ಗರಣೆ ಕೊಡಿ. ಉಪ್ಪು ಹಾಕಿ. ಮಜ್ಜಿಗೆ ಅಥವಾ ಲಿಂಬೆರಸ ಹಾಕಿ

Image credits: AI Photo
Kannada

ಲಿಂಬೆ ಅಪ್ಪೇಹುಳಿ

ಎಷ್ಟೋ ಬೇಕೋ ಅಷ್ಟು ನೀರಿಗೆ ಲಿಂಬೆ ಸರ ಹಾಕಿ. ಉದ್ದಿನಬೇಳೆ, ಸಾಸಿವೆ, ಇಂಗು, ಹಸಿಮೆಣಸು ಹಾಕಿ ಒಂದು ಒಗ್ಗರಣೆ ಕೊಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

Image credits: AI Photo
Kannada

ಮಜ್ಜಿಗೆ ಪೋಳಜ

ಸ್ವಲ್ಪ ಹುಳಿ ಬಂದಿರೋ ಮಜ್ಜಿಗೆಗೆ ಉದ್ದಿನ ಬೇಳೆ, ಸಾಸಿವೆ, ಹಸಿಮೆಣಸು, ಇಂಗು, ಈರುಳ್ಳಿ ಅಥವಾ ಬೆಳ್ಳುಳ್ಳಿ ಹಾಕಿ ಒಂದು ಒಗ್ಗರಣೆ ಕೊಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
 

Image credits: AI Photo
Kannada

ಟೊಮ್ಯಾಟೋ ತಿಳಿ ಸಾರು

ಎಷ್ಟು ಬೇಕೋ ಅಷ್ಟು ನೀರು ಹಾಕಿ ಟೊಮ್ಯಾಟೋ ಹಣ್ಣು ಬೇಯಿಸಿಕೊಳ್ಳಿ. ಅದಕ್ಕೆ ಉದ್ದಿನಬೇಳೆ, ಸಾಸಿವೆ, ಇಂಗು, ಈರುಳ್ಳಿ, ಹಸಿಮೆಣಸು ಹಾಕಿ ಒಗ್ಗರಣೆ ಕೊಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ
 

Image credits: AI Photo

ಕ್ಯಾನ್ಸರ್ ಅಪಾಯ ಹೆಚ್ಚಿಸುವ ಆಹಾರಗಳಿವು! ಅತಿಯಾಗಿ ತಿನ್ನುವುದು ಒಳ್ಳೇದಲ್ಲ!

ವಿಟಮಿನ್ ಪಿ ಬಗ್ಗೆ ನಿಮಗೆ ತಿಳಿದಿರಲಿ; ಈ ಆಹಾರದಲ್ಲಿ ಸಮೃದ್ಧವಾಗಿದೆ!

ಮೊಸರು, ಮಾವಿನಕಾಯಿ ಇದ್ರೆ 2 ನಿಮಿಷದಲ್ಲಿ ಬೂತ್ಗೊಜ್ಜು ಮಾಡಿ ಚಪ್ಪರಿಸಿ ತಿನ್ನಿ

1 ಮಾವಿನಕಾಯಿ ಬಳಸಿ, 2 ನಿಮಿಷದಲ್ಲಿ ಅಪ್ಪೇಹುಳಿ ಮಾಡೋದು ಹೇಗೆ?