ಕಡಲೆ ಹಿಟ್ಟು, ತುಪ್ಪ, ಸಕ್ಕರೆ, ಹಾಲು, ಕೇಸರಿ, ಏಲಕ್ಕಿ ಪುಡಿ, ರವೆ, ಒಣ ಹಣ್ಣುಗಳು
ಹಂತ 1
ಒಂದು ಪಾತ್ರೆಲಿ ತುಪ್ಪ ಬಿಸಿ ಮಾಡಿ. ಹಾಲಿನಲ್ಲಿ ಕಡಲೆ ಹಿಟ್ಟು ಬೆರೆಸಿ ಪಾಕ ತಯಾರಿಸಿ. ಿದನ್ನು ಜರಡಿಯ ಸಹಾಯದಿಂದ ಸಣ್ಣ ಸಣ್ಣ ಬೂಂದಿಗಳನ್ನಾಗಿ ಎಣ್ಣೆ ಮೇಲೆ ಬಿಡಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ
ಹಂತ 2
ನಂತರ ಒಂದು ಪಾನ್ ನಲ್ಲಿ ಸಕ್ಕರೆ ಮತ್ತು ಹಾಲು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ. ಸಕ್ಕರೆ ಕರಗಿದ ನಂತರ, ಅದಕ್ಕೆ ಕೇಸರಿ ಮತ್ತು ಏಲಕ್ಕಿ ಪುಡಿ ಸೇರಿಸಿ. ಪಾಕವು ಒಂದು ಹದವಾಗಿ ದಪ್ಪವಾಗುವವರೆಗೆ ಕುದಿಸಿ.
ಹಂತ 3
ಕರಿದ ಬೂಂದಿಯನ್ನು ಬಿಸಿ ಪಾಕದಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರವೆ ಸೇರಿಸುವುದರಿಂದ ಲಡ್ಡುಗಳು ಗಟ್ಟಿಯಾಗುತ್ತವೆ. ಸ್ವಲ್ಪ ತಣ್ಣಗಾದ ನಂತರ, ಕೈಗಳಿಗೆ ತುಪ್ಪ ಹಚ್ಚಿಕೊಂಡು ಸಣ್ಣ ಸಣ್ಣ ಉಂಡೆ ಮಾಡಿ
ಲಡ್ಡು ಸಿದ್ಧ
ತಯಾರಾದ ಲಡ್ಡುಗಳನ್ನು ಒಣ ಹಣ್ಣುಗಳಿಂದ ಅಲಂಕರಿಸಿ ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ.