Kannada

ಆರ್‌ಸಿಬಿ ಅದ್ಬುತ ಪ್ರದರ್ಶನ

ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ.
 

Kannada

Image Credit: ANI

ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಸದ್ಯ 11 ಪಂದ್ಯಗಳನ್ನಾಡಿ 8 ಗೆಲುವು ಹಾಗೂ 3 ಸೋಲು ಸಹಿತ 16 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
 

Image credits: ANI
Kannada

Image Credit: ANI

ಆರ್‌ಸಿಬಿ ತಂಡವು ಲೀಗ್ ಹಂತದಲ್ಲಿ 3 ಪಂದ್ಯಗಳನ್ನಾಡುವುದು ಬಾಕಿ ಇದ್ದು, ಈ ಪೈಕಿ ಇನ್ನೊಂದು ಪಂದ್ಯ ಜಯಿಸಿದರೆ ಅಧಿಕೃತವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ಹೀಗಿರುವಾಗಲೇ ಆರ್‌ಸಿಬಿಗೆ ಬಿಗ್ ಶಾಕ್ ಎದುರಾಗಿದೆ.

Image credits: ANI
Kannada

Image Credit: ANI

ಹೌದು, ಭುಜದ ಗಾಯಕ್ಕೆ ತುತ್ತಾಗಿರುವ ಆರ್‌ಸಿಬಿ ತಂಡದ ತಾರಾ ವೇಗದ ಬೌಲರ್ ಜೋಶ್ ಹೇಜಲ್‌ವುಡ್, ಟೂರ್ನಿಯ ಉಳಿದ ಪಂದ್ಯಗಳಿಗೆ ಗೈರಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

Image credits: ANI
Kannada

ಹೇಜಲ್‌ವುಡ್‌ಗೆ ಫಿಟ್ನೆಸ್ ಸಮಸ್ಯೆ

ಮೇ 3ರಂದು ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ನೀಳಕಾಯದ ವೇಗಿ ಜೋಶ್ ಹೇಜಲ್‌ವುಡ್ ಆಡಿರಲಿಲ್ಲ. ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರೂ, ಸಂಪೂರ್ಣ ಫಿಟ್ ಆಗಲು 1-2 ವಾರ ಬೇಕಾಗಬಹುದು. 

Image credits: ANI
Kannada

ಮತ್ತೆ ಆರ್‌ಸಿಬಿ ಕೂಡಿಕೊಳ್ಳೋದು ಅನುಮಾನ

ಮುಂದಿನ ವಾರವೇ ಐಪಿಎಲ್ ಆರಂಭಗೊಂಡರೆ ಜೋಶ್ ಹೇಜಲ್ ವುಡ್ ತಂಡಕ್ಕೆ ಮರಳುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.

Image credits: Twitter
Kannada

ಪಾಟೀದಾರ್‌ಗೂ ಗಾಯ

ಇನ್ನು, ಆರ್ ಸಿಬಿ ನಾಯಕ ರಜತ್ ಪಾಟೀದಾರ್ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದರೂ ಕೆಲ ದಿನಗಳಲ್ಲಿ ಫಿಟ್ ಆಗುವ ನಿರೀಕ್ಷೆಯಿದೆ. 
 

Image credits: ANI
Kannada

Image Credit: Twitter/RCB

ಐಪಿಎಲ್ ಸ್ಥಗಿತಗೊಳ್ಳದಿದ್ದರೆ ರಜತ್, ಮೇ 9ರ ಲಖನೌ ವಿರುದ್ಧ ಪಂದ್ಯಕ್ಕೆ ಗೈರಾಗುತ್ತಿದ್ದರು. ಅವರ ಬದಲು ಜಿತೇಶ್ ನಾಯಕತ್ವ ವಹಿಸಲು ಸಿದ್ಧರಾಗಿದ್ದರು ಎಂದು ತಿಳಿದುಬಂದಿದೆ.
 

Image credits: Image Credit: Twitter/RCB

ಒಂದು ವಾರದಲ್ಲಿ ಐಪಿಎಲ್ ಪುನಾರಂಭ ಆಗದಿದ್ದರೆ ಸೆಪ್ಟೆಂಬರ್‌ಗೆ ಕಾಯಬೇಕು!

ಸ್ಮೃತಿ ಮಂಧನಾ ಅವರಿಗಿಂತ ಹೆಚ್ಚು ಸಂಪಾದಿಸೋ ಟಾಪ್ 5 ಮಹಿಳಾ ಕ್ರಿಕೆಟರ್ಸ್‌!

ರೋಹಿತ್ ಶರ್ಮಾ ಆಡಿದ 5 ಅವಿಸ್ಮರಣೀಯ ಟೆಸ್ಟ್ ಇನ್ನಿಂಗ್ಸ್‌ಗಳಿವು!

ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು!