Asianet Suvarna News Asianet Suvarna News

Weekend Curfew: 'ಮುಂದುವರೆದರೆ ಬಾರ್ & ವೈನ್ ಶಾಪ್ ಮಾಲೀಕರು ವೆಂಟಿಲೇಟರ್‌ಗೆ ಹೋಗ್ತಾರೆ'

 ಬಾರ್ ಹಾಗೂ ವೈನ್ ಶಾಪ್ (Bar and Wine Shop) ಮಾಲೀಕರು ಐಸಿಯುನಲ್ಲಿದ್ದಾರೆ. ಕರ್ಫ್ಯೂ (Curfew) ಮುಂದುವರೆದರೆ ವೆಂಟಿಲೇಟರ್‌ಗೆ ಹೋಗುತ್ತೇವೆ. ದಯವಿಟ್ಟು ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ, ವೀಕೆಂಡ್ ಕರ್ಫ್ಯೂ (Weekend Curfew) ನಿಲ್ಲಿಸಿ' ಎಂದು ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ಧಾರೆ. 

ಬೆಂಗಳೂರು (ಜ. 18): ಬಾರ್ ಹಾಗೂ ವೈನ್ ಶಾಪ್ (Bar and Wine Shop) ಮಾಲೀಕರು ಐಸಿಯುನಲ್ಲಿದ್ದಾರೆ. ಕರ್ಫ್ಯೂ (Curfew) ಮುಂದುವರೆದರೆ ವೆಂಟಿಲೇಟರ್‌ಗೆ ಹೋಗುತ್ತೇವೆ. ದಯವಿಟ್ಟು ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ, ವೀಕೆಂಡ್ ಕರ್ಫ್ಯೂ (Weekend Curfew) ನಿಲ್ಲಿಸಿ' ಎಂದು ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ಧಾರೆ. 

ರಾಜ್ಯ ಸರ್ಕಾರ ವಾರಾಂತ್ಯದ ಕಪ್ರ್ಯೂ ಮುಂದುವರಿಸದೆ ಮಹಾರಾಷ್ಟ್ರ ಮಾದರಿಯಲ್ಲಿ (Maharashtra Model) ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಮಹಾನಗರ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ಮನವಿ ಮಾಡಿದ್ದಾರೆ. 

ಈಗಾಗಲೇ ಎರಡು ವಾರ ವಾರಾಂತ್ಯದ ಕಪ್ರ್ಯೂ ಜಾರಿ ಮಾಡಿದ್ದರಿಂದ ರೈತರು, ರಸ್ತೆ ಬದಿ ವ್ಯಾಪಾರಿಗಳು, ಹೋಟೆಲ್‌ ಸೇರಿದಂತೆ ವಿವಿಧ ವಲಯದ ಕಾರ್ಮಿಕರು, ಮಾಲೀಕರಿಗೆ ಸಾಕಷ್ಟು ತೊಂದರೆ ಆಗಿದೆ. ಆದರೂ ಕೋವಿಡ್‌ ನಿಯಂತ್ರಿಸಲು ಸರ್ಕಾರ ವಾರಾಂತ್ಯ ಕಪ್ರ್ಯೂ ಮುಂದುವರಿಸುವ ಚಿಂತನೆಯಲ್ಲಿದೆ ಇದೆ ಎನ್ನಲಾಗಿದೆ. ಆದರೆ ಇದರಿಂದ ಯಾವುದೇ ಲಾಭವಿಲ್ಲ. ಕೊರೋನಾ ಮೂರನೇ ಅಲೆ ಅಷ್ಟೊಂದು ಪ್ರಬಲವಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. 
 

Video Top Stories