Asianet Suvarna News Asianet Suvarna News

ಹೀ ಈಸ್ ಸೂಪರ್‌ಮ್ಯಾನ್, ಸ್ಕ್ರೀನ್‌ ಶೇರ್‌ ಮಾಡೋದಂದ್ರೆ ನಾನ್‌ ತುಂಬಾ ಲಕ್ಕಿ: ಪ್ರಭುದೇವ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ರಾಕ್‌ಲೈನ್ ಎಂಟರ್‌ಟೇನ್‌ಮೆಂಟ್‌ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ 'ಪ್ರೊಡಕ್ಷನ್ ನಂ 47' ಚಿತ್ರದ ಮುಹೂರ್ತ ಸಮಾರಂಭ ರಾಕ್‌ಲೈನ್ ಸ್ಟುಡಿಯೋದಲ್ಲಿ ನಡೆದಿದ್ದು, ಚಿತ್ರದ ಬಗ್ಗೆ ಪ್ರಭುದೇವ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ರಾಕ್‌ಲೈನ್ ಎಂಟರ್‌ಟೇನ್‌ಮೆಂಟ್‌ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ 'ಪ್ರೊಡಕ್ಷನ್ ನಂ 47' ಚಿತ್ರದ ಮುಹೂರ್ತ ಸಮಾರಂಭ ರಾಕ್‌ಲೈನ್ ಸ್ಟುಡಿಯೋದಲ್ಲಿ ನಡೆದಿದೆ. ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅವರು ನಟಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದು, ಚಿತ್ರದ ಬಗ್ಗೆ ಪ್ರಭುದೇವ ಮಾತನಾಡಿದ್ದಾರೆ. ಎಲ್ಲರಿಗೂ ನಮಸ್ಕಾರ, ತುಂಬಾ ವರ್ಷಗಳ ನಂತರ ಅಂದರೆ H2O ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಮೊದಲ ಬಾರಿಗೆ ಶಿವಣ್ಣ ಜೊತೆ ತೆರೆ ಹಂಚಿಕೊಳ್ಳುತ್ತಿದ್ದೇನೆ. ಶಿವಣ್ಣ ಹೀ ಈಸ್ ಸೂಪರ್‌ಮ್ಯಾನ್, ಸ್ಕ್ರೀನ್‌ ಶೇರ್‌ ಮಾಡೋದಂದ್ರೆ ನಾನ್‌ ತುಂಬಾ ಲಕ್ಕಿ. ಈ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ ಅನ್ನೋದಕ್ಕಿಂತ ಶಿವಣ್ಣ ಬಾಯಿಂದ ಒಳ್ಳೆಯ ಹುಡುಗ ಹಾಗೂ ಡ್ಯಾನ್ಸರ್ ಎಂದು ಹೇಳಿಸಿಕೊಳ್ಳಬೇಕೆಂದು ಪ್ರಭುದೇವ ಹೇಳಿದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies