Asianet Suvarna News Asianet Suvarna News

ನಟಿ ಚೇತನಾ ರಾಜ್ ನಿಧನ: ಬಣ್ಣದ ಜಗತ್ತಿನ ಕಹಿ ಸತ್ಯ ಬಿಚ್ಚಿಟ್ಟ ಮೋಹಕ ತಾರೆ ರಮ್ಯಾ!

ಬಣ್ಣದ ಜಗತ್ತಿನಲ್ಲಿ ಮಿಂಚಬೇಕು ಅಂತ ತನ್ನ ಬೊಜ್ಜು ಕರಗಿಸೋ ಟ್ರೀಟ್ಮೆಂಟ್ ಪಡೆದು ಕಿರುತೆರೆ ನಟಿ ಚೇತನಾ ರಾಜ್ 21ನೇ ವಯಸ್ಸಿಗೆ ಪ್ರಾಣ ಬಿಟ್ಟಿದ್ದಾರೆ. ಈ ವಿಷಯ ತಿಳಿದು ಸ್ಯಾಂಡಲ್‌ವುಡ್ ಪದ್ಮಾವತಿ ನಟಿ ರಮ್ಯಾ ಈಗ ಮೌನ ಮುರಿದಿದ್ದಾರೆ. 

ಬಣ್ಣದ ಜಗತ್ತಿನಲ್ಲಿ ಮಿಂಚಬೇಕು ಅಂತ ತನ್ನ ಬೊಜ್ಜು ಕರಗಿಸೋ ಟ್ರೀಟ್ಮೆಂಟ್ ಪಡೆದು ಕಿರುತೆರೆ ನಟಿ ಚೇತನಾ ರಾಜ್ (Chetana Raj) 21ನೇ ವಯಸ್ಸಿಗೆ ಪ್ರಾಣ ಬಿಟ್ಟಿದ್ದಾರೆ. ಈ ವಿಷಯ ತಿಳಿದು ಸ್ಯಾಂಡಲ್‌ವುಡ್ (Sandalwood) ಪದ್ಮಾವತಿ ನಟಿ ರಮ್ಯಾ (Ramya) ಈಗ ಮೌನ ಮುರಿದಿದ್ದಾರೆ. ಸೋಷಿಯಲ್ ಸಮುದ್ರದಲ್ಲಿ ಸಖತ್‌ ಆಕ್ಟಿವಾಗಿರೋ ಮೋಹಕ ತಾರೆ ಇದೀಗ ಚಿತ್ರರಂಗದ ಕೆಲವು ಕಹಿ ಸತ್ಯಗಳನ್ನ ಬಿಚ್ಚಿಟ್ಟಿದ್ದಾರೆ. ಕಿರುತೆರೆ ನಟಿ ಚೇತನಾ ರಾಜ್ ನಿಧನ ಸುದ್ದಿ ತಿಳಿದ ರಮ್ಯಾ ಬಣ್ಣದ ಜಗತ್ತಿನಲ್ಲಿ ನಟಿಯರು ಎಂಥಹ ಸವಾಲುಗಳನ್ನ ಎದುರಿಸುತ್ತಾರೆ ಅನ್ನೋ ಸತ್ಯವನ್ನ ಹೊರ ಹಾಕಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪತ್ರ ಬರೆದಿದ್ದಾರೆ. ಸಿನಿಮಾರಂಗ ಹೇಗಿದೆ? ಇಲ್ಲಿ ನಟಿಯರನ್ನು ಯಾವ ರೀತಿ ಅಳೆಯಲಾಗುತ್ತೆ.? ಎಂಬ ವಿಚಾರಗಳು ಈ ಪತ್ರದಲ್ಲಿದೆ. 

''ಪ್ಲಾಸ್ಟಿಕ್ ಸರ್ಜರಿ ಬಳಿಕ ಯುವ ನಟಿ ನಿಧನ ಆದ ಸುದ್ದಿ ಓದಿದೆ. ಚಿತ್ರರಂಗ ಸ್ತ್ರೀಯರ ಸೌಂದರ್ಯಕ್ಕೆ ಸಂಬಂಧಿಸಿ ಅತ್ಯಂತ ಕೆಟ್ಟ ಮಾನದಂಡ ನಿಗಧಿ ಮಾಡುತ್ತಾರೆ. ಮಹಿಳೆಯರ ಮೇಲೆ ಅಸಹಜವಾದ ಬ್ಯೂಟಿ ಸ್ಟ್ಯಾಂಡರ್ಡ್ಗಳನ್ನು ಹೇರಲಾಗುತ್ತೆ. ಯಾವ ರೀತಿ ಕಾಣಬೇಕು ಎಂಬ ಬಗ್ಗೆ ಮಹಿಳೆಯರ ಮೇಲೆ ತೀವ್ರ ಒತ್ತಡ ಇದೆ. ನಾನು 2018ರಲ್ಲಿ ಕಾಲಿನ ಟ್ಯೂಮರ್ ಸಮಸ್ಯೆಗೆ ಒಳಗಾಗಿದ್ದೆ. ನನ್ನ ಕಾಲಿನ ಗಡ್ಡೆ ತೆಗೆದ ಬಳಿಕ ನಾನು ಕೂಡ ದಪ್ಪ ಆದೆ ದೇಹದ ತೂಕದ ಸಮಸ್ಯೆ ಅನುಭವಿಸಿದೆ. ನಾನು ನನ್ನದೇ ಆದ ಮಾರ್ಗದ ಮೂಲಕ ತೂಕ ಇಳಿಸಿಕೊಂಡೆ. ಸ್ತ್ರೀಯರು ಬೇಗ ತೂಕ ಇಳಿಸಿಕೊಳ್ಳಬೇಕು ಅಂತ ಒತ್ತಡಕ್ಕೆ ಒಳಗಾದ ಹಲವು ಉದಾಹರಣೆಗಳಿವೆ. ಜೀವ ಕಳೆದುಕೊಂಡ ನಟಿಯ ಬಗ್ಗೆ ಸಹಾನುಭೂತಿ ಇದೆ. ಆದ್ರೆ ಈ ಮಾನದಂಡ ಪುರುಷರಿಗೆ ಅನ್ವಯ ಆಗಲ್ಲ. 

ಹೀರೋ ಆದವರು ಡೊಳ್ಳು ಹೊಟ್ಟೆ ಇಟ್ಟುಕೊಂಡು, ತಲೆಕೂದಲು ಉದುರಿ ಹೋಗಿ ವಿಗ್ ಹಾಕಿಕೊಂಡರೂ ಹೀರೋ ಅಂತ ಪರಿಗಣಿಸಲಾಗುತ್ತೆ. ಮುಖದಲ್ಲಿ ಒಂದೊಂದು ಗಲ್ಲ 5 ಕೆಜಿ ಇದ್ದರೂ ಸಮಸ್ಯೆಯಿಲ್ಲ. 65 ವರ್ಷವಾದರೂ ಅವರು ಹೀರೋ. ಆದರೆ ಸ್ತ್ರೀ ಸ್ಥಿತಿ ಹಾಗಿಲ್ಲ. ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಹಣೆಪಟ್ಟಿ ಕಟ್ಟಿ ಟ್ರೋಲ್ ಮಾಡ್ತಾರೆ. ಮಹಿಳೆ ಹೇಗಿರಬೇಕು ಎಂದು ಜಗತ್ತು ಹೇಳುವುದು ಬೇಡ. ಸಿನಿಮಾ ಇಂಡಸ್ಟ್ರಿ ಬದಲಾಗಬೇಕು. ಸಂಭಾವನೆ ತಾರತಮ್ಯ, ಬ್ಯೂಟಿ ಸ್ಟ್ಯಾಂಡರ್ಡ್, ಪಾತ್ರಗಳ ತಾರತಮ್ಯದ ವಿರುದ್ಧ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಹೋರಾಡಬೇಕು". ಮೋಹಕ ತಾರೆ ರಮ್ಯಾ ಬ್ಯೂಟಿಗೆ ಮನಸೋಲದ ಮನಸ್ಸುಗಳೇ ಇಲ್ಲ. ಇಂದಿಗೂ ಅದೆಷ್ಟೋ ಮಂದಿಗೆ ಈಕೆಯೇ ಸೌಂದರ್ಯ ದೇವತೆ. ಆದ್ರೆ ಇತ್ತೀಚೆಗೆ ರಮ್ಯಾ ಫಿಟ್ನೆಸ್ ಕಳೆದುಕೊಂಡಿದ್ದಾರೆ ಅಂತೆಲ್ಲಾ ಅವ್ರ ಫಾಲೋವರ್ಸ್ ಕಮೆಂಟ್ ಮಾಡ್ತಾರೆ. ಇದರ ಹಿಂದೆ ಒಂದು ಕಾರಣವೂ ಇದೆ. ರಮ್ಯಾಗೆ 2018ರಲ್ಲಿ ಕಾಲಿನ ಶಸ್ತ್ರಚಿಕಿತ್ಸೆ ಆಗಿತ್ತು. 

Exclusive: ರಮ್ಯಾ ಜೊತೆ ಸಿನಿಮಾ ಮಾಡ್ತಾರೆ ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿ!

ಕಾಲಿನಲ್ಲಿ ಆದ ಗಡ್ಡೆಯನ್ನ ತೆಗೆಯಲು ಆಪರೇಷನ್ ಮಾಡಲಾಗಿತ್ತು. ಅದೇ ಸಮಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನಿಧನ ಆದ್ರು. ಆದ್ರೆ ಅಂಬಿಯನ್ನ ಕೊನೆಯ ಭಾರಿ ನೋಡಲು ರಮ್ಯಾ ಬರಲಿಲ್ಲ. ಇದಕ್ಕೆ ಕಾರಣ ರಮ್ಯಾ ಕಾಲಿಗೆ ಆದ ಆಪರೇಷನ್. ಬಳಿಕ ಪದ್ಮಾವತಿ ಸಿಕ್ಕಾಪಟ್ಟೆ ದಪ್ಪ ಆಗಿದ್ರು. ಈಗಲೂ ರಮ್ಯಾ ತನ್ನ ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದು ಕೂಡ ನ್ಯಾಚ್ಯೂರಲ್ ಆಗಿ. ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಇದೆ ಎಂಬ ರಮ್ಯಾ ಟ್ವೀಟ್‌ಗೆ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಧ್ವನಿಗೂಡಿಸಿದ್ದಾರೆ. ರಮ್ಯಾ ಅವರ ಮಾತಿನಲ್ಲಿ ಸತ್ಯ ಇದೆ. ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಇದೆ. ನನಗೂ ಸಾಕಷ್ಟು ಕಮೆಂಟ್ ಗಳು ಬಂದಿವೆ. ದಪ್ಪ ಆಗೋದು, ಸಣ್ಣ ಆಗೋದು ಅದು ನಮ್ಮ ಪರ್ಸನಲ್. ಮಹಿಳೆಯರು ಸಣ್ಣ ದಪ್ಪ ಆಗೋ ಬಗ್ಗೆ ಕಮೆಂಟ್ ಮಾಡೊದು ತಪ್ಪು ನಾನು ಕೆರಿಯರ್‌ನ ಬೇರೆ ತರ ನೋಡಿಕೊಂಡು ಮುಂದೆ ಹೋಗ್ತಿದ್ದಿನಿ. ಮದ್ವೆ ಆದ ಮೇಲೆ ಹೀರೋಗಳಿಗೆ ಯಾವ್ದು ನಿಮ್ಮ ಕಂಬ್ಯಾಕ್ ಸಿನಿಮಾ ಅಂತ ಕೇಳಲ್ಲ. ಅದ್ರೆ ನಮಗೆ ಮದ್ವೆ ಅಗಿ ಮಕ್ಕಳಾದ ಮೇಲೆ ಕಂಬ್ಯಾಕ್ ಸಿನಿಮಾ ಅಂತಾರೆ ಈ ರೀತಿಯ ಮೈಂಡ್ ಸೆಟ್ ನಮ್ಮ ಚಿತ್ರರಂಗದಲ್ಲಿದೆ ಅಂದಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories