Asianet Suvarna News Asianet Suvarna News

'ಅವನೇ ಶ್ರೀಮನ್ನಾರಾಯಣ' ನಿರ್ದೇಶಕರ ಜೊತೆ ಶಿವಣ್ಣ ಸಿನಿಮಾ: ಅಶ್ವತ್ಥಾಮನಾಗಲಿದ್ದಾರೆ ಸೆಂಚುರಿ ಸ್ಟಾರ್?

‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕ ಸಚಿನ್‌ ರವಿ ನಿರ್ದೇಶನದ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅಶ್ವತ್ಥಾಮನಾಗಿ ನಟಿಸಲಿದ್ದಾರೆ. ಮಹಾಭಾರತದ ಅಮರತ್ವ ಪಡೆದ ಅಶ್ವತ್ಥಾಮನ ಸುತ್ತ ಈ ಕತೆ ಇದೆ. ಈ ಆ್ಯಕ್ಷನ್‌ ಚಿತ್ರದಲ್ಲಿ ಶಿವಣ್ಣ ಸೂಪರ್‌ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.

‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕ ಸಚಿನ್‌ ರವಿ (Sachin Ravi) ನಿರ್ದೇಶನದ ಚಿತ್ರದಲ್ಲಿ ಶಿವರಾಜ್‌ಕುಮಾರ್‌ (Shivarajkumar) ಅಶ್ವತ್ಥಾಮನಾಗಿ (Ashwatthama) ನಟಿಸಲಿದ್ದಾರೆ. ಮಹಾಭಾರತದ ಅಮರತ್ವ ಪಡೆದ ಅಶ್ವತ್ಥಾಮನ ಸುತ್ತ ಈ ಕತೆ ಇದೆ. ಈ ಆ್ಯಕ್ಷನ್‌ ಚಿತ್ರದಲ್ಲಿ ಶಿವಣ್ಣ ಸೂಪರ್‌ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮೂಲಕ ಸಚಿನ್‌ ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ. ತಮ್ಮ ಹೋಮ್‌ ಬ್ಯಾನರ್‌ ಜೊತೆಗೆ ಕಾರ್ಪೊರೆಟ್‌ ಕಂಪನಿಯೊಂದರ ಜೊತೆಗೂಡಿ ಸಿನಿಮಾ ನಿರ್ಮಿಸುತ್ತಿದ್ದಾರೆ. ‘ಕನ್ನಡದ ಮಟ್ಟಿಗೆ ಸೂಪರ್‌ ಹೀರೋ ಪರಿಕಲ್ಪನೆಯಲ್ಲಿ ಬರುತ್ತಿರುವ ಮೊದಲ ಚಿತ್ರವಿದು. 

ನನಗೆ 60 ವರ್ಷ ಯಂಗ್‌ಸ್ಟರ್ಸ್‌ಗೆ ಏನ್ ಸಲಹೆ ಕೊಡ್ಲಿ ಅವರೇ ನನಗೆ ಸಲಹೆ ಕೊಡಬೇಕು: ಶಿವಣ್ಣ

ಶಿವಣ್ಣ ಈವರೆಗೆ ಕಾಣಿಸಿಕೊಳ್ಳದ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಎಫ್‌ಎಕ್ಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ’ ಎಂದರು. ಸೆಪ್ಟೆಂಬರ್‌ನಿಂದ ಶೂಟಿಂಗ್‌ ಆರಂಭವಾಗಲಿದೆ. ಅಂದಹಾಗೆ ಶಿವಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬೈರಾಗಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ನೀ ಸುಗೋವರೆಗೂ, ವೇದಾ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಅವನೇ ಶ್ರೀಮನ್ನಾರಾಯಣ ನಿರ್ದೇಶಕರ ಜೊತೆಯೂ ಸಿನಿಮಾ ಮಾಡುವ ಮೂಲಕ ಸಾಲು ಸಾಲು ಸಿನಿಮಾಗಳ ಲಿಸ್ಟ್ ಗೆ ಈ ಹೊಸ ಸಿನಿಮಾ ಸೇರ್ಪಡೆಯಾಗಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies