Asianet Suvarna News Asianet Suvarna News

PFI ಮೇಲೆ NIA ದಾಳಿ ಹಿಂದಿದೆ 2018ರ ಕರಾಟೆ ಕ್ಲಾಸ್ ಘಟನೆ!

ಪಿಎಫ್ಐ ಮೇಲೆ ಎನ್ಐಎ ದಾಳಿ, ದೇಶಾದ್ಯಂತ ಪ್ರತಿಭಟನೆ,  ಶಿವಮೊಗ್ಗದಲ್ಲಿ ಅರೆಸ್ಟ್ ಆಗಿರುವ ಶಂಕಿತರ ಉಗ್ರರಿಗೆ ತರಬೇತಿ ನೀಡಿದ್ದ ಮಾಸ್ಟರ್ ಮೈಂಡ್ ಬಂಧನ, ರಾಜ್ಯದಲ್ಲಿ ನಿಲ್ಲದ ಪೋಸ್ಟರ್ ರಾಜಕೀಯ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ 2018ರಲ್ಲಿ ಬಿಹಾರದ ಪಾಟ್ನಾಗೆ ತೆರಳುವು ಮುನ್ನ ಸ್ಫೋಟಕ ಮಾಹಿತಿ ಹೊರಬಿದ್ದಿತ್ತು. ಪಾಟ್ನಾದ ಕರಾಟೆ ಕಲಿಕಾ ಶಾಲೆ ಮೇಲೆ ದಾಳಿ ನಡೆದಿತ್ತು. ಇಲ್ಲಿ ಕರಾಟೆ ಬದಲು ಶಸ್ತಾಸ್ತ್ರ ತರಬೇತಿ ನೀಡಲಾಗುತ್ತಿತ್ತು. ಇಷ್ಟೇ ಅಲ್ಲ 2047ರಲ್ಲಿ ಭಾರತವನ್ನು ಸಂಪೂರ್ಣವಾಗಿ ಇಸ್ಲಾಮ್ ರಾಷ್ಟ್ರ ಮಾಡುವ ಪುಸ್ತಕವೊಂದು ಲಭ್ಯವಾಗಿತ್ತು. ಈ ಕರಾಟೆ ಕ್ಲಾಸ್ ಬಳಿಕ ಎನ್ಐಎ ಭಾರತದಲ್ಲಿ ಹದ್ದಿನ ಕಣ್ಣಿಟ್ಟಿತು. ಇದರ ಮುಂದುವರಿದ ದಾಳಿಯೇ ಇದೀಗ ಪಿಎಫ್ಐ ಮೇಲಿನ ಎನ್ಐ ದಾಳಿ. ಇತ್ತ ಶಿವಮೊಗ್ಗ ಶಂಕಿತರಿಗೆ ತರಬೇತಿ ನೀಡಿದ ಮಾಸ್ಟರ್ ಮೈಂಡ್ ಅರೆಸ್ಟ್ ಆಗಿದ್ದಾನೆ. ಶಿವಮೊಗ್ಗದ್ದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರ ವಿಚಾರಣೆಯಲ್ಲಿ ಹಲವು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಬಂಧಿತ ಶಂಕಿತರಿಗ ಉಗ್ರ ತರಬೇತಿ ನೀಡಿದ ಮಾಸ್ಟರ್ ಮೈಂಡ್ ಮತೀನ್ ಅರೆಸ್ಟ್ ಆಗಿದ್ದಾನೆ. ಇದೇ ಮತೀನ್ ಸುಳಿವು ನೀಡಿದವರಿಗೆ NIA 3 ಲಕ್ಷ ರೂಪಾಯಿ ಘೋಷಿಸಿತ್ತು. ಐಸಿಸ್ ಜೊತೆ ನೇರವಾಗಿ ಸಂಪರ್ಕ ಹೊಂದಿದ್ದ ಮತೀನ್ ಹಿಸ್ಟರಿ ಭಯಾನಕವಾಗಿದೆ.