ಸಾವಿನ ಸನಿಹ ಹನಿ ತುಪ್ಪಕ್ಕಾಗಿ ಹರಸಾಹಸ: ಮೈ ರೋಮಾಂಚನಗೊಳಿಸುತ್ತೆ ಹನಿ ಹನಿ ಜೇನ್ ಕಹಾನಿ!

ಜೇನುತುಪ್ಪ ಅಂದ್ರೆ ಬಹುತೇಕ ಎಲ್ಲರಿಗೂ ಇಷ್ಟ. ಆದ್ರೆ, ಇಲ್ಲೊಂದ್ರೀತಿಯ ಜನರಿದ್ದಾರೆ. ಅವರಿಗೆ, ಜೇನುತುಪ್ಪಕ್ಕಿಂತ ಜೇನುನೊಣಗಳು ಅಂದ್ರೇನೆ ಇಷ್ಟ. ಅವುಗಳನ್ನೇ ಬಾಯಿ ಚಪ್ಪರಿಸಿಕೊಂಡು ತಿಂತಾರೆ. 

Girish Goudar  | Published: Jan 25, 2025, 10:48 AM IST

ಬೆಂಗಳೂರು(ಜ.25):  ತುಪ್ಪ.. ಹನಿ ಜೇನುತುಪ್ಪ.. ಸವಿ ಸವಿಯಾದ ಜೇನುತುಪ್ಪ.. ಆ ಸವಿ ತುಪ್ಪಕ್ಕಾಗಿ ಸಾವಿನ  ಸನಿಹದಲ್ಲಿಯೇ ಸಾಹಸ.. ಮೂರು ಗುಂಪುಗಳಿಂದ ತುಪ್ಪ ಕೀಳೋಕೆ ಹಿಮಾಲಯದ ತಪ್ಪಲಿನಲ್ಲಿ ನಡೆಯೋದು ನಿಜಕ್ಕೂ ಅಕ್ಷರಶಃ ಮಹಾಸಾಹಸ.. ಮಿಸ್ ಆದ್ರೆ ಪ್ರಾಣ ಉಳಿಯೋದಿಲ್ಲ ಅಂತ ಗೊತ್ತು.. ಆದ್ರೂ ಕುಗ್ಗೋದಿಲ್ಲ ಅವರ ಧೈರ್ಯ, ತಾಕತ್ತು. ಜೇನುಗಳ ವಿಸ್ಮಯ ಲೋಕದ ಬಗ್ಗೆ ನಿಮಗೆ ಎಷ್ಟು ಗೊತ್ತು..? ಬಾಯಿ ಚಪ್ಪರಿಸಿಕೊಂಡು ತಿನ್ನೋ ತುಪ್ಪದ ಹಿಂದೆ ಜೇನುನೊಣಗಳ ಅದೆಷ್ಟು ಶ್ರಮ ಇರುತ್ತೆ ಗೊತ್ತಾ..? ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.

ಒಬ್ಬ ಇದ್ದಾನೆ.. ಆತ ನಡೆದುಕೊಂಡು ಬರ್ತಿದ್ರೆ, ಜೇನುಗೂಡೇ ನಡೆದುಕೊಂಡು ಬರ್ತಿದ್ಯೇನೋ ಅನ್ಬೇಕು. ಆ ಮಟ್ಟಿಗೆ ಆತನ ಮೈ ತುಂಬಾ ಜೇನುನೊಣಗಳು ಮುತ್ತಿಕೊಂಡಿರುತ್ವೆ. ಹಾಗಿದ್ರೂ ಆತನಿಗೆ ಏನೂ ಆಗಲಿಲ್ವಾ.?. ಮೈ ತುಂಬಾ ಜೇನು.. ಜೇನು.. ಇವನದ್ದು ಅದೇನ್ ಮೀಟ್ರು. ಟ್ರಾಫಿಕ್ ಪೊಲೀಸ್ ಮೇಲೆ ಜೇನುನೊಣಗಳ ಡೆಡ್ಲಿ ಆಟ್ಯಾಕ್.. ರಸ್ತೆ ಮಧ್ಯೆ ಬಿದ್ದು ಒದ್ದಾಡಿದ್ರೂ ಯಾರು ಬರಲಿಲ್ಲ ಸಹಾಯಕ್ಕೆ. ಜೇನುನೊಣಗಳ ತಂಟೆಗೆ ಹೋಗಿ ಕಕ್ಕಾಬಿಕ್ಕಿಯಾಗಿ ಓಡಿದ್ದು ಹೇಗೆ ಯೂಟ್ಯೂಬರ್​?

ಧರ್ಮ ರಕ್ಷಣೆ: ದಂಡೆತ್ತಿ ಬಂದ ಮುಸ್ಲಿಂ ದೊರೆಗಳ ಎದೆ ನಡುಗಿಸಿದ್ದ ನಾಗಾಸಾಧುಗಳು!

ಜೇನುತುಪ್ಪ ಅಂದ್ರೆ ಬಹುತೇಕ ಎಲ್ಲರಿಗೂ ಇಷ್ಟ. ಆದ್ರೆ, ಇಲ್ಲೊಂದ್ರೀತಿಯ ಜನರಿದ್ದಾರೆ. ಅವರಿಗೆ, ಜೇನುತುಪ್ಪಕ್ಕಿಂತ ಜೇನುನೊಣಗಳು ಅಂದ್ರೇನೆ ಇಷ್ಟ. ಅವುಗಳನ್ನೇ ಬಾಯಿ ಚಪ್ಪರಿಸಿಕೊಂಡು ತಿಂತಾರೆ.  ಇವರಿಗೆ ಜೇನುನೊಣಗಳು ಅಂದ್ರೆ ಪಂಚಪ್ರಾಣ. ಎಷ್ಟರ ಮಟ್ಟಿಗೆ ಅಂದ್ರೆ, ಪ್ರಾಣದ ಹಂಗು ತೊರೆದು ಜೇನು ಹಿಡಿದು ತರ್ತಾರೆ. ಮನೆಗೆ ಬಂದು ಅಡುಗೆ ಮಾಡ್ಕೊಂಡು ಜೇನುನೊಣಗಳನ್ನೇ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಬನ್ನಿ, ಆ ಜೇನುಪ್ರಿಯರ ರೋಚಕ ಸ್ಟೋರಿಯನ್ನ ನೋಡ್ಕೊಂಡು ಬರೋಣ.