ನರಭಕ್ಷಕ ತೋಳಗಳ ಪ್ರತೀಕಾರಕ್ಕೆ ಬಲಿಯಾದ್ರಾ 9 ಮಕ್ಕಳು: ತೋಳಗಳಿಗೂ ಇದ್ಯಾ ಹಾವಿನಂತಹ ದ್ವೇಷ?

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನರಭಕ್ಷಕ ತೋಳಗಳ ಪ್ರತೀಕಾರಕ್ಕೆ ಬಲಿಯಾದ್ರಾ 9 ಮಕ್ಕಳು: ತೋಳಗಳಿಗೂ ಇದ್ಯಾ ಹಾವಿನಂತಹ ದ್ವೇಷ? ಈ ಬಗ್ಗೆ ವನ್ಯಜೀವಿ ತಜ್ಞ ಕೃಪಾಕರ್ ಏನಂತಾರೆ ಇಲ್ಲಿದೆ ಡಿಟೇಲ್ ಸ್ಟೋರಿ.

First Published Sep 16, 2024, 4:19 PM IST | Last Updated Sep 16, 2024, 4:19 PM IST

ಗೂಂಡಾಗಳ ಹುಟ್ಟಡಗಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್​ಗೆ ತೋಳಗಳ ಸೆರೆಹಿಡಿಯೋದೆ ದೊಡ್ಡ ಚಾಲೆಂಜ್ ಆಗಿದೆ. ಬೆಹ್ರೀಚ್​ ಜಿಲ್ಲೆಯಲ್ಲಿ ಶುರುವಾಗಿದ್ದ ತೋಳಗಳ ಕಾಟದಿಂದ ಅಲ್ಲಿನ ಜನ ಮಾತ್ರ ನಿದ್ದೆಗೆಡಲಿಲ್ಲ. ಅವರ ಜೊತೆ ಉತ್ತರ ಪ್ರದೇಶದ ಸರ್ಕಾರದ  ನೆಮ್ಮದಿಯನ್ನೂ ತೋಳಗಳು ಕಿತ್ತುಕೊಂಡಿವೆ. ತೋಳಗಳ ಸೆರೆ ಹಿಡಿಯೋಕೆ ಅಂತಲೇ ಯೋಗಿ ಸರ್ಕಾರ ಮಹಾ ಕಾರ್ಯಾಚರಣೆ ಶುರು ಮಾಡಿತ್ತು. ಅಲ್ಲಿ ತೋಳಗಳು ಪ್ರತೀಕಾರಕ್ಕೆ ಇಳಿದಿವೆ. ಸೇಡಿಗೆ ಸೇಡು ಅಂತಿವೆ. ಮುಯ್ಯಿಗೆ ಮುಯ್ಯಿ ಅಂತಿವೆ. ನರಭಕ್ಷಕ ತೋಳಗಳಿಂದ  ಅಲ್ಲಿ 9 ಮಕ್ಕಳ ಬಲಿಯಾಗಿವೆ. ಮಕ್ಕಳ ಬೇಟೆಯ ಹಿಂದೆ ಹಗೆಯ ಗುಟ್ಟಿದ್ಯಾ..? ತೋಳಗಳ ಹುಟ್ಟಡಗಿಸೋಕೆ ಅಲ್ಲಿ ಎಂಟ್ರಿ ಕೊಟ್ಟಿದ್ದಾರೆ ಶಾರ್ಪ್​ ಶೂಟರ್​​ಗಳು.. ನಿದ್ದೆಗೆಡಿಸಿದೆ ಒಂಟಿ ತೋಳ..ಎಲ್ಲಿಗೆ ಬಂತು ಆಪರೇಷನ್ ಭೇಡಿಯಾ..? ಯೋಗಿ ನಾಡಲ್ಲಿ ಏನಿದು ತೋಳ ದ್ವೇಷದ ರೋಚಕ ಕಥೆ..? ಇದೇ ಈ ಹೊತ್ತಿನ ಸುವರ್ಣ ಸ್ಪೆಷಲ್ ತೋಳ ದ್ವೇಷ...
 

Video Top Stories