ಭಾರತದ ರೈಲುಗಳ ಮೇಲೆ ಐಸಿಸ್ ಕಣ್ಣು? ಉಗ್ರರ ಕರಿನೆರಳಿಗೆ ಇದೇ ಕಾರಣವಾಯ್ತಾ?

ಭಾರತದ ರೈಲುಗಳ ಮೇಲೆ  ಬಿದ್ದಿದೆ ರಕ್ತ ಪಿಪಾಸು ಐಸಿಸ್ ಉಗ್ರರ ವಕ್ರದೃಷ್ಟಿ.  40 ದಿನಗಳಲ್ಲಿ, ಜಸ್ಟ್ 40 ದಿನಗಳಲ್ಲಿ ನಡೆದಿತ್ತಾ 18 ಸಂಚು. ರೈಲು ಹಳಿಗಳ ಮೇಲೆ ಸಿಗುತ್ತಿರುವ ಗ್ಯಾಸ್ ಸಿಲಿಂಡರ್.. ಪೆಟ್ರೋಲ್ ಬಾಂಬ್..ಕಲ್ಲು.. ಇಟ್ಟಿಗೆ.. ಮರದ ತುಂಡುಗಳು ಹೇಳ್ತಿರೋ ಆ ಸತ್ಯವೇನು..? ಪಾಕ್ ಉಗ್ರನ ಆದೇಶ.. ವಿಧ್ವಂಸಕ್ಕೆ ಕೊಟ್ಟದ್ದುಅದೆಂಥಾ ಸಂದೇಶ..? ಇಲ್ಲಿರುವ ಸ್ಲೀಪರ್ ಸೆಲ್ಗಳು ಜೀ ಹುಜೂರ್ ಅಂದು ಬಿಟ್ರಾ..? ಇದೇ ಈ ಹೊತ್ತಿನ ವಿಶೇಷ, ರೈಲು ವಿಧ್ವಂಸ..ಐಸಿಸ್ ಸಂಚು…!

First Published Sep 16, 2024, 4:25 PM IST | Last Updated Sep 16, 2024, 4:25 PM IST

ನಿರಂತರಾಗಿ ನಡೆಯುತ್ತಿದೆ ರೈಲುಗಳ ಹಳಿ ತಪ್ಪಿಸುವ ಪ್ರಯತ್ನ. ಉಗ್ರನ ಕರೆಯ ಬೆನ್ನೆಲ್ಲೆ ಭಾರತದಲ್ಲಿ ಹೆಚ್ಚುತ್ತಿವೆ ಇಂಥಹ ದುಷ್ಕೃತ್ಯ. ರೈಲುಗಳು ಹಳಿ ತಪ್ಪಬೇಕು..ಅಲ್ಲಿ ಅಪಘಾತವಾಗ ಬೇಕು. ಅಷ್ಟೇ...ಅದಕ್ಕಾಗಿ ನಾನಾ ರೀತಿಯಾ ಪ್ರಯತ್ನಗಳು ನಡೆಯುತ್ತಿವೆ. ಹಾಗಿದ್ರೆ, ಕಳೆದ ಕೆಲ ದಿನಗಳ ಈಚೆಗೆ ರೈಲುಗಳನ್ನ ಹಳಿತಪ್ಪಿಸಲು ಹೇಗೆಲ್ಲಾ ಸಂಚು ನಡೆದಿದ್ವು ಗೊತ್ತಾ..?  ಆ ಕುರಿತ ವಿವರವಾದ ವರದಿ ಇಲ್ಲಿದೆ.

Video Top Stories