ಪ್ರೀತಿಸಿ ಮದುವೆಯಾದವಳೇ ಗಂಡನ ಹೆಣ ಹಾಕಿದ್ಲು! ಗಂಡ ಸಾಯುತ್ತಿದ್ರೆ, ಹೆಂಡತಿ ಮಾಡಿದ್ದೇನು?

ಪ್ರೀತಿಸಿ ಮದುವೆಯಾದ ಪತ್ನಿಯೇ ತನ್ನ ಗಂಡನನ್ನು ಕೊಲೆ ಮಾಡಿ ತನಗೇನೂ ಗೊತ್ತಿಲ್ಲ ಎನ್ನುವಂತೆ ನಾಟಕವಾಡಿದ್ದಳು. ಆದರೆ ಪೊಲೀಸ್ ತನಿಖೆ ವೇಳೆ ಕೊಲೆಗಾರರ ಪತ್ತೆಯಾಗಿದೆ

First Published Sep 16, 2024, 4:03 PM IST | Last Updated Sep 16, 2024, 4:03 PM IST

ಅವರಿಬ್ಬರು ಪ್ರೀತಿಸಿ ಮದುವೆಯಾದವರು. ಗಾರೆ ಕೆಲಸಕ್ಕೆ ಅಂತ ಹೋದಾಗ ಅವರಿಬ್ಬರ ಪರಿಚಯವಾಗಿ ನಂತರ ಪ್ರೀತಿಸಿ ಹೆತ್ತವರ ವಿರೋಧದ ನಡುವೆಯೇ ಮದುವೆಯಾದರು. ಮೂರು ಮಕ್ಕಳೂ ಆದ್ವು. ಬಡತನವಿದ್ದರೂ ನೆಮ್ಮದಿಯಾಗಿ ಜೀವನ ಮಾಡ್ತಿದ್ರು. ಆದ್ರೆ ಆವತ್ತು ಕೆಲಸಕ್ಕೆ ಅಂತ ಹೋದ ಗಂಡ ಹೆಂಡತಿ ವಾಪಸ್​​ ಆಗುವಾಗ ಗಂಡನ ಮೇಲೆ ಅಟ್ಯಾಕ್​ ಆಯ್ತು. ಯಾರೋ ಬಂದು ಗಂಡನ ಮೇಲೆ ಮನಸ್ಸೋ ಇಚ್ಛೆ ಚಾಕು ಹಾಕಿದ್ರು. ಇನ್ನೂ ಪಕ್ಕದಲ್ಲೇ ಇದ್ದ ಹೆಂಡತಿ ಕುಟುಂಬದವರನ್ನ ಕರೆದುಕೊಂಡು ಬರೋಣ ಅಂತ ಓಡಿದ್ಲು. ಆದ್ರೆ ಅವರೆಲ್ಲಾ ಬರುವಷ್ಟರಲ್ಲೇ ಗಂಡ ಹೆಣವಾಗಿ ಬಿದ್ದಿದ್ದ.

ಇದೇ ಕೇಸ್​​ನ ತನಿಖೆ ನಡೆಸಿದ್ದ ಪೊಲೀಸರಿಗೆ ಸಿಕ್ಕಿದ್ದು ಒಂದು ಲವ್​ ಸ್ಟೋರಿ. ಅಷ್ಟಕ್ಕೂ ಯಾವುದು ಆ ಲವ್​ ಸ್ಟೋರಿ..? ಆ ಕಗ್ಗತ್ತಲ ರಾತ್ರಿ ಅಲ್ಲಿ ನಡೆದಿದ್ದೇನು? ಒಂದು ಮರ್ಡರ್​​ ಕೇಸ್​​ನ ರೋಚಕ ಇನ್ವೆಸ್ಟಿಗೇಷನ್​ ಸ್ಟೋರಿ ಇಲ್ಲಿದೆ ನೋಡಿ.

Video Top Stories