ಬೆಂಗಳೂರಿನ ಹೆಣ ತಮಿಳುನಾಡಿನಲ್ಲಿ, ಹಂತಕ ವಾಘಾ ಬಾರ್ಡರ್ನಲ್ಲಿ! ರೋಚಕ ಇನ್ವೆಸ್ಟಿಗೇಷನ್
ಒಬ್ಬ ರೌಡಿ ಶೀಟರ್ನ ಸಾವಿನ ರಹಸ್ಯವನ್ನು ಈ ಕಥೆ ಬಿಚ್ಚಿಟ್ಟಿದೆ. ಹಿಂದೆ ಅನೇಕ ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆತ ಇತ್ತೀಚೆಗೆ ಸೈಲೆಂಟಾಗಿದ್ದ. ಆದರೆ ಒಂದು ದಿನ ಮನೆಯಿಂದ ಹೊರಟವನು ವಾಪಸ್ ಬರಲೇ ಇಲ್ಲ. ಅವನ ಸಾವಿನ ಹಿಂದಿನ ರಹಸ್ಯವೇನು?
ಅವನೊಬ್ಬ ರೌಡಿ. ಕಾಲೇಜು ಮೆಟ್ಟಿಲು ಹತ್ತೋಕು ಮುಂಚೆಯೇ ಜೈಲಿಗೆ ಹೋಗಿ ಬಂದವನು. ಹತ್ತಾರು ಕ್ರಿಮಿನಲ್ ಕೇಸ್ಗಳು. ಆದ್ರೆ ಇತ್ತೆಚೆಗೆ ಎಲ್ಲಾ ಬಿಟ್ಟು ಸೈಲೆಂಟಾಗಿದ್ದ. ಸಣ್ಣಪುಣ್ಣ ಡೀಲ್ಗಳನ್ನ ಮಾಡಿಕೊಂಡು ಚೆನ್ನಾಗಿದ್ದ. ಆದ್ರೆ ಆವತ್ತೊಂದು ದಿನ ಸ್ವಲ್ಪ ಕೆಲಸ ಇದೆ ಅಂತ ಮನೆ ಬಿಟ್ಟು ಹೋದವನು ಮತ್ತೆ ವಾಪಸ್ ಬರಲೇ ಇಲ್ಲ. ಹೆಂಡತಿ ಎಲ್ಲಿ ಹುಡುಕಿದ್ರೂ ಅವನ ಸುಳಿವು ಸಿಗೋದಿಲ್ಲ.. ಕೊನೆಗೆ ಪೊಲೀಸ್ ಕಂಪ್ಲೆಂಟ್ ಕೊಟ್ಟಳು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಅವನ ಡೆಡ್ ಬಾಡಿ ಸಿಕ್ಕಿತ್ತು ಅಷ್ಟಕ್ಕೂ ನಾನೇ ಕಿಲಾಡಿ ಅಂತ ಮೆರೆದವನು ಹೆಣವಾಗಿದ್ದೇಗೆ? ಅವನನ್ನ ಎತ್ತಿಬಿಟ್ರಾ? ಅಥವಾ ಇವನೇ ಏನಾದ್ರೂ ಮಾಡಿಕೊಂಡನಾ? ಒಬ್ಬ ರೌಡಿ ಶೀಟರ್ ಸಾವಿನ ರೋಚಕ ಇನ್ವೆಸ್ಟಿಗೇಷನ್ ಕಥೆಯೇ ಈ ಎಫ್.ಐ.ಆರ್
ಅವರಿಬ್ಬರೂ ರೌಡಿಗಳೇ. ಆದ್ರೆ ಇತ್ತಿಚೆಗೆ ಎಲ್ಲವನ್ನ ಬಿಟ್ಟು ಒಂದು ಹೊಸ ಬ್ಯುಸಿನೆಸ್ ಶುರು ಮಅಡಿದ್ರು. ತಾಮ್ರಕ್ಕೆ ಚಿನ್ನವನ್ನ ಮಿಕ್ಸ್ ಮಾಡಿ ಅದನ್ನ ಮಣಪುರಣನಲ್ಲಿ ಅಡ ಇಡೋದು. ಹೀಗೆ ಲಕ್ಷ ಲಕ್ಷ ಹಣವನ್ನ ಗಳಿಸಿದ್ರು. ಆದ್ರೆ ಒಂದು ದಿನ ಮಣಪುರಂನವರಿಗೆ ಇವರ ಕಳ್ಳಾಟ ಗೊತ್ತಾಗಿ ಹಣವಾಪಸ್ ಕೊಡಲು ಹೇಳಿದ್ರು. ಇಲ್ಲಾಂದ್ರೆ ಕೇಸ್ ದಾಖಲಿಸೋದಾಗಿ ಹೇಳಿದ್ರು. ಇದೆ ಕಾರಣಕ್ಕೆ ಆವತ್ತು ಗುಣ, ಜಿತೇಶನ ಬಳಿ ದುಡ್ಡು ತಗೆದುಕೊಳ್ಳೋಕೆ ಹೋಗಿದ್ದ. ಆದ್ರೆ ಹಣ ಕೊಡೋ ಬದಲುಇ ಜಿತೇಶ ತನ್ನ ಸ್ನೇಹಿತನನ್ನೇ ಕೊಂದು ಮುಗಿಸಿದ್ದ. ನಂತರ ಮೃತದೆಹವನ್ನ ತಮಿಳುನಾಡಿನಲ್ಲಿ ಸುಟ್ಟಿ, ಸೀದಾ ವಾಘಾ ಬಾರ್ಡರ್ನಲ್ಲಿ ಹೋಗಿ ಕೂತಿದ್ದ.