ಮತ್ತೆ ಮದುವೆ ಆದ್ರಾ ಕೆಜಿಎಫ್​ನ ಅಧೀರ ಸಂಜಯ್ ದತ್?

ಕೆಜಿಎಫ್​ನ ಅಧೀರ ಸಂಜಯ್ ದತ್ ಮತ್ತೆ ಮದುವೆ ಆಗಿದ್ದಾರೆ. ಹಾಗಂತ ನಟ ಸಂಜಯ್ ದತ್ ತನ್ನ 65ನೇ ವಯಸ್ಸಿನಲ್ಲಿ ಮತ್ತೆ ಮದುವೆ ಆಗಿದ್ದಾರೆ. ಹಾಗಂತ ಸಂಜಯ್​​ ದತ್​ಗೆ ಇದು ನಾಲ್ಕನೇ ಮದುವೆ ಅಲ್ಲ. 

First Published Oct 13, 2024, 10:13 AM IST | Last Updated Oct 13, 2024, 10:13 AM IST

ಕೆಜಿಎಫ್​ನ ಅಧೀರ ಸಂಜಯ್ ದತ್ ಮತ್ತೆ ಮದುವೆ ಆಗಿದ್ದಾರೆ. ಹಾಗಂತ ನಟ ಸಂಜಯ್ ದತ್ ತನ್ನ 65ನೇ ವಯಸ್ಸಿನಲ್ಲಿ ಮತ್ತೆ ಮದುವೆ ಆಗಿದ್ದಾರೆ. ಹಾಗಂತ ಸಂಜಯ್​​ ದತ್​ಗೆ ಇದು ನಾಲ್ಕನೇ ಮದುವೆ ಅಲ್ಲ. ಮೂರನೇ ಮದುವೆ ಆಗಿದ್ದ ಮಾನ್ಯತಾ ಜೊತೆ ಸಂಜಯ್ ದತ್ ಮತ್ತೆ ಮದುವೆ ಆಗಿದ್ದಾರೆ. ಸಂಜಯ್ ದತ್ ಹಾಗು ಮಾನ್ಯತಾ 16 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು. ಈ ವಿಶೇಷ ದಿನದ ಸಂದರ್ಭದಲ್ಲಿ ಇಬ್ಬರೂ ಮತ್ತೊಮ್ಮೆ ಸಪ್ತಪದಿ ತುಳಿದಿದ್ದಾರೆ.

'ಕೊರಗಜ್ಜ' ನಿರ್ದೇಶಕನಿಗೆ ನಿರ್ಮಾಪಕರಿಂದ ಭರ್ಜರಿ ಗಿಫ್ಟ್.!: ಬಹುಕೋಟಿ ಬಜೆಟ್ ನ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ "ಕೊರಗಜ್ಜ"..  ಈ ಸಿನಿಮಾ ಶೂಟಿಂಗ್ ಮುಗಿದಿದ್ದು, ಸಿನಿಮಾ ನೋಡಿದ ಕೊರಗಜ್ಜ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಖುಷಿ ಪಟ್ಟಿದ್ದು, ನಿರ್ದೇಶಕ ಸುಧೀರ್ ಅತ್ತಾವರ್ ರವರಿಗೆ ಟಾಪ್ ಎಂಡ್ ಕಿಯಾ ಕೇರನ್ಸ್ ಕಾರನ್ನೇ ಗಿಫ್ಟ್​ ಆಗಿ ಕೊಟ್ಟಿದ್ದಾರೆ. ಕಾಂತಾರ ಸಿನಿಮಾ ಬಂದ ಮೇಲೆ ಮಂಗಳೂರಿನ ಕಥೆಯನ್ನೇ ಇಟ್ಟುಕೊಂಡು ಕೊರಗಜ್ಜ ಸಿನಿಮಾ ಈಗ ಸಿದ್ಧವಾಗಿದೆ. ಡಿಸೆಂಬರ್​ನಲ್ಲಿ "ಕೊರಗಜ್ಜ" ಸಿನಿಮಾ ತೆರೆ ಮೇಲೆ ಬರಲಿದೆ. 

ಭಾರತದ ಮೊದಲ ಮಹಿಳಾ ಸೂಪರ್ ಹೀರೋ 'ಮಹಾಕಾಳಿ': ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ ಈಗ ಮಹಾಕಾಳಿ ಕಥೆಯನ್ನ ತೆರೆ ಮೇಲೆ ತರೋದಕ್ಕೆ ಸಿದ್ಧವಾಗಿದ್ದಾರೆ. ಪ್ರಶಾಂತ್ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಮಹಾಕಾಳಿ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ. ಮಹಾಕಾಳಿ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಮಹಿಳಾ ನಿರ್ದೇಶಕಿ ಪೂಜಾ ಅಪರ್ಣಾ ಕೊಲ್ಲೂರು, ಮಹಾಕಾಳಿ ಸಾರಥ್ಯ ವಹಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ.