ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಡೇವಿಡ್ ವಾರ್ನರ್: ಈ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ!

ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್​ ವಾರ್ನರ್​ಗೆ ತೆಲುಗು ಸಿನಿಮಾಗಳ ಹಾಡು, ಡೈಲಾಗ್​​ಗಳಿಗೆ ರೀಲ್ಸ್​ ಮಾಡಿ ಇಂಡಿಯಾದಲ್ಲಿ ದೊಡ್ಡ ಫ್ಯಾನ್ಸ್​ ಬೇಸ್ ಹೊಂದಿದ್ದಾರೆ. 

First Published Oct 12, 2024, 12:55 PM IST | Last Updated Oct 12, 2024, 12:55 PM IST

ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್​ ವಾರ್ನರ್​ಗೆ ತೆಲುಗು ಸಿನಿಮಾಗಳ ಹಾಡು, ಡೈಲಾಗ್​​ಗಳಿಗೆ ರೀಲ್ಸ್​ ಮಾಡಿ ಇಂಡಿಯಾದಲ್ಲಿ ದೊಡ್ಡ ಫ್ಯಾನ್ಸ್​ ಬೇಸ್ ಹೊಂದಿದ್ದಾರೆ. ಇದೀಗ ಡೇವಿಡ್ ವಾರ್ನರ್​ ತೆಲುಗು ನಟ ನಿತಿನ್ ನಟಿಸುತ್ತಿರುವ ‘ರಾಬಿನ್​ಹುಡ್’ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಡೇವಿಡ್ ವಾರ್ನರ್ ‘ರಾಬಿನ್ ಹುಡ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡ್ತಾ ಇದ್ದಾರೆ. 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೆಚ್ಚಿದ "ಆಪರೇಷನ್ ಡಿ": ಧ್ರುವ ಸರ್ಜಾ ಮಾರ್ಟಿನ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದರ ಮಧ್ಯೆ ಭಾರ್ಗವಿ ಮುರಳಿ, ರಂಗನಾಥ್ ಬಿ ನಿರ್ಮಿಸಿರುವ ತಿರುಮಲೇಶ್ ವಿ ನಿರ್ದೇಶನದ "ಆಪರೇಶನ್ ಡಿ" ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. "ಆಪರೇಷನ್ ಡಿ" ಸಸ್ಪೆನ್ಸ್ ಥ್ರಿಲ್ಲರ್ ಮರ್ಡರ್ ಮಿಸ್ಟರಿ ಚಿತ್ರ. ಸಿನಿಮಾದಲ್ಲಿ ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್, ಸ್ನೇಹ ಭಟ್, ಇಂಚರ ಭರತ್ ರಾಜ್, ಕ್ರೇಜಿ ನಾಗರಾಜ್, ಮುಂತಾದವರು ನಟಿಸಿದ್ದಾರೆ.

ಸಿಂಪಲ್ ಸುನಿ ಮೆಚ್ಚಿನ 'ಜಂಗಲ್ ಮಂಗಲ್': ಅಮೋಘ ಅಭಿನಯದ ಮೂಲಕ ಜನರ ಮನ ಗೆದ್ದಿರುವ ನಟ ಯಶ್ ಶೆಟ್ಟಿ ನಾಯಕರಾಗಿ ನಟಿಸಿರುವ ಹೊಸ ಸಿನಿಮಾದ ಟೈಟಲ್​​ಅನ್ನ ನಿರ್ದೇಶಕ ಸಿಂಪಲ್ ಸುನಿ ರಿವೀಲ್ ಮಾಡಿದ್ದಾರೆ. ಅರೆಮಲೆನಾಡಿನ ಕಾಡಿನಲ್ಲಿ ನಡೆಯುವ ಕಥೆಗೆ ಜಂಗಲ್ ಮಂಗಲ್ ಎಂದು ಹೆಸರಿಡಲಾಗಿದೆ. ಯಶ್ ಶೆಟ್ಟಿ ನಾಯಕನಾಗಿರೋ ಚಿತ್ರದಲ್ಲಿ ಹರ್ಷಿತಾ ರಾಮಚಂದ್ರ ನಾಯಕಿಯಾಗಿದ್ದಾರೆ. ರಕ್ಷಿತ್ ಕುಮಾರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಹಿಟ್ ಕೊಟ್ಟ ನಿರ್ದೇಶಕನಿಗೆ ಕಾರು ಗಿಫ್ಟ್ ಕೊಟ್ಟ ವಿಜಯ್ ಸೇತುಪತಿ..!: ತಮಿಳು ನಟ ವಿಜಯ್ ನಟನೆಯ ಮಹರಾಜ ಸಿನಿಮಾ ಸೂಪರ್ ಹಿಟ್ ಆಗಿದೆ. ಹೀಗಾಗಿ ಮಹರಾಜ ಚಿತ್ರ ನಿರ್ದೇಶಕ ನಿತಿಲನ್ ಸ್ವಾಮಿನಾಥನ್ ಗೆ ಐಶಾರಾಮಿ ಕಾರು ಗಿಫ್ಟ್ ಕೊಟ್ಟಿದ್ದಾರೆ. ಮಹರಾಜ ಸಿನಿಮಾ 100 ಕೋಟಿ ಕಲೆಕ್ಷನ್ ಕ್ಲಬ್ ಸೇರಿದೆ.