20 ವರ್ಷಗಳಲ್ಲಿ 20 ಸಿನಿಮಾ.. ರಜನಿಕಾಂತ್ ಎನರ್ಜಿ ಗುಟ್ಟೇನು?: ಸಾಟಿಯಿಲ್ಲದ ಸಿನಿಮಾ ಪ್ರೀತಿಯ ಹಿಂದಿದೆ ಅದೊಂದು ರಹಸ್ಯ!

ರಜನಿಕಾಂತ್ ಎಂಬ ಭಾರತದ ಚಿತ್ರರಂಗದ ಮಹಾನ್ ನಕ್ಷತ್ರದ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆ. ರಜನಿಕಾಂತ್ ಸಿನಿಮಾ ಸೆಟ್ ಏರುವುದೇ ತಡ. ಅಭಿಮಾನಿಗಳು ಕಾತರರಾಗಿ ಕಾಯ್ತಿರ್ತಾರೆ. ಇಂದಿಗೂ ರಜನಿ ಸಿನಿಮಾ ರಿಲೀಸ್ ದಿನ ಅಭಿಮಾನಿಗಳಿಗೆ ದೊಡ್ಡ ಹಬ್ಬ. 
 

First Published Oct 14, 2024, 9:34 AM IST | Last Updated Oct 14, 2024, 9:34 AM IST

ರಜನಿಕಾಂತ್ ಎಂಬ ಭಾರತದ ಚಿತ್ರರಂಗದ ಮಹಾನ್ ನಕ್ಷತ್ರದ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆ. ರಜನಿಕಾಂತ್ ಸಿನಿಮಾ ಸೆಟ್ ಏರುವುದೇ ತಡ. ಅಭಿಮಾನಿಗಳು ಕಾತರರಾಗಿ ಕಾಯ್ತಿರ್ತಾರೆ. ಇಂದಿಗೂ ರಜನಿ ಸಿನಿಮಾ ರಿಲೀಸ್ ದಿನ ಅಭಿಮಾನಿಗಳಿಗೆ ದೊಡ್ಡ ಹಬ್ಬ. ರಜನಿಕಾಂತ್ ದೇಹಕ್ಕೆ ವಯಸ್ಸಾಗಿದೆ ನಿಜ. ಆದ್ರೆ ಸಿನಿಮಾ ಮೇಲೆ ಅವರಿಗಿರುವ ಪ್ರೀತಿಗೆ ಇನ್ನೂ ಹದಿನಾರರ ಹರೆಯ. ರಜನಿಕಾಂತ್ ಸೆಟ್ಟಿನಿಂದ ದೂರ ಇದ್ದಾಗ ಸಹನಾ ಮೂರ್ತಿಯಾಗಿ, ಸಾಧಾರಣ ಯೋಗಿಯಂತೆ ಇರ್ತಾರೆ. ಆದ್ರೆ ಸೆಟ್ಗೆ ಕಾಲಿಟ್ಟು ಕ್ಯಾಮರಾ ಮುಂದೆ ನಿಂತ್ರೆ ರಜನಿಗೆ ಸರಿಸಾಟಿ ಯಾರೂ ಇಲ್ಲ. ಹಾಗಿದ್ರೆ ಈ ವಯಸ್ಸಿನಲ್ಲೂ ರಜನಿಕಾಂತ್ಗೆ ಆ ಚಾರ್ಮು, ಉತ್ಸಾಹ ಬರೋದು ಎಲ್ಲಿಂದ..?  ಮನುಷ್ಯನಿಗೆ ವಯಸ್ಸಾದ ಮೇಲೆ ಕೆಲವೊಂದಿಷ್ಟು ಸಹಜ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. 

ಹಾಗೆನೇ ರಜನೀಕಾಂತ್ ಅವರಿಗೆ ವಯೋಸಹಜ ಕಾಯಿಲೆಗಳು ಇನ್ನಿಲ್ಲದಂತೆ ಕಾಡಿವೆ. ಆದ್ರೆ ಬಂದಿರೋ ಕಾಯಿಲೆಗಳನ್ನೆಲ್ಲ ಗೆದ್ದ ರಜನಿ ಕ್ಯಾಮರಾ ಮುಂದೆ ಮತ್ತೆ ನುಗುಮುಖದಲ್ಲಿ ಬಂದು ನಿಲ್ಲುತ್ತಾರೆ. ರಜನಿಕಾಂತ್ ಇಲ್ಲಿಯವರೆಗೆ ಯಾವೆಲ್ಲ ಕಾಯಿಲೆಯಿಂದ ಬಳಲಿದ್ದಾರೆ. ರಜನಿಕಾಂತ್ ಎಂಬ ಸ್ಟೈಲ್ ಕಿಂಗ್ 73ರ ಇಳಿ ವಯಸ್ಸಿನಲ್ಲೂ ಇಷ್ಟೊಂದು ಎನರ್ಜಟಿಕ್ ಆಗಿರೋದನ್ನು ಕಂಡ್ರೆ ಎಂಥವರಿಗೂ ಹೊಟ್ಟೆ ಕಿಚ್ಚಾಗುತ್ತೆ. ಕ್ಯಾಮರಾ ಮುಂದೆ ನಿಲ್ತಿದ್ದಂತೆ ಸೂಪರ್ ಸ್ಟಾರ್ ರಜನಿ ಯುವ ರಜನಿಯಾಗಿ ಬಿಡ್ತಾರೆ. ರಜನಿಗೆ ಈ ಎನರ್ಜಿ ಎಲ್ಲಿಂದ ಬರುತ್ತೆ ಅನ್ನೋ ಪ್ರಶ್ನೆ ಹುಟ್ಟುತ್ತೆ. ಈ ವಯಸ್ಸಿನಲ್ಲೂ ಇಷ್ಟೊಂದು ಎನರ್ಜಟಿಕ್ ಆಗಿರುವ ರಜನಿಗೆ ಎಷ್ಟೊಂದು ಆರೋಗ್ಯ ಸಮಸ್ಯೆಗಳಿವೆ ಗೊತ್ತಾ..? 

ರಜನಿಕಾಂತ್ಗೆ ಈ ವಯಸ್ಸಿನಲ್ಲೂ ವರ್ಷಕ್ಕೊಂದು ಸಿನಿಮಾ ಮಾಡಬೇಕಾದ ಅವಶ್ಯಕತೆ ಇಲ್ಲ. ಹಾಗಿದ್ದರೂ ರಜನಿಕಾಂತ್ ಬಿಡುವಿಲ್ಲದೇ ಚಿತ್ರಕರಣದಲ್ಲಿ ತೊಡಗಿ ವರ್ಷಕ್ಕೊಂದು ಸಿನಿಮಾ ಮಾಡುವುದರ ಹಿಂದೆ ಹತ್ತಾರು ಒಳ್ಳೇ ಉದ್ದೇಶಗಳಿವೆ. ತಲೈವಾ ರಜನಿಕಾಂತ್ ತಮ್ಮ 73ನೇ ವಯಸ್ಸಿನಲ್ಲೂ ಇಷ್ಟೊಂದು ಌಕ್ಟಿವ್ ಆಗಿರ್ತಾರೆ. ವರ್ಷಕ್ಕೆ ಒಂದರಂತೆ ಸಿನಿಮಾ ಮಾಡ್ತಾರೆ. ಇದನ್ನೆಲ್ಲ ರಜನಿಕಾಂತ್ ಮಾಡೋದು ಯಾಕೆ ಗೊತ್ತಾ? ತನ್ನ ಅಭಿಮಾನಿಗಳಿಗಾಗಿ ಮತ್ತು ತನನ್ನು ನಂಬಿಕೊಂಡು ಚಿತ್ರತಂಡದಲ್ಲಿ ಕೆಲಸ ಮಾಡುವವರಿಗಾಗಿ. ಮೊನ್ನೆ ರಿಲೀಸ್ ಆದ ವೆಟ್ಟೈಯಾನ್ ಸಿನಿಮಾ ರಜನಿ ಹೀರೋ ಆಗಿ ನಟಿಸಿದ 170ನೇ ಸಿನಿಮಾ. ಆ ಭಗವಂತ ರಜನಿಕಾಂತ್ಗೆ ಇನ್ನೂ ಹೆಚ್ಚಿನ ಚೈತನ್ಯವನ್ನು ತುಂಬಲಿ. ಆದಷ್ಟು ಬೇಗ ರಜನಿಕಾಂತ್ ಅವರು ತಮ್ಮ 200ನೇ ಸಿನಿಮಾದಲ್ಲಿ ನಟಿಸಲಿ ಆ ಸಿನಿಮಾ ಜಗತ್ತಿನಾದ್ಯಂತ ಅದ್ಬುತ ಯಶಸ್ಸನ್ನು ಗಳಿಸಲಿ.