ಪ್ಯಾರಾ ಒಲಿಂಪಿಕ್‌ ಚಿನ್ನ ವಿಜೇತ ಕ್ರೀಡಾಪಟುಗಳು ಭಾಗಿ | Bangalore International Exhibition Centre

Isthiyakh S  | Published: Jan 24, 2025, 6:59 PM IST

ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಯಂತ್ರೋಪಕರಣ ಮತ್ತು ಉತ್ಪಾದನಾ ತಂತ್ರಜ್ಞಾನ ಪ್ರದರ್ಶನ ಪ್ರಾರಂಭವಾಗಿದೆ. ಭಾರತೀಯ ಯಂತ್ರೋಪಕರಣಗಳ ಉತ್ಪಾದಕರ ಸಂಘ ಆಯೋಜಿಸಿದ್ದ IMTEX-2025 ಎಂಬ 7 ದಿನಗಳ ಪ್ರದರ್ಶನಕ್ಕೆ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ, ರಾಜ್ಯ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಚಾಲನೆ ನೀಡಿದ್ರು. 23 ದೇಶಗಳ ಒಂದು ಸಾವಿರಕ್ಕೂ‌ ಅಧಿಕ ಪ್ರದರ್ಶನಕರು ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ವೀಕ್ಷಿಸಲು ಜಾಗತಿಕ ಮಟ್ಟದ ಉದ್ಯಮಿಗಳು, ತಂತ್ರಜ್ಞರು ಭಾಗಿಯಾಗಲಿರುವ ಈ ವಸ್ತುಪ್ರದರ್ಶನದಲ್ಲಿ ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಲಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared