ಕರ್ನಾಟಕದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್ ದಾದಾಗಿರಿ: ಮತ್ತಿಬ್ಬರು ಆತ್ಮಹತ್ಯೆ
ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆ, ಬಾಕಿ ವಸೂಲಿ ಹೆಸರಿನಲ್ಲಿ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿ ಗಳನ್ನು ನಿಯಂತ್ರಿಸಲು ಕರ್ನಾಟಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ತರುವ ಕುರಿತು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್
![Two more commit Self Death due to Micro Finance Harassment in Karnataka Two more commit Self Death due to Micro Finance Harassment in Karnataka](https://static-gi.asianetnews.com/images/01jj1jj307fy5ma3jvd66c2f2s/death-1737367292935_363x203xt.jpg)
ಬೆಂಗಳೂರು(ಜ.25): ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬೆದರಿಕೆ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೂ ಹಣಕಾಸು ಸಂಸ್ಥೆಗಳ ದಾದಾಗಿರಿ ಮುಂದುವರೆದಿದ್ದು ಜನರನ್ನು ಹೈರಾಣಾಗಿಸಿದೆ. ಸಾಲ ನೀಡಿದವರ ಕಿರುಕುಳದಿಂದ ರಾಜ್ಯದಲ್ಲಿ ಮತ್ತೆ ಎರಡು ಸಾವು ಸಂಭವಿಸಿದ್ದರೆ, ಹಸುಗೂಸು ಜೊತೆಗೆ ಇರುವ ಬಾಣಂತಿಯನ್ನು ಮನೆಯಿಂದ ಹೊರಹಾಕಿದ, ಸಾಲಗಾರರ ಕಾಟಕ್ಕೆ ಹೆದರಿ ಯುವಕನೊಬ್ಬ ಮನೆಯನ್ನೇ ತೊರೆದ ಘಟನೆಗಳು ನಡೆದಿವೆ.
ಈ ನಡುವೆ ಮೈಕ್ರೋಫೈನಾನ್ಸ್ ಕಂಪನಿಗಳ ವಿರುದ್ಧ ರಾಜ್ಯದ ಹಲವೆಡೆ ಶುಕ್ರವಾರ ಪ್ರತಿಭಟನೆ ನಡೆದಿದ್ದು, ಇಂಥ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
ಇಬ್ಬರ ಸಾವು:
ಹಾವೇರಿ ಜಿಲ್ಲೆ ಬಂಕಾಪುರದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಾಳಲಾರದೆ ಕಿರಾಣಿ ಅಂಗಡಿ ಮಾಲಿಕ ನಾಗಪ ಪುಟ್ಟಪ ಗುಂಜಾಳ (36) ನೇಣಿಗೆ ಶರಣಾಗಿದ್ದಾರೆ. ಇವರು ಸುಮಾರು 15 ಲಕ್ಷ ರು. ಸಾಲ ಮಾಡಿಕೊಂಡಿದ್ದರು. ಬೀದರ್ ಜಿಲ್ಲೆ ಹುಲಸೂರ ತಾಲೂಕಿನ ಗಡಿಗೌಡಗಾಂವ್ ಗ್ರಾಮದ ರೇಷ್ಮಾ ಸುನೀಲ ಸೂರ್ಯವಂಶಿ (26) ಎಂಬ ದಲಿತ ಮಹಿಳೆ ಕೂಡ ಫೈನಾನ್ಸ್ ಸಿಬ್ಬಂದಿಯ ಕಿರು ಕುಳದಿಂದ ನೇಣಿಗೆ ಶರಣಾಗಿದ್ದಾರೆ.
ದಕ್ಷಿಣ ಕನ್ನಡದಲ್ಲೂ ಮೈಕ್ರೋ ಫೈನಾನ್ಸ್ ಹಾವಳಿ | Microfinance Harassment | Suvarna News | Kannada News
ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರು. ಸುಮಾರು 3 ಲಕ್ಷ ಸಾಲ ಪಡೆದು ಮನೆಗೆ ಶೆಡ್ ಹಾಕಿಸಿದ್ದರು. ಈ ಮಧ್ಯೆ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದ ಸಾವಿತ್ರಮ್ಮ ವಡ್ಡರ ಎಂಬುವರು ಫೈನಾನ್‌ನವರ ಕಿರುಕುಳ ತಾಳಲಾರದೆ ಊರನ್ನೇ ತೊರೆದಿದ್ದಾರೆ. ಸಂದನ ಮೈಕ್ರೋ ಫೈನಾನ್ಸ್‌ನಿಂದ ಅವರು ತಮ್ಮ ಸಂಬ ಂಧಿಯೊಬ್ಬರಿಗೆ ಸಾಲ ಕೊಡಿಸಿದ್ದರು.
ಎಲ್ಲೆಲ್ಲಿ ದೌರ್ಜನ್ಯ?
• ಹಾನಗಲ್ ಕೊಪ್ಪರಸಿಕೊಪ್ಪದಲ್ಲಿ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳ ತಡೆಯಲಾಗದೇ ಊರನ್ನೇ ತೊರೆದ ಸಾವಿತ್ರಮ್ಮ ಎಂಬ ಮಹಿಳೆ
• ಫೈನಾನ್ಸ್ ಕಿರುಕುಳ ತಾಳದೆ ಸಲೂನ್ ಮಾರಿ ಊರನ್ನೇ ಬಿಟ್ಟ ಶಿವಮೊಗ್ಗದ ಶ್ರೀನಿವಾಸ್, ಪರಿಣಾಮ ಇದೀಗ ಅದೇ ಸಲೂನ್‌ನಲ್ಲಿ ತಂದೆ ಕೆಲಸ
* ಬೆಳಗಾವಿಯ ತಾರಿಹಾಳದಲ್ಲಿ ಬಾಣಂತಿ, ಹಸುಗೂಸು ಹೊರಕ್ಕೆ ಹಾಕಿದ ಸಿಬ್ಬಂದಿ, ಸಚಿವೆ ಹೆಬ್ಬಾಳ್ಳರ್ ಸೂಚನೆ ಬಳಿಕ ಮನೆ ವಾಪಸ್
• ಯಾದಗಿರಿಯಲ್ಲಿ ಸಾಲ ಪಡೆದಿದ್ದ ಯುವಕನ ಮೇಲೆ ಮೀಟರ್ ಬಡ್ಡಿ ದಂಧೆಕೋರನಿಂದ ದಾಳಿ. ದಾಳಿಯ ತೀವ್ರತೆಗೆ ಖಾಸಿಂ ಎಂಬ ಯುವಕ ಬಲಿ. ಕುಟುಂಬಸ್ಥರ ಆಕ್ರೋಶ
• ಬೆಳಗಾವಿಯಲ್ಲಿ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ತಾಳಿ ಹಿಡಿದು ಮಹಿಳೆಯರಿಂದ ಪ್ರತಿಭಟನೆ. ಕ್ರಮಕ್ಕೆ ಆಗ್ರಹ
ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಸುಗ್ರೀವಾಜ್ಞೆ ಮೂಗುದಾರ?
ಬೆಂಗಳೂರು: ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆ, ಬಾಕಿ ವಸೂಲಿ ಹೆಸರಿನಲ್ಲಿ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿ ಗಳನ್ನು ನಿಯಂತ್ರಿಸಲು ಕರ್ನಾಟಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ತರುವ ಕುರಿತು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರಿಕಿರಿ ಮಧ್ಯೆ ಡಿಸಿಸಿ ಬ್ಯಾಂಕ್ ಶಾಕ್ | Microfinance Harassment | Suvarna News
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಜನ ಕಂಗಾಲಾಗಿರುವುದು ನಿಜ. ಸಾಲ ವಸೂಲಿ ಮಾನವೀಯ ಹಾಗೂ ನಾಗರಿಕ ದಾರಿಯಲ್ಲಿ ಆಗಬೇಕು. ಮುಗ್ಧರು ಯಾವ ರೀತಿಯಲ್ಲೂ ಶೋಷಣೆಗೆ ಒಳಗಾಗಬಾ ರದು.ಹೀಗಾಗಿಕಾನೂನುಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ವಿಧೇಯಕ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮತ್ತಿಬ್ಬರು ಆತ್ಮಹತ್ಯೆ
ಹಾವೇರಿ/ ಬೀದರ್: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮತ್ತೆ ಎರಡು ಅಮಾಯಕ ಜೀವಗಳನ್ನು ಬಲಿಪಡೆ ದಿದೆ. ಹಾವೇರಿ ಜಿಲ್ಲೆಯಲ್ಲಿ ಕಿರಾಣಿ ವ್ಯಾಪಾರಿ ಮತ್ತು ಬೀದರ್‌ನಲ್ಲಿ ಕಾರ್ಮಿಕ ಮಹಿಳೆ ಯೊಬ್ಬರು ಸಾಲದ ಶೂಲಕ್ಕೆ ಸಿಲುಕಿ ನೇಣಿಗೆ ಶರಣಾಗಿದ್ದಾರೆ. ವ್ಯಾಪಾರಿ ಸಾವು: ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದ ನಾಗಪ್ಪ ಪುಟ್ಟಪ್ಪ ಗುಂಜಾಳ (36) ಎಂಬ ಕಿರಾಣಿ ವ್ಯಾಪಾರಿ ಮನೆಯಲ್ಲಿ ಆತ್ಮ ಹತ್ಯೆಗೆ ಶರಣಾಗಿದ್ದಾರೆ.