Asianet Suvarna News Asianet Suvarna News

2011ರಲ್ಲಿ ಹಳಿಗೆ ಇಳಿದ ನಮ್ಮ ಮೆಟ್ರೋಗೆ ದಶಕದ ಸಂಭ್ರಮ

* ನಮ್ಮ ಮೆಟ್ರೋಗೆ 10 ವರ್ಷ ಪೂರ್ಣ
* ಬೆಂಗಳೂರು ಸಂಚಾರ ಜೀವನಾಡಿ ನಮ್ಮ ಮೆಟ್ರೋಗೆ ದಶಕದ ಸಂಭ್ರಮ
* ಭಾರತದಲ್ಲಿ ಹೆಸರು ಮಾಡಿದ ನಮ್ಮ ಮೆಟ್ರೋ

namma metro bengaluru metro completes 10 years on Oct 20 rbj
Author
Bengaluru, First Published Oct 20, 2021, 7:10 PM IST

ಬೆಂಗಳೂರು, (ಅ.20): ದಕ್ಷಿಣ ಭಾರತದ ಪ್ರಥಮ ಮೆಟ್ರೋ ಯೋಜನೆ ಎಂದು ಹೆಸರಾದ ಬೆಂಗಳೂರು(Bengaluru) ಮೆಟ್ರೋ ಅಥವಾ ನಮ್ಮ ಮೆಟ್ರೋಗೆ (Namma Metro) ದಶಕದ ಸಂಭ್ರಮ. 

ಹೌದು... 2011 ರ ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ಹಳಿಗೆ ಇಳಿದಿದ್ದ ನಮ್ಮ ಮೆಟ್ರೋ ಇವತ್ತಿಗೆ 10 ವರ್ಷ ಪೂರ್ಣಗೊಳಿಸಿದೆ. ಎಂ.ಜಿ. ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಮೊದಲಿಗೆ ಮೆಟ್ರೋ ಸಂಚಾರ ಆರಂಭ ಆಗಿತ್ತು. 6 ಕಿ.ಮೀ. ಮಾರ್ಗದಲ್ಲಿ ಮೊದಲ ಬಾರಿಗೆ ಮೆಟ್ರೋ ಸಂಚರಿಸಿತ್ತು.

ಬೆಂಗಳೂರಿನ ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಹೆಸರು ?

ಅಂದು ಮುಖ್ಯಮಂತ್ರಿಯಾಗಿದ್ದ ಡಿ.ವಿ ಸದಾನಂದ ಗೌಡ (Dv Sadananda Gowda) ರವರಿಂದ ಮೊದಲ ಹಂತವಾದ ಬೈಯ್ಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆಯವರೆಗೆ ಉದ್ಘಾಟನೆಗೊಂಡು ಇಂದು (ಅ.20) ಒಟ್ಟು 56.1 ಕಿ.ಮೀ ವರೆಗೆ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪ್ರಮುಖ ಸ್ಥಳಗಳಿಗೆ ನಮ್ಮ ಮೆಟ್ರೋ ಕಾರ್ಯಾಚರಣೆ ನಡೆಸಲಿದೆ.

ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್‌ ಲಿಮಿಟೆಡ್‌ (BMRCL) ವಹಿಸಿಕೊಂಡಿದ್ದು, ಇದು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳ ಜಂಟಿ ಸಾಹಸವಾಗಿದೆ. 

ನಮ್ಮ ಮೆಟ್ರೋ, ಬಿಗ್ ಬಾಸ್‌ನ ಸುಮಧುರ ಧ್ವನಿ ಇವರದ್ದೇ!

ನಮ್ಮ ಮೆಟ್ರೋ ಸಾಧನೆ
namma metro bengaluru metro completes 10 years on Oct 20 rbj

ಇದುವರೆಗೆ 60 ಕೋಟಿ ಮಂದಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು, ಪ್ರತಿನಿತ್ಯ 5.26 ಲಕ್ಷ (ಕೊರೋನಾ ಬರುವ ಮುಂಚೆ) ಜನರು ಪ್ರಯಾಣಿಸುತ್ತಿದ್ದರು. ಈಗ ಅಂದ್ರೆ ಕೊರೋನಾ ಬಳಿಕ ನಿತ್ಯ 2.12 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಇದರೊಂದಿಗೆ 1286.6 ಕೋಟಿ ರೂ. ಆದಾಯ ನಮ್ಮ ಮೆಟ್ರೋಗೆ ಹರಿದುಬಂದಿದೆ ಎಂದು ನಮ್ಮ ಮೆಟ್ರೋ ಸಂಸ್ಥೆ  ಮಾಹಿತಿ ನೀಡಿದೆ.

ಭಾರತದಲ್ಲಿ ಹೆಸರು ಮಾಡಿದ ನಮ್ಮ ಮೆಟ್ರೋ
namma metro bengaluru metro completes 10 years on Oct 20 rbj

ನಮ್ಮ ಮೆಟ್ರೋ, ಉದ್ದ ಮತ್ತು ಅತಿಹೆಚ್ಚು ನಿಲ್ದಾಣಗಳನ್ನು ಹೊಂದಿರುವ ಎರಡರಲ್ಲೂ ವ್ಯವಸ್ಥೆಗಳನ್ನು ಪರಿಗಣಿಸಿದಾಗ ದೆಹಲಿ ಮೆಟ್ರೋ ನಂತರ ಭಾರತದ ಎರಡನೇ ಅತಿದೊಡ್ಡ ಮೆಟ್ರೋ. ಮತ್ತೊಂದೆಡೆ, ನಮ್ಮ ಮೆಟ್ರೋ ಉದ್ದದಲ್ಲಿ ಪ್ರಪಂಚದ  99ನೇ ಅತಿದೊಡ್ಡ ಮೆಟ್ರೋ ವ್ಯವಸ್ಥೆ ಮತ್ತು ನೆಟ್ವರ್ಕ್ ಪರಿಭಾಷೆಯಲ್ಲಿ ಆಪರೇಟಿಂಗ್ ಕೇಂದ್ರಗಳ ಸಂಖ್ಯೆಯ ಪರಿಗಣನೆಯಲ್ಲಿ 92ನೇ ಅತಿದೊಡ್ಡ ಮೆಟ್ರೋ. ಇದು ದಕ್ಷಿಣ ಭಾರತದಲ್ಲಿ ಮೊದಲ ಭೂಗತ ಮೆಟ್ರೋ ವ್ಯವಸ್ಥೆಯನ್ನು ಹೊಂದಿರುತ್ತದೆ.  ವಿದ್ಯುತ್ ಉತ್ಪಾದನೆಯು 3ನೇ ರೈಲು ಮೂಲಕ 750 ವೋಲ್ಟ್ ನೇರ ವಿದ್ಯುತ್ ಪೂರೈಸಲಾಗುತ್ತದೆ. ನಮ್ಮ ಮೆಟ್ರೋ’ ಭಾರತದಲ್ಲಿ 750V DC ಮೂರನೇ ರೈಲು ಕಂಬಿ( Third rail system) ವ್ಯವಸ್ಥೆ ಬಳಸುವ ಮೊದಲ ರೈಲು ಸಾರಿಗೆಯಾಗಿದೆ. 

ಎರಡು ಮಾರ್ಗಗಳು
namma metro bengaluru metro completes 10 years on Oct 20 rbj

ನಮ್ಮ ಮೆಟ್ರೋ ಸದ್ಯಕ್ಕೆ ಎರಡು ಮಾರ್ಗಗಳನ್ನು ಹೊಂದಿದ್ದು ಒಂದು ನೇರಳೆ ಮಾರ್ಗ ಮತ್ತೊಂದು ಹಸಿರು ಮಾರ್ಗ.
ನೇರಳೆ ಮಾರ್ಗವು ಬೈಯ್ಯಪ್ಪನಹಳ್ಳಿಯಿಂದ ಕೆಂಗೇರಿಯವರೆಗೆ 22 ನಿಲ್ದಾಣಗಳನ್ನು ಒಳಗೊಂಡು 25.7 ಕಿ.ಮೀ ಕಾರ್ಯಾಚರಣೆ ನಡೆಸುತ್ತಿದ್ದು ಹಸಿರು ಮಾರ್ಗವು ನಾಗಸಂದ್ರದಿಂದ ರೇಷ್ಮೆ ಸಂಸ್ಥೆಯವರೆಗೆ 29 ನಿಲ್ದಾಣವನ್ನು ಒಳಗೊಂಡು 30.5 ಕಿ.ಮೀ ಕಾರ್ಯಾಚರಣೆ ನಡೆಸುತ್ತಿದೆ.

ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಮೆಟ್ರೋ ನಿಲ್ದಾಣ
ನಮ್ಮ ಮೆಟ್ರೋದಲ್ಲಿ ನಾಡ ಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣವು ಇಡೀ ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಮೆಟ್ರೋ ನಿಲ್ದಾಣ ಎಂದು ಹೆಗ್ಗಳಿಕೆ ಪಡೆದಿದೆ. ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಮೆಟ್ರೋ ನಿಲ್ದಾಣವು ಜಯದೇವ ಆಸ್ಪತ್ರೆ ಬಳಿ ನಿರ್ಮಾಣವಾಗುತ್ತಿದ್ದು ಮುಂದಿನ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ.

 ಬೆಂಗಳೂರು ಸಂಚಾರದ ಜೀವನಾಡಿ
namma metro bengaluru metro completes 10 years on Oct 20 rbj

ಯೆಸ್‌...ನಮ್ಮ ಮೆಟ್ರೋ  ಬೆಂಗಳೂರು ಸಂಚಾರದ ಜೀವನಾಡಿ ಎಂದರೆ ತಪ್ಪಾಗಲಾರದು. ಏಕಂದ್ರೆ ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಕಥೆ ಹೇಳತೀರದು. ಅದರಲ್ಲೂ ಮಳೆ ಬಂತಂದ್ರೆ ಸಾಕು ಅಲ್ಲಲ್ಲೇ ವಾಹನಗಳು ರಸ್ತೆ ಮೇಲೆ ಗಂಟೆಗಟ್ಟಲೇ ಗಿರಿಕಿ ಹೊಡೆಯುತ್ತಲೇ ಇರ್ತವೆ. ಇದರಿಂದ ಅನೇಕ ವಾಹನ ಸವಾರರು ಬೇಸತ್ತಿದ್ದಾರೆ. ಆದ್ದರಿಂದಲೇ ಹಲವರು ನಮ್ಮ ಮೆಟ್ರೋ ಅವಲಂಬಿಸಿದ್ದಾರೆ. 

855 ಮೀಟರ್ ಸುರಂಗ ಕೊರೆದ ಊರ್ಜಾ ಯಂತ್ರ
ಮೆಟ್ರೋ (Metro) ಸುರಂಗ (Tunnel) ಕೊರೆದು ಸುಮಾರು 13 ತಿಂಗಳ ನಂತರ ಊರ್ಜಾ ಯಂತ್ರ (Urja Machine) ಹೊರಬಂದಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದೆ. 855 ಮೀಟರ್ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, 2020ರ ಆಗಸ್ಟ್​ನಲ್ಲಿ ಊರ್ಜಾ ಯಂತ್ರ ಸುರಂಗ ಪ್ರವೇಶಿಸಿತ್ತು. 13 ತಿಂಗಳ ಬಳಿಕ ಇಂದು (ಸೆ.22) ಊರ್ಜಾ ಯಂತ್ರ ಹೊರಬಂದಿದೆ. 

Follow Us:
Download App:
  • android
  • ios