Asianet Suvarna News Asianet Suvarna News

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್

ಕೆಂಪೇಗೌಡ  ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿ ಪೊಲೀಸರ ನಿದ್ದೆ ಕೆಡಿಸಿದ್ದ  ವ್ಯಕ್ತಿಯನ್ನು ಶೋಧ ನಡೆಸಿ ಬಂಧಿಸಲಾಗಿದೆ.

Man arrested for hoax bomb threat call at Bangalore kempegowda airport gow
Author
Bengaluru, First Published May 20, 2022, 3:35 PM IST

ಬೆಂಗಳೂರು (ಮೇ.20): ಬೆಳ್ಳಂ ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ (kempegowda airport) ಹುಸಿ ಬಾಂಬ್  ಬೆದರಿಕೆ ಕರೆ ಬಂದಿತ್ತು. ಮುಂಜಾನೆ 3 ಗಂಟೆಯ ಸುಮಾರಿಗೆ ಅಪರಿಚಿತನೊಬ್ಬ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಕೆಲ ಕಾಲ  ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆತಂಕ ಮನೆ ಮಾಡಿತ್ತು. ಬೆದರಿಕೆ ಕರೆ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಪೋಲೀಸರು (Airport police) ವಿಮಾನ ನಿಲ್ದಾಣದ ಏರ್ ಲೈನ್ಸ್ ಗೇಟ್  ಟರ್ಮಿನಲ್ ಗಳಲ್ಲಿ ತೀವ್ರ ತಪಾಸಣೆ ನಡೆಸಿದ್ದರು.

ಇದೀಗ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಹುಸಿ ಬಾಂಬ್  ಕರೆ ಮಾಡಿ ಪೊಲೀಸರ ನಿದ್ದೆಗೆಡಿಸಿದ್ದ ದುಷ್ಕರ್ಮಿಯನ್ನು ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Vijayapura ವರುಣನ ಆರ್ಭಟಕ್ಕೆ ಬೈಕ್ ಸವಾರರ ಮೇಲೆ ಬಿದ್ದ ಮರ

ಆರೋಪಿಯನ್ನು ಶಾಂತಿನಗರ ನಿವಾಸಿ ಸುಭಾಷ್ ಗುಪ್ತಾ ಎಂದು ಗುರುತಿಸಲಾಗಿದೆ. ವಿಚ್ಛೇದಿತ ಅಕ್ಕನ ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ಮಾಡಿದ್ದ ಸುಭಾಷ್, ಅದಕ್ಕಾಗಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಎಂದು ತಿಳಿದುಬಂದಿದೆ. 

ದೂರವಾಣಿ ಕರೆ ಬರುತ್ತಿದ್ದಂತೆಯೇ ನಿಯಂತ್ರಣ ಕೊಠಡಿಯಲ್ಲಿದ್ದ ಡಿಸ್'ಪ್ಲೇ ನಲ್ಲಿ ವ್ಯಕ್ತಿಯ ಸಂಪರ್ಕದ ಮಾಹಿತಿಗಳು ಬಹಿರಂಗಗೊಂಡಿತ್ತು. ಕೂಡಲೇ ಅಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿಗಳನ್ನು ರವಾನಿಸಿದ್ದರು. 

Chikkamagaluru ರಸ್ತೆಗೆ ಬಂಡೆ ಹಾಕಿ ಬೀಗ ಜಡಿದಿದ್ದ ಪ್ರಕರಣ, ಸ್ಥಳಿಯರಿಂದ ಬಂಡೆ ತೆರವು

ಇದರಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಆರೋಪಿ ತನ್ನ ಭಾವನ ದೂರವಾಣಿ ಸಂಖ್ಯೆಯಿಂದಲೇ ಕರೆ ಮಾಡಿದ್ದನೇ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆಂದು ತಿಳಿದುಬಂದಿದೆ.

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿದ ಕರ್ನಾಟಕ ಸರಕಾರ 

ಬೆಂಗ್ಳೂರಲ್ಲಿ ಕಳೆದ 50 ವರ್ಷದಲ್ಲೇ ಅತೀ ತಣ್ಣನೆಯ ದಿನ ದಾಖಲು: ಮಂಗಳವಾರವಷ್ಟೇ ಶತಮಾನದ ಮಳೆ ಕಂಡಿದ್ದ ಬೆಂಗಳೂರು ಗುರುವಾರ ಅರ್ಧ ಶತಮಾನದಲ್ಲೇ ಅತ್ಯಂತ ತಣ್ಣನೆಯ ದಿನಕ್ಕೆ ಸಾಕ್ಷಿ ಆಯಿತು. ನಗರದ ದಿನದ ಗರಿಷ್ಠ ತಾಪಮಾನ 22.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಇದು 50 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಗರಿಷ್ಠ ತಾಪಮಾನವಾಗಿದೆ.

1972ರ ಮೇ 14ಕ್ಕೆ 22.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿರುವುದು ಮೇ ತಿಂಗಳಲ್ಲಿನ ನಗರದ ಸಾರ್ವಕಾಲಿಕ ಕನಿಷ್ಠ ಗರಿಷ್ಠ ತಾಪಮಾನವಾಗಿದೆ. ಎರಡು ದಿನಗಳ ಹಿಂದೆ ಭಾರಿ ಮಳೆಯ ಸುಳಿಗೆ ಸಿಳುಕಿದ್ದ ಉದ್ಯಾನ ನಗರಿ ಅದರ ಪರಿಣಾಮವಾಗಿ ಕಳೆದ 50 ವರ್ಷಗಳ ಬಳಿಕದ ಎರಡನೇ ಕನಿಷ್ಠ ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಿದೆ.

ಏಳೆಂಟು ದಿನಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಆಸಾನಿ ಚಂಡಮಾರುತದ ಪರಿಣಾಮವಾಗಿ ಮೇ 12ರಂದು 23 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣತೆ ದಾಖಲಾಗಿತ್ತು. ಈ ದಾಖಲೆ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಒಂದು ವಾರದಲ್ಲೇ ಕನಿಷ್ಠ ತಾಪಮಾನದ ಎರಡು ದಾಖಲೆಗಳು ನಿರ್ಮಾಣವಾದಂತೆ ಆಗಿದೆ.

ಮೇ ತಿಂಗಳಲ್ಲಿ ನಗರದ ಗರಿಷ್ಠ ತಾಪಮಾನ ಸರಾಸರಿ 33.3 ಡಿಗ್ರಿ ಸೆಲ್ಸಿಯಸ್‌ ಇದ್ದು, ವಾಡಿಕೆಗಿಂತ ಹತ್ತು ಹನ್ನೆರಡು ಡಿಗ್ರಿ ಉಷ್ಣತೆ ಕಡಿಮೆ ದಾಖಲಾಗಿದೆ. ಕಳೆದ ಹತ್ತು ದಿನಗಳಿಂದ ನಗರದ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ನೊಳಗೆ ಬರುತ್ತಿದೆ.

ಗುರುವಾರ ನಗರದ ಕನಿಷ್ಠ ತಾಪಮಾನ 21.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ತನ್ಮೂಲಕ ಏರುಪೇರಿಲ್ಲದ ಹೆಚ್ಚು ಕಡಿಮೆ ಸಮಾನ ಉಷ್ಣಾಂಶ ದಿನವಿಡೀ ದಾಖಲಾಗಿತ್ತು. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಪನಗಳು ಸೇರಿದಂತೆ ಹಲವು ಖಾಸಗಿ ಉಷ್ಣತಾ ಮಾಪನ ಸಂಸ್ಥೆಗಳ ಮಾಹಿತಿಯಂತೆ ನಗರದ ಬಹುತೇಕ ಕಡೆಗಳಲ್ಲಿ ದಿನದ ಗರಿಷ್ಠ ತಾಪಮಾನ 21ರಿಂದ 22 ಡಿಗ್ರಿ ಸೆಲ್ಸಿಯಸ್‌ನಷ್ಟೆದಾಖಲಾಗಿತ್ತು.

Follow Us:
Download App:
  • android
  • ios