Asianet Suvarna News Asianet Suvarna News

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮರಿಯಾನೆಯ ರಕ್ಷಿಸಿದ ತಾಯಿ ಆನೆ

ಇಲ್ಲೊಂದು ಕಡೆ ಆನೆಯೊಂದು ನದಿ ದಾಟುವ ವೇಳೆ ಕೊಚ್ಚಿ ಹೋದ ತನ್ನ ಕಂದನನ್ನು ರಕ್ಷಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.  

Mother Elephant Saves Calf From Drowning In The River at west Bengal akb
Author
Bangalore, First Published Jun 25, 2022, 4:52 PM IST

ತಾಯಿ ಪ್ರೀತಿಗೆ ಸರಿಸಾಟಿಯಾದುದು ಯಾವುದು ಇಲ್ಲ, ತನ್ನ ಕರುಳ ಕುಡಿಯನ್ನು ರಕ್ಷಣೆಯ ವಿಚಾರ ಬಂದಾಗ ತಾಯಿ ತನ್ನ ಪ್ರಾಣವನ್ನು ಬೇಕಾದರೂ ಬಲಿ ನೀಡಲು ಸಿದ್ದಳಿರುತ್ತಾಳೆ. ಇಂತಹ ತಾಯಿ ಪ್ರೀತಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ನಾಯಿ ಬೆಕ್ಕುಗಳು ಆನೆ ಹಸು ಹೀಗೆ ಎಲ್ಲಾ ಪ್ರಾಣಿಗಳು ಕೂಡ ತಾಯಿ ಪ್ರೀತಿಯನ್ನು ಮನುಷ್ಯರಿಗಿಂತ ತುಸು ಹೆಚ್ಚೆ ಮೆರೆದ ಹಲವು ನಿದರ್ಶನಗಳು ನಮ್ಮಲ್ಲಿವೆ. ಹಾಗೆಯೇ ಇಲ್ಲೊಂದು ಕಡೆ ಆನೆಯೊಂದು ನದಿ ದಾಟುವ ವೇಳೆ ಕೊಚ್ಚಿ ಹೋದ ತನ್ನ ಕಂದನನ್ನು ರಕ್ಷಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.  

ಕೆಲ ದಿನಗಳ ಹಿಂದೆ ಆನೆಯೊಂದು ತನ್ನ ತೀರಿಕೊಂಡ ಮರಿಯನ್ನು ಸೊಂಡಿಲಿನಲ್ಲಿ ಎತ್ತಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಎತ್ತಿಕೊಂಡು ತನ್ನೊಂದಿಗೆಯೇ ಸಾಗಿಸುತ್ತಿರುವ ವಿಡಿಯೋವೊಂದು ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಆನೆಯೊಂದು ತನ್ನ ಪ್ರಾಣವನ್ನು ಪಣಕ್ಕಿಟ್ಟು ಮರಿಯಾನೆಯನ್ನು ರಕ್ಷಿಸಿದೆ. 

ಆನೆಗಳ ದೊಡ್ಡ ಹಿಂಡೊಂದು ದೊಡ್ಡದಾದ ನದಿಯೊಂದನ್ನು ದಾಟುತ್ತಿದ್ದು, ಈ ವೇಳೆ ಒಂದು ತಾಯಿ ಆನೆ ಹಾಗೂ ಮರಿಯಾನೆಯನ್ನು ಬಿಟ್ಟು ಉಳಿದೆಲ್ಲಾ ಆನೆಗಳು ಬಿರುಸಾಗಿ ನದಿಯನ್ನು ದಾಟಿ ಮುಂದೆ ಸಾಗುತ್ತವೆ. ಈ ವೇಳೆ ಪುಟ್ಟ ಮರಿಯಾನೆಯೊಂದು ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಹಂತ ತಲುಪುತ್ತದೆ. ಈ ವೇಳೆ ಕೂಡಲೇ ಎಚ್ಚೆತ್ತ ತಾಯಿ ಆನೆ ತನ್ನ ಮರಿಯನ್ನು ಕೊಚ್ಚಿ ಹೋಗದಂತೆ ಅಡ್ಡ ನಿಂತು ರಕ್ಷಣೆ ಮಾಡುತ್ತದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ . ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ವೀರಪ್ಪನ್​ ಕಣ್ಣಿನಿಂದ ಬಚಾವ್​ ಆಗಿದ್ದ ಭೋಗೇಶ್ವರ: 'ಕಬಿನಿ ಶಕ್ತಿಮಾನ್'​ ಇಲ್ಲದೇ ಬಿಕೋ ಎನ್ನುತ್ತಿದೆ ಗುಂಡ್ರೆ ಅರಣ್ಯ!
 

ನಗರೀಕರಣದಿಂದಾಗಿ ತಮ್ಮ ಮೂಲ ಆವಾಸ ಸ್ಥಾನಗಳನ್ನು ಕಳೆದುಕೊಂಡಿರುವ ಆನೆಗಳು ನಾಡಿನತ್ತ ಆಗಾಗ ದಾಂಗುಡಿ ಇಡುವುದು ಸಾಮಾನ್ಯವಾಗಿದೆ. ಹೀಗಾಗಿ ಅಲ್ಲಲ್ಲಿ ಆನೆಗಳ ಹಿಂಡು ಇತ್ತೀಚೆಗೆ ಸಾಮಾನ್ಯವಾಗಿ ಕಾಣ ಸಿಗುತ್ತಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯದ ನಗ್ರಾಕಾಟ್‌ನಲ್ಲಿ ಕಂಡು ಬಂದ ದೃಶ್ಯ ಇದು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. 

ಮರಿಗಳ ರಕ್ಷಣೆಯ ವಿಚಾರದಲ್ಲಿ ಆನೆಗಳ ಹಿಂಡು ತುಸು ಹೆಚ್ಚೆ ಎಂಬಂತೆ ಕಾಳಜಿ ವಹಿಸುತ್ತವೆ. ಪುಟ್ಟ ನವಜಾತ ಮಕ್ಕಳ ರಕ್ಷಣೆಯ ವಿಚಾರದಲ್ಲಿ ತಾಯಿ ಹಾಗೂ ಕುಟುಂಬ ಮಾಡುವ ಕಾಳಜಿ ತುಂಬಾ ಜಾಗರೂಕವಾಗಿರುತ್ತದೆ. ಮಗುವಿನ ಸುರಕ್ಷತೆಗೆ ಕುಟುಂಬ ಮೊದಲ ಆದ್ಯತೆ ನೀಡುತ್ತದೆ. ಆದರೆ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯ ಇದನ್ನು ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಪ್ರಾಣಿಗಳು ಕೂಡ ಇದೇ ರೀತಿ ತಮ್ಮ ಹಸುಗೂಸುಗಳಿಗೆ ರಕ್ಷಣೆ ನೀಡುತ್ತವೆ ಎಂಬುದು ಅಷ್ಟೇ ಸತ್ಯ. ಇದನ್ನು ಪುಷ್ಠಿಕರಿಸುತ್ತಿದೆ ಆನೆಗಳ ಗುಂಪಿನ ಇತ್ತೀಚಿನ ಮತ್ತೊಂದು ವಿಡಿಯೋ. 

ಸಾವಿನ ಅರಿವಿಲ್ಲದೇ ತಾಯಿಯ ಎದ್ದೇಳಿಸಲು ಪ್ರಯತ್ನಿಸಿದ ಮರಿಯಾನೆ... ಕಣ್ಣಂಚಿನಲ್ಲಿ ನೀರು ತರಿಸಿದ ದೃಶ್ಯ
 

ವಿಡಿಯೋದಲ್ಲಿ ಕಾಣಿಸುವಂತೆ ಆನೆಗಳ ಹಿಂಡೊಂದು ಕಾಡಿನ ಮಧ್ಯದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿವೆ. ಈ ವೇಳೆ ಈ ಹಿಂಡಿನಲ್ಲಿ ಪುಟ್ಟದೊಂದು ಮರಿಯೂ ಇದ್ದು, ಇದನ್ನು ಯಾರಿಗೂ ಕಾಣದಂತೆ ಗಜಪಡೆ ಮಧ್ಯದಲ್ಲಿ ಇರಿಸಿಕೊಂಡು ಕರೆದುಕೊಂಡು ಹೋಗುತ್ತಿವೆ. ಹಿಂದೆ ಮುಂದೆ ಸುತ್ತಮುತ್ತ ದೊಡ್ಡ ದೊಡ್ಡ ಆನೆಗಳು ಸಾಗುತ್ತಿದ್ದರೆ ಇವುಗಳ ಮಧ್ಯೆ ಹಿಂಡಿನಲ್ಲಿ ಪುಟ್ಟ ಮರಿಯಾನೆ ಸಾಗುತ್ತಿದೆ. ಇವುಗಳು ಮರಿಗಳಿಗೆ ನೀಡುತ್ತಿರುವ ಭದ್ರತೆ ನಮ್ಮ ದೇಶದಲ್ಲಿ ಪ್ರಮುಖ ರಾಜಕಾರಣಿಗಳಿಗೆ ನೀಡುವ z+ ಭದ್ರತೆಯನ್ನು ಮೀರಿಸಿದೆ ಎಂದು ಹೇಳಿದರೆ ತಪ್ಪಾಗಲಾರದು.

Follow Us:
Download App:
  • android
  • ios