Asianet Suvarna News Asianet Suvarna News

Nikhil Kumaraswamy: ಲೋಕಸಭೆ ಚುನಾವಣೆಯಲ್ಲಿ ಸೋಲಿಗೆ ಕಾರಣ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ

* ಲೋಕಸಭೆ ಚುನಾವಣೆಯಲ್ಲಿನ ಸೋಲು ನೆನಸಿಕೊಂಡ ನಿಖಿಲ್ ಕುಮಾರಸ್ವಾಮಿ
* ವಿಧಾನಪರಿಷತ್ ಚುನಾವಣೆ ಪ್ರಚಾರದ ಸಭೆಯಲ್ಲಿ ಹೇಳಿಕೆ
* ರೈತ ಸಂಘ, ಕಾಂಗ್ರೆಸ್, ಬಿಜೆಪಿ ಎಲ್ಲರೂ ಸೇರಿ ಸಂಚಿನಿಂದ ಸೋಲು

JDS Leader nikhil kumaraswamy recalled Mandya 2019 loksabha Poll defeat rbj
Author
Bengaluru, First Published Nov 29, 2021, 7:01 PM IST

ಮಂಡ್ಯ, (ನ.29):  ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kamaraswamy) ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) 2019ರ ಮಂಡ್ಯ ಲೋಕಸಭೆ ಚುನಾವಣೆಯ (Mandya Loksabha Election 2019) ಸೋಲು ನೆನಪಿಸಿಕೊಂಡಿದ್ದಾರೆ.

ಮಂಡ್ಯ(mandya) ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಇಂದು (ನ.29) ಮಾತನಾಡಿದ  ನಿಖಿಲ್ ಕುಮಾರಸ್ವಾಮಿ , 2019ರ ಲೋಕಸಭೆ ಚುನಾವಣೆಯಲ್ಲಿ ರೈತ ಸಂಘ, ಕಾಂಗ್ರೆಸ್, ಬಿಜೆಪಿ ಎಲ್ಲರೂ ಸೇರಿ ಸಂಚು ರೂಪಿಸಿ ನನ್ನನ್ನ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಸೋಲಿನ ಹಿಂದೆ ಅವರ ಕುತಂತ್ರವಿದೆ : ನಿಖಿಲ್ ಕುಮಾರಸ್ವಾಮಿ

ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿ ಅಭ್ಯಾಸವಿದೆ. ರಾಜಕೀಯದಲ್ಲಿ ಒತ್ತಡ ಹಾಕಿ ಅಭಿಮನ್ಯು ಪಾತ್ರ ಮಾಡಿಸಿಬಿಟ್ಟಿದ್ದಾರೆ. ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದಂತೆ ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಕುರುಕ್ಷೇತ್ರದ ಅಭಿಮನ್ಯುವಿನಂತೆ ಏಕಾಂಗಿಯಾದೆ. ಕುಮಾರಣ್ಣನ ನಾಯಕತ್ವದ ಮೇಲೆ ಪ್ರಶ್ನೆ ತರಲು ನನ್ನ ಸೋಲಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೂರು ಪಕ್ಷಗಳ ಹುನ್ನಾರದಿಂದ ನಾನು ಸೋಲಬೇಕಾಯಿತು. ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರ ಒತ್ತಡದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ. ಆ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ. ನನ್ನ ವಯಸ್ಸು ಇನ್ನೂ ಚಿಕ್ಕದಿದೆ. ಕಾರ್ಯಕರ್ತರು, ಮುಖಂಡರೊಂದಿಗೆ ಬೆರೆಯುವುದನ್ನು ತಂದೆ ಹಾಗೂ ತಾತಾ ಹೇಳಿಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದೇನೆ. ಇಂತಹ ಸಂದರ್ಭದಲ್ಲಿ ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ನಾನು ಆಕಸ್ಮಿಕವಾಗಿ ಅಭ್ಯರ್ಥಿಯಾದೆ. ಸ್ಥಾನಮಾನಗಳು ಬೇಕೆಂದು ಹುಚ್ಚಿಡಿಸಿಕೊಂಡು ಅಭ್ಯರ್ಥಿಯಾಗಲಿಲ್ಲ. ನನಗೆ ಅಧಿಕಾರದ ಹುಚ್ಚಿದ್ದರೆ 2018 ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್ಆರ್ ಶಿವರಾಮೇಗೌಡ ಅವರಿಗೆ ಟಿಕೆಟ್ ಕೊಡದೆ ನಾನೇ ನಿಲ್ಲುತ್ತಿದ್ದೆ. ತಂದೆಯ ಹೆಸರಿನಿಂದ ಅಧಿಕಾರ ಹಿಡಿಯಬೇಕಾದ ಪರಿಸ್ಥಿತಿ ನನಗೆ ಬಂದಿಲ್ಲ ಅಂತ ನಿಖಿಲ್ ಹೇಳಿದ್ದಾರೆ. 

ಮುಂಬರುವ ವಿಧಾನ ಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಪಕ್ಷ ಸಂಘಟನೆ ಆರಂಭಿಸಿದ್ದೇವೆ, ತಮ್ಮ ತಂದೆಯ ಕೆಲವು ಆಲೋಚನೆಗಳನ್ನು ಮುಂದಿನ ಚುನಾವಣೆಯಲ್ಲಿ ಅನುಷ್ಠಾನಗೊಳಿಸುತ್ತೇನೆ, ಜನರ ಕಷ್ಟಗಳನ್ನು ಆಲಿಸಲು ಕ್ಷೇತ್ರದಲ್ಲಿ ಮನೆ ಮಾಡಿಕೊಂಡು ಇರಬೇಕೆಂದೇನಿಲ್ಲ, ಜನರಿಗೆ ಸಹಾಯ ಮಾಡುವ ಮನಸ್ಸಿದ್ದರೇ ಸಾಕು ಎಂದರು

ಮೂರು ಪಕ್ಷಗಳ ಹುನ್ನಾರದಿಂದ ನಾನು ಸೋಲಬೇಕಾಯಿತು. ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರ ಒತ್ತಡದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ. ಆ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ. ನನ್ನ ವಯಸ್ಸು ಇನ್ನೂ ಚಿಕ್ಕದಿದೆ. ಕಾರ್ಯಕರ್ತರು, ಮುಖಂಡರೊಂದಿಗೆ ಬೆರೆಯುವುದನ್ನು ತಂದೆ ಹಾಗೂ ತಾತಾ ಹೇಳಿಕೊಟ್ಟಿದ್ದಾರೆ ಎಂದು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದೇನೆ. ಇಂತಹ ಸಂದರ್ಭದಲ್ಲಿ ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ನಾನು ಆಕಸ್ಮಿಕವಾಗಿ ಅಭ್ಯರ್ಥಿಯಾದೆ. ಸ್ಥಾನಮಾನಗಳು ಬೇಕೆಂದು ಹುಚ್ಚಿಡಿಸಿಕೊಂಡು ಅಭ್ಯರ್ಥಿಯಾಗಲಿಲ್ಲ. ನನಗೆ ಅಧಿಕಾರದ ಹುಚ್ಚಿದ್ದರೆ 2018 ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್ಆರ್ ಶಿವರಾಮೇಗೌಡ ಅವರಿಗೆ ಟಿಕೆಟ್ ಕೊಡದೆ ನಾನೇ ನಿಲ್ಲುತ್ತಿದ್ದೆ. ತಂದೆಯ ಹೆಸರಿನಿಂದ ಅಧಿಕಾರ ಹಿಡಿಯಬೇಕಾದ ಪರಿಸ್ಥಿತಿ ನನಗೆ ಬಂದಿಲ್ಲ ಎಂದರು. 

ಇನ್ನು ಇದೇ ವೇಳೆ ಮಂಡ್ಯ ವಿಧಾನಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ನಿಖಿಲ್ ಎಂಎಲ್‌ಸಿ ಚುನಾವಣೆಯಲ್ಲಿ ಅಪ್ಪಾಜಿಗೌಡ ಅವರನ್ನು ಗೆಲ್ಲಿಸುವ ಹೊಣೆ ನನ್ನ ಮೇಲೆ‌ ಇದೆ. ಎಲ್ಲರೂ ಸಹಕರಿಸಿ ಅಪ್ಪಾಜಿಗೌಡರನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.

Follow Us:
Download App:
  • android
  • ios