Asianet Suvarna News Asianet Suvarna News

ಜೈಪುರ ಸಾಹಿತ್ಯ ಉತ್ಸವ 2023ಕ್ಕೆ ವೇದಿಕೆ ಸಜ್ಜು

ಜೈಪುರ ಸಾಹಿತ್ಯ ಉತ್ಸವ ದಿನಾಂಕ ಘೋಷಣೆ
ಜಗತ್ತಿನ ಖ್ಯಾತನಾಮ ಲೇಖಕರು, ಕವಿಗಳು, ಭಾಷಾಂತರಕಾರರು ಭಾಗಿ
ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ರಸದೌತಣ 

Jaipur Lit Fest 2023 date and other details skr
Author
First Published Nov 12, 2022, 3:40 PM IST

ಸಾಹಿತ್ಯವು ಸಮಾಜ, ಅದರ ಜನರು ಮತ್ತು ಅವರ ಸಂಸ್ಕೃತಿಗಳ ಪ್ರತಿಬಿಂಬವಾಗಿದೆ. ಕಳೆದ 15 ವರ್ಷಗಳಿಂದ ಜೈಪುರ ಸಾಹಿತ್ಯ ಉತ್ಸವವು ಭಾಷೆಗಳ ವೈವಿಧ್ಯತೆಯನ್ನು ಪ್ರತಿನಿಧಿಸುವ ಮತ್ತು ಅನುವಾದಿತ ಸಾಹಿತ್ಯ ಕೃತಿಗಳನ್ನು ಪರಿಚಯಿಸುವ ಒಂದು ಅಂತರ್ಗತವಾದ ವೇದಿಕೆಯಾಗಿ ಹೊರಹೊಮ್ಮುತ್ತಾ ಬಂದಿದೆ. ಭಾಷಾಂತರವು ವಿಭಿನ್ನ ಸಂಸ್ಕೃತಿಗಳನ್ನು ಪರಸ್ಪರ ಸಂಪರ್ಕಿಸುವ ನಿಟ್ಟಿನಲ್ಲಿ, ಸಂವಹನ ನಡೆಸಲು ಹಾಗೂ ಉತ್ಕೃಷ್ಟಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. 2023ರ ಜೈಪುರ ಸಾಹಿತ್ಯ ಉತ್ಸವದಲ್ಲಿ ಜಾಗತಿಕ ಮಟ್ಟದ ಹಲವಾರು ಖ್ಯಾತನಾಮ ಭಾಷಾಂತರಕಾರರ ಪಾಲ್ಗೊಳ್ಳುವಿಕೆಯನ್ನು ಕಾಣಬಹುದಾಗಿದೆ. ಈ ಪ್ರತಿಷ್ಠಿತ ಸಾಹಿತ್ಯ ಉತ್ಸವವು ಜೈಪುರದ ಅಮೇರ್ ನ ಹೊಟೇಲ್ ಕ್ಲಾರ್ಕ್ಸ್ ನಲ್ಲಿ 2023ರ ಜನವರಿ 19ರಿಂದ 23ರವರೆಗೆ ನಡೆಯಲಿದೆ.

ಈ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳುವ ಉಪನ್ಯಾಸಕರ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪ್ರಮುಖವಾಗಿ ಪ್ರಶಸ್ತಿ ವಿಜೇತರಾದ ಪೋರ್ಚುಗೀಸ್ ನ ಲೇಖಕರಾದ ಅನಾ ಫಿಲೋಮಿನಾ ಅಮರಾಲಿ, ಹೆಸರಾಂತ ಪತ್ರಕರ್ತ, ಲೇಖಕ ಮತ್ತು ಭಾಷಾಂತರಕಾರ ಅರುನವ ಸಿನ್ಹಾ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅರುಣ ಚಕ್ರವರ್ತಿ, ಕಾದಂಬರಿಕಾರ ದಿಬೇಕ್ ದೇಬ್ರಾಯ್, ಇಟಲಿಯ ಲೇಖಕ ಜಾರ್ಜಿಯೋ ಮೊಂಟೆಫೊಸ್ಚಿ, ಹೆಸರಾಂತ ದ್ವಿಭಾಷಾ ಸಂಪಾದಕ ಮಣಿ ರಾವ್, ಲೇಖಕ ಮತ್ತು ಭಾಷಾಂತರಕಾರರಾದ ಮನೀಷಾ ಚೌಧರಿ, ಭಾಷಾಂತಕಾರ ಮತ್ತು ಅಂಕಣಕಾರ ಮಿನಿ ಕೃಷ್ಣನ್, ಪದ್ಮಭೂಷಣ ಪುರಸ್ಕೃತ ಮೃದಿ ಕೀರ್ತಿ, ಸಂಗೀತ ರಾಯಭಾರಿ & ಯುಎಇ ಮತ್ತು ಈಜಿಪ್ಟ್ ನ ಭಾರತದ ರಾಯಭಾರಿ ನವದೀಪ್ ಸೂರಿ, ಪ್ರಕಾಶಕ ಮತ್ತು ಭಾಷಾಂತರಕಾರ ಆಸ್ಕರ್ ಪುಜೋಲ್, ಭಾಷಾಂತರ ಕ್ಷೇತ್ರದಲ್ಲಿ ಖ್ಯಾತರಾಗಿರುವ ರಿಟಾ ಕೊಠಾರಿ, ಭಾರತೀಯ ಸಮಕಾಲೀನ ಬರಹಗಾರ ಮತ್ತು ಕಲಾವಿದ ಸಾಜ್ ಅಗರ್ವಾಲ್, ಕಾದಂಬರಿಕಾರರಾದ ಸಾಕ್ಷ್ಯಾ ಜೈನ್, ಖ್ಯಾತ ಮಹಿಳಾ ಲೇಖಕಿ ಊರ್ವಶಿ ಬುಟಾಲಿಯಾ, ಕಾದಂಬರಿಕಾರರಾದ ವಿನೀತ್ ಗಿಲ್ ಮತ್ತು ಖ್ಯಾತ ಕವಿ, ಸಂಗೀತಗಾರ ಹಾಗೂ ಸಿನಿಮಾ ತಜ್ಞ ಯತೀಂದ್ರ ಮಿಶ್ರಾ ಸೇರಿದಂತೆ ಇನ್ನೂ ಹಲವಾರು ಗಣ್ಯರು ಇದ್ದಾರೆ.

ಶ್ರೀ ರವಿಶಂಕರ್ ಗುರೂಜಿಗೆ 'ಗಾಂಧಿ ಪೀಸ್ ಪಿಲಿಗ್ರಿಮ್' ಪ್ರಶಸ್ತಿ ಪ್ರದಾನ

ವಿಶ್ವದ 16ನೇ ಆವೃತ್ತಿಯ ಈ ಅತ್ಯದ್ಭುತವಾದ ಸಾಹಿತ್ಯ ಪ್ರದರ್ಶನದಲ್ಲಿ ಹಲವಾರು ಖ್ಯಾತನಾಮ ಪ್ರಶಸ್ತಿ ವಿಜೇತ ಕವಿಗಳೂ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಪ್ರಮುಖರೆಂದರೆ 2013ರಲ್ಲಿ ದಕ್ಷಿಣ ಏಷ್ಯಾ ಕವಿಗೋಷ್ಠಿಯಲ್ಲಿ ಸಾರ್ಕ್ ಸಾಹಿತ್ಯ ಪ್ರಶಸ್ತಿ ಪಡೆದಿದ್ದ ಅಭಯ್ ಕೆ, ಕಾದಂಬರಿಕಾರ, ಸಾಹಿತ್ಯ ಪತ್ರಕರ್ತ ಮತ್ತು ಭಾಷಾಂತರಕಾರರಾದ ಅನುಪಮ ರಾಜು, ಎಸ್ಟೋನಿಯನ್ ಕವಿ ಡೊರಿಸ್ ಕರೆವಾ ಮತ್ತು ಇಂಗ್ಲಿಷ್ ಪೆನ್ ಟ್ರಾನ್ಸ್ ಲೇಟ್ಸ್ ಅವಾರ್ಡ್ ವಿಜೇತರಾದ ಕೊ ಕೊ ಥೆಟ್ ಇದ್ದಾರೆ.

ಇದಲ್ಲದೆ, ಈ ಹಿಂದೆ ಪ್ರಕಟಿಸಲಾಗಿರುವ ಉಪನ್ಯಾಸಕರ ಪಟ್ಟಿಯಲ್ಲಿ ಡೈಸಿ ರಾಕ್ ವೆಲ್, ಅನಾಮಿಕಾ, ಅನು ಸಿಂಗ್ ಚೌಧರಿ, ನವತೇಜ್ ಸರ್ನಾ, ಜೆರ್ರಿ ಪಿಂಟೋ, ರಾಣಾ ಸಾಫ್ವಿ ಮತ್ತು ಟಿಫನಿ ಸಾಒ ಸೇರಿದಂತೆ ಹಲವಾರು ಮಂದಿ ಸೇರಿದ್ದಾರೆ.

Follow Us:
Download App:
  • android
  • ios