Asianet Suvarna News Asianet Suvarna News

ಅಪಘಾತದಲ್ಲಿ ಕೈ ಕಳೆದರೂ ದುಡಿಯುವ ಛಲ ಕುಗಿಲ್ಲ: 80 ರ ಹರೆಯದ ಸ್ವಾಭಿಮಾನಿ ರಾಮನ್

ಸಾಧನೆ ಮಾಡುವ ಹೋರಾಟ ಛಲವಿದ್ದರೆ ಯಾವ ವೈಕಲ್ಯತೆಗಳು ಅಡ್ಡಿಗಳು ಕೂಡ ನಮ್ಮನ್ನು ಬಾಧಿಸದು. ತಮ್ಮ ವೈಕಲ್ಯತೆಯನ್ನು ಮೀರಿ ನಿಂತು ಸಾಧನೆ ಮಾಡಿದ ಅನೇಕರು ನಮ್ಮ ನಡುವೆ ಇದ್ದಾರೆ. ಇಂತಹವರ ಸಾಲಿಗೆ ಮತ್ತೊಂದು ಸೇರ್ಪಡೆ ಕೊಯಮತ್ತೂರಿನ 80 ವರ್ಷದ ಶ್ರೀರಾಮನ್‌. 

despite being differently-abled man from Coimbatore has won hearts on the internet for his determination to earn akb
Author
Bangalore, First Published Jun 24, 2022, 5:15 PM IST

ಸಾಧನೆ ಮಾಡುವ ಹೋರಾಟ ಛಲವಿದ್ದರೆ ಯಾವ ವೈಕಲ್ಯತೆಗಳು ಅಡ್ಡಿಗಳು ಕೂಡ ನಮ್ಮನ್ನು ಬಾಧಿಸದು. ತಮ್ಮ ವೈಕಲ್ಯತೆಯನ್ನು ಮೀರಿ ನಿಂತು ಸಾಧನೆ ಮಾಡಿದ ಅನೇಕರು ನಮ್ಮ ನಡುವೆ ಇದ್ದಾರೆ. ಇಂತಹವರ ಸಾಲಿಗೆ ಮತ್ತೊಂದು ಸೇರ್ಪಡೆ ಕೊಯಮತ್ತೂರಿನ 80 ವರ್ಷದ ಶ್ರೀರಾಮನ್‌. ಅಪಘಾತದಿಂದಾಗಿ ತಮ್ಮ ಒಂದು ಕೈ ಕಳೆದುಕೊಂಡು ವಿಶೇಷಚೇತನರಾಗಿರುವ ಅವರು ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುವ ಸಲುವಾಗಿ ಈ ಇಳಿವಯಸ್ಸಿನಲ್ಲೂ ಶ್ರಮಪಟ್ಟು ದುಡಿಯುತ್ತಿದ್ದಾರೆ. 

ಪುದುಕೊಟ್ಟೈ (Pudukkottai) ಜಿಲ್ಲೆಯವರಾದ ಶ್ರೀರಾಮನ್ ಅವರು ತಮ್ಮ ಆರಂಭಿಕ ದಿನಗಳಿಂದಲೂ ಖಾಸಗಿ ಬಸ್ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ದುರದೃಷ್ಟವಶಾತ್, ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಅವರ ಬಲಗೈ ತುಂಡಾಯಿತು. ಆದರೂ ಅವರ ದೃಢ ಸಂಕಲ್ಪ ಅವರನ್ನು ಆ ಆಘಾತದಿಂದ ಹೊರತಂದು ಮತ್ತೆ ದುಡಿಯಲು ಪ್ರೇರೆಪಿಸಿತು. ಕೈ ಕಳೆದುಕೊಂಡ ಶ್ರೀರಾಮನ್ ಅವರಿಗೆ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಕೆಲಸ ಸಿಕ್ಕಿತು. ಅಲ್ಲೂ  37 ವರ್ಷಗಳ ಕಾಲ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ ಅವರು ನಂತರ ನಿವೃತ್ತರಾದರು. ನಿವೃತ್ತಿಯ ನಂತರ ಅಂದರೆ ಒಂದು ದಶಕದ ಹಿಂದೆ ಅವರು ತಮ್ಮ ಪತ್ನಿಯೊಂದಿಗೆ ಕೊಯಮತ್ತೂರಿಗೆ ವಲಸೆ ಬಂದರು. 

ಅಂಗವಿಕಲನಿಗೆ ಆಧಾರ್ ಕಾರ್ಡ್‌ ಕೊಡಿಸಿದ ಪ್ರಧಾನಿ ಮೋದಿ: 2 ವರ್ಷದ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ..!
 

ಕೊನೆ ಉಸಿರಿರುವವರೆಗೂ ಕೆಲಸ ಮಾಡಲು ನಿರ್ಧರಿಸಿರುವ ಪ್ರಸ್ತುತ ಕೊಯಮತ್ತೂರಿನಲ್ಲಿ (Coimbatore) ಕೊರಿಯರ್ ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಒಂದು ಕೈ ಇಲ್ಲದಿದ್ದರೂ ಅವರು ತಮಗಿರುವ ಒಂದು ಕೈಯನ್ನು ಬಳಸಿಕೊಂಡು ಅದೇ ಕೈಯಲ್ಲಿ ಸೈಕಲ್‌ (bicycle) ಓಡಿಸುವ ಮೂಲಕ ನಗರದಾದ್ಯಂತ ಕೊರಿಯರ್‌ಗಳನ್ನು ತಲುಪಿಸುತ್ತಿದ್ದಾರೆ. ಪ್ರತಿದಿನ ತಡಗಾಂ ಪ್ರದೇಶದಿಂದ ಸಾಯಿಬಾಬಾ ಕಾಲೋನಿಯಲ್ಲಿರುವ ಖಾಸಗಿ ಕೊರಿಯರ್ ಕಂಪನಿಗೆ ತೆರಳಿ ಅಲ್ಲಿಂದ ಪಾರ್ಸೆಲ್ ತೆಗೆದುಕೊಂಡು ಸೈಕಲ್ ತುಳಿಯುತ್ತಾ ಮನೆ ಮನೆಗೆ ತೆರಳಿ ಕೊರಿಯರ್‌ ತಲುಪಿಸುತ್ತಿದ್ದಾರೆ. ಈ ವಯೋವೃದ್ಧರು ಕೊಯಮತ್ತೂರು ನಗರದಲ್ಲಿ ಪ್ರತಿನಿತ್ಯ ಸುಮಾರು 60 ಕಿ.ಮೀ ಸೈಕಲ್‌ನಲ್ಲಿ ಸಂಚರಿಸುತ್ತಾರಂತೆ. 

ನನ್ನ ಪತ್ನಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಬೆಳಗ್ಗೆಯೇ ಮನೆಕೆಲಸಗಳನ್ನು ಮುಗಿಸಿ ಇಬ್ಬರಿಗೂ ಅಡುಗೆ ಮಾಡುತ್ತೇನೆ. ನಮಗೊಬ್ಬಳು ಮಗಳಿದ್ದು, ಆಕೆ ಮದುವೆಯಾಗಿ ಬೇರೆ ಊರಿನಲ್ಲಿ ವಾಸಿಸುತ್ತಿದ್ದಾಳೆ. ನಾನು ಕೊರಿಯರ್ ಕಂಪನಿಯ ಮೂಲಕ ತಿಂಗಳಿಗೆ 7,000 ರೂ.ವರೆಗೆ ಗಳಿಸುತ್ತೇನೆ. ಒಂಟಿ ಕೈಯಿಂದ ಸೈಕಲ್ ತುಳಿಯಯುವುದು ನನಗೇನು ಕಷ್ಟ ಎನಿಸಿಲ್ಲ ಎಂದು ಹೇಳುತ್ತಾರೆ ಶ್ರೀರಾಮನ್ (Sri Raman).

ಕಾಲಲ್ಲೇ ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿಗೆ ಡಿಸ್ಟಿಂಕ್ಷನ್‌: ಸಾಧನೆ ಮಾಡಲು ಛಲವೊಂದಿದ್ದರೆ ಸಾಕು..!
 

ಕೆಲ ದಿನಗಳ ಹಿಂದೆ ಬಿಹಾರದ (Bihar) ಬಾಲಕಿಯೊಬ್ಬಳು ಒಂದೇ ಕಾಲಿನಲ್ಲಿ ಜಿಗಿಯುತ್ತಾ ಒಂದು ಕಿ.ಮೀ. ದೂರದ ಶಾಲೆಗೆ ಸಾಗುತ್ತಿದ್ದಳು. ಎರಡು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ (Accident) ಬಾಲಕಿ ಸೀಮಾ ತಮ್ಮ ಕಾಲು ಕಳೆದುಕೊಂಡ ನಂತರ ಅವರಿಗೆ ಜೀವನ ಕಷ್ಟವೆನಿಸಿತ್ತು. ಆದರೆ ಶಿಕ್ಷಣದ ಮೇಲಿನ ಪ್ರೀತಿ ಸೀಮಾಳನ್ನು(Seema)  ಜಿಗಿದುಕೊಂಡೆ ಶಾಲೆಗೆ ತೆರಳುವಂತೆ ಮಾಡಿತ್ತು. ಆದರೆ ಈಕೆ ಈ ರೀತಿ ಶಾಲೆಗೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಚಿತ್ರನಟ ಸೋನು ಸೂದ್‌ (Sonu sood) ಸೇರಿದಂತೆ ಅನೇಕರು ಆಕೆಯ ನೆರವಿಗೆ ಧಾವಿಸಿದ್ದರು. ಜೊತೆಗೆ ಆಕೆಗೆ ಕೃತಕ ಕಾಲು ಅಳವಡಿಸಲು ಸಹಾಯ ಮಾಡಿದ್ದರು.
 

Follow Us:
Download App:
  • android
  • ios