Asianet Suvarna News Asianet Suvarna News

Vani Jairam Postmortem Report: ಹಿರಿಯ ಗಾಯಕಿ ಸಾವಿಗೆ ಕಾರಣ ಬಹಿರಂಗ!

10 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ ಹಿರಿಯ ಗಾಯಿ ವಾಣಿ ಜಯರಾಮ್‌ ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದರು. ಮಕ್ಕಳಿಲ್ಲದ ಅವರು ಪತಿಯ ನಿಧನದ ಬಳಿಕ ಏಕಾಂಗಿಯಾಗಿ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಶನಿವಾರ ಅವರ ನಿವಾಸದಲ್ಲಿ ವಾಣಿ ಜಯರಾಮ್‌ ಅವರ ಮೃತದೇಹ ಪತ್ತೆಯಾದಾಗ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದರು.
 

Vani Jairam Postmortem Report says  no suspicion in her death san
Author
First Published Feb 5, 2023, 4:41 PM IST

ಚೆನ್ನೈ (ಫೆ. 5): ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ 19ಕ್ಕೂ ಅಧಿಕ ಭಾಷೆಗಳಲ್ಲಿ ತಮ್ಮ ಸ್ವರ ಮಾಧುರ್ಯದ ಮೂಲಕ ಸಂಗೀತ ಸುಧೆ ಹರಿಸಿದ್ದ ಹಿರಿಯ ಗಾಯಕಿ ವಾಣಿ ಜಯರಾಮ್‌ ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದರು. ವಯೋಸಹಜ ಕಾಯಿಲೆಗಳೇನೂ ಅವರಿಗೆ ಇದ್ದಿರಲಿಲ್ಲ.  ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದ ಅವರ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಇದರ ನಡುವೆ ಹಣೆಯ ಮೇಲೆ ಗಾಯವಾಗಿದ್ದೂ ಕೂಡ ಸಾವಿನ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿತ್ತು. ಹಿರಿಯ ಗಾಯಕಿಯ ನಿಗೂಢ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದರು. ಭಾನುವಾರ ಅವರ ಮರಣೋತ್ತರ ಪರೀಕ್ಷೆಯ ವಿವರ ಬಹಿರಂಗವಾಗಿದ್ದು, ಸಾವಿನ ಬಗ್ಗೆ ಇದ್ದ ಅನುಮಾನಗಳೆಲ್ಲಾ ದೂರವಾಗಿದೆ. ಅದರೊಂದಿಗೆ ಮನೆಯ ಹಾಗೂ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಿದ ಪೊಲೀಸರು ಹಿರಿಯ ಗಾಯಕಿ ಸಾವಿನ ಕೇಸ್‌ಅನ್ನು ಮುಗಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲೇನಿದೆ: 'ವಾಣಿ ಜಯರಾಮ್ ಅವರ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪೋಸ್ಟ್ ಮಾರ್ಟೆಮ್‌ ವರದಿ ತಿಳಿಸಿದೆ. ಅವರು ತಮ್ಮ ಹಾಸಿಗೆಯ ಬಳಿ ಹಳೆಯ ಮರದ ಮೇಜಿನ ಮೇಲೆ ಜಾರಿ ಬಿದ್ದಿದ್ದರು. ಮೇಜಿನ ಮೇಲೂ ರಕ್ತದ ಕಲೆ ಇತ್ತು. ಟೇಬಲ್ 2 ಅಡಿ ಎತ್ತರವಿದೆ. ಮೇಜಿಗೆ ಬಿದ್ದ ನಂತರ ಅವರ ಹಣೆಯಿಂದ ಭಾರೀ ರಕ್ತಸ್ರಾವವಾಗಿದೆ. ಅವರ ಹಣೆಯ ಮೇಲೆ ಗಾಯವಾಗಿದ್ದೂ ಕಾಣುತ್ತಿತ್ತು. ಸಿಸಿಟಿವಿಯನ್ನು ವೀಕ್ಷಿಸಿದಾಗ ಆಕೆಯ ಮನೆಗೆ ಹೊರಗಿನವರು ಯಾರೂ ಬಂದಿರಲಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.

77 ವರ್ಷದ ಗಾಯಕಿಗೆ ಗಣರಾಜ್ಯೋತ್ಸವ ಮುನ್ನಾ ದಿನ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ಘೋಷಣೆ ಮಾಡಿತ್ತು. ಶನಿವಾರ ಅವರ ಮನೆಯ ಕೆಲಸದ ಹೆಂಗಸು ಮಲರ್‌ಕೋಡಿ ಸಾಕಷ್ಟು ಬಾರಿ ಮನೆಯ ಬೆಲ್‌ ಬಾರಿಸಿದರೂ, ವಾಣಿ ಜಯರಾಮ್‌ ಬಾಗಿಲು ತೆಗೆಯದ ಕಾರಣ, ಅವರ ಸಂಬಂಧಿಗಳು ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೊನೆಗೆ ಬದಲಿ ಕೀ ಬಳಸಿ ಮನೆಯ ಬಾಗಿಲು ತೆಗೆದಾಗ, ವಾಣಿ ಜಯರಾಮ್‌ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿತ್ತು.

ಗಾಯಕಿಯ ಮನೆಯಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಲರ್‌ಕೋಡಿ, ವಾಣಿ ಜಯರಾಮ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. “ಪದ್ಮಭೂಷಣ ಪ್ರಶಸ್ತಿ ಘೋಷಣೆಯಾದ ದಿನದಿಂದಲೂ ಅಭಿನಂದಿಸಲು ಭೇಟಿ ನೀಡಿದ ಅತಿಥಿಗಳು ಮತ್ತು ಹಿತೈಷಿಗಳನ್ನು ಮಾತನಾಡಿಸುವುದರಲ್ಲಿಯೇ ಅವರು ನಿರತರಾಗಿದ್ದರು. ಪ್ರತಿದಿನವೂ ಅವರಿಗೆ ಸಾಕಷ್ಟು ಫೋನ್‌ಗಳು ಬರುತ್ತಿತ್ತು ಹಾಗೂ ಎಲ್ಲಾ ಕರೆಗಳಿಗೂ ಅವರು  ಉತ್ತರಿಸುತ್ತಿದ್ದರು. ಕರೆ ಮಾಡಿದ ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದರು. ಆದರೆ, ಮಕ್ಕಳಿಲ್ಲದ ಅವರು ಒಬ್ಬಂಟಿಯಾಗಿ ಬಾಳುತ್ತಿದ್ದರು' ಎಂದು ಹೇಳಿದ್ದರು.

Vani Jairam: 3 ದಶಕ ಕನ್ನಡದ ಇಂಪಿಗೆ ದನಿಯಾಗಿದ್ದ ಗಾಯಕಿ ವಾಣಿ ಜಯರಾಮ್

ವಾಣಿ ಜಯರಾಮ್‌ ಅವರ ಸಂಬಂಧಿಗಳ ಸಮ್ಮುಖದಲ್ಲಿ ಮಧ್ಯಾಹ್ನ 1.30ರ ವೇಳೆಗೆ ಫ್ಲ್ಯಾಟ್‌ನ ಬಾಗಿಲು ತೆಗೆಯಲು ಪೊಲೀಸರು ಯಶಸ್ವಿಯಾಗಿದ್ದರು. ಮನೆಯ ಬೆಲ್‌ ಬಾರಿಸಿದರೂ ವಾಣಿ ಜಯರಾಮ್‌ ಅವರಿಂದ ಯಾವುದೇ ಉತ್ತರ ಬರದ ಕಾರಣ ಮಲರ್‌ಕೋಡಿಅವರು ವಾಣಿ ಜಯರಾಮ್‌ ಅವರ ಸಹೋದರಿ ಉಮಾ ಅವರಿಗೆ ಮಾಹಿತಿ ನೀಡಿದ್ದರು. ಅವರು ಬದಲಿ ಕೀ ತೆಗೆದುಕೊಂಡು ಮನಗೆ ಬಂದಿದ್ದರು. ಈ ವೇಳೆ ಮಲಗುವ ಕೋಣೆಯಲ್ಲಿ ಅವರ ಶವ ಬಿದ್ದಿತ್ತು ಎಂದು ಪಿಟಿಐ ವರದಿ ಮಾಡಿತ್ತು.

ವಾಣಿ ಜಯರಾಂ ಹಾಡಿದ ಹಾಡು ಕನ್ನಡಿಗರು ಮರೆಯಲು ಸಾಧ್ಯವೇ..!

ವಾಣಿ ಜಯರಾಮ್‌ ಅವರ ಗಾಯನಕ್ಕೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಬಂದಿವೆ. 1973ರಲ್ಲಿ ಬಿಡುಗಡೆಯಾದ ತಾಯುಮ್‌ ಸೇಯುಮ್‌ ಚಿತ್ರದ ಮೂಲಕ ಅವರು ಗಾಯನ ಕ್ಷೇತ್ರಕ್ಕೆ ಪ್ರವೇಶ ಮಾಡಿದರು. 1995ರಲ್ಲಿ ಬಿಡುಗಡೆಯಾದ ಬೆಳದಿಂಗಳ ಬಾಲೆ ಚಿತ್ರದ 'ಗೋಪಾಲ ನೀ..', ಅದರೊಂದಿಗೆ ಸೊಗಸಾದ ಸಂಜೆ, ಏನ್‌ ಹುಡ್ಗೀರೋ ಅದ್ಯಾಕಿಂಗ್‌ ಆಡ್ತೀರೋ, ಬೊಂಬೆಯಾಟವಯ್ಯಾ, ರಾಗ.. ಜೀವನ ರಾಗ..ಸೇರಿದಂತೆ ಸಾಕಷ್ಟು ಪ್ರಸಿದ್ಧ ಹಾಡುಗಳಿಗೆ ಅವರಿ ದನಿಯಾಗಿದ್ದರು.

Follow Us:
Download App:
  • android
  • ios