Asianet Suvarna News Asianet Suvarna News

Commonwealth Games: ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತ ಮಹಿಳಾ ಹಾಕಿ ತಂಡ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಮಹಿಳಾ ಹಾಕಿ ತಂಡ
ನ್ಯೂಜಿಲೆಂಡ್ ಎದುರು ರೋಚಕ ಜಯ ಸಾಧಿಸಿದ ಸವಿತಾ ಪೂನಿಯ ಪಡೆ
ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ದಾಖಲಿಸಿದ ಭಾರತ ಮಹಿಳಾ ತಂಡ

Commonwealth Games 2022 India womens hockey team beat New Zealand and Clinch Bronze medal kvn
Author
Bengaluru, First Published Aug 7, 2022, 3:27 PM IST

ಬರ್ಮಿಂಗ್‌ಹ್ಯಾಮ್‌(ಆ.07): ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಸವಿತಾ ಪೂನಿಯಾ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಾಕಿ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ನ್ಯೂಜಿಲೆಂಡ್ ಎದುರಿನ ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಕೊನೆಗೂ ಗೆಲುವಿನ ಕೇಕೆ ಹಾಕುವಂತೆ ಮಾಡಿದೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ಮಹಿಳಾ ತಂಡವು, ಹಾಕಿ ವಿಶ್ವಕಪ್ ಟೂರ್ನಿಯಲ್ಲಿ 9ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿತ್ತು. ಆದರೆ ಇದೀಗ ಕಾಮನ್‌ವೆಲ್ತ್‌ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಭಾರತ ತಂಡವು ಯಶಸ್ವಿಯಾಗಿದೆ.  ಮೊದಲ ಕ್ವಾರ್ಟರ್‌ನಿಂದಲೇ ಉಭಯ ತಂಡಗಳು ಆಕ್ರಮಣಕಾರಿ ಆಟವಾಡುವ ಯತ್ನ ನಡೆಸಿದರೂ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಸಲೀಮಾ ತೇಟೆ ಗೋಲಿನ ಖಾತೆ ತೆರೆಯುವ ಮೂಲಕ 1-0 ಮುನ್ನಡೆ ತಂದುಕೊಟ್ಟರು. ಪಂದ್ಯದ ಕೊನೆಯ ನಿಮಿಷದವರೆಗೂ ಭಾರತ 1-0 ಮುನ್ನಡೆ ಕಾಯ್ದುಕೊಂಡಿತ್ತು. ಸಾಕಷ್ಟು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿದರೂ ಸಹಾ ಭಾರತ ಅದನ್ನು ಸೂಕ್ತವಾಗಿ ಬಳಸಿಕೊಳ್ಳಲು ಯಶಸ್ವಿಯಾಗಲಿಲ್ಲ. ಆದರೆ ಕೊನೆಯ ನಿಮಿಷದ ಕೆಲವೇ ಸೆಕೆಂಡ್‌ಗಳು ಭಾಕಿ ಇದ್ದಾಗ ಅಂದರೆ 18 ಸೆಕೆಂಡ್ ಇದ್ದಾಗ ನ್ಯೂಜಿಲೆಂಡ್ ಗೋಲು ಬಾರಿಸುವ ಮೂಲಕ 1-1ರ ಸಮಬಲ ಸಾಧಿಸುವಂತೆ ಮಾಡಿದರು.

Commonwealth Games: ದಕ್ಷಿಣ ಆಫ್ರಿಕಾ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

ಪೆನಾಲ್ಟಿ ಶೂಟೌಟ್‌ನಲ್ಲಿ ಮಿಂಚಿದ ಸವಿತಾ ಪೂನಿಯಾ: ಪಂದ್ಯವು 1-1ರ ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಮೊದಲ ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್ ಗೋಲು ಬಾರಿಸುವ ಮೂಲಕ 1-0 ಮುನ್ನಡೆ ಸಾಧಿಸಿತು. ಇದರ ಬೆನ್ನಲ್ಲೇ ಭಾರತ ಎರಡು ಸತತ ಗೋಲು ದಾಖಲಿಸಿತು. ಈ ಮೂಲಕ ಭಾರತ 2-1ರ ಮುನ್ನಡೆ ಸಾಧಿಸಿತು. ಕೊನೆಯಲ್ಲಿ ಉತ್ತಮ ಗೋಲು ಕೀಪಿಂಗ್ ಮಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ನಾಯಕಿ ಸವಿತಾ ಪೂನಿಯ ಯಶಸ್ವಿಯಾದರು.
 

Follow Us:
Download App:
  • android
  • ios