ಮಂತ್ರಾಲಯ ಗುರು ರಾಯರ ಸನ್ನಿಧಿಯಲ್ಲಿ ರಾಮಾಚಾರಿ ಬೆಡಗಿ ಮೌನ ಗುಡ್ಡೆಮನೆ
ರಾಮಾಚಾರಿಯ ಬೆಡಗಿ ಚಾರು ಆಲಿಯಾಸ್ ಮೌನ ಗುಡ್ಡೆಮನೆ ಮಂತ್ರಾಲಯಕ್ಕೆ ತೆರಳಿ ಗುರು ರಾಯರ ದರ್ಶನ ಪಡೆದು ಬಂದಿದ್ದಾರೆ.
ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ಮುದ್ದಿನ ಪತ್ನಿ ಚಾರು ಪಾತ್ರಕ್ಕೆ ಜೀವ ತುಂಬುತ್ತಿರುವ ಬೆಡಗಿ ಮೌನ ಗುಡ್ಡೆಮನೆ (Mouna Guddemane) ಸದ್ಯ ತಮ್ಮ ಶೂಟಿಂಗ್ ನಿಂದ ಬ್ರೇಕ್ ಪಡೆದು ಗುರು ರಾಯರ ದರ್ಶನ ಪಡೆದು ಬಂದಿದ್ದಾರೆ. ಅಲ್ಲದೇ ಅಲ್ಲಿನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೌನ ಗುಡ್ಡೆಮನೆ ತಮ್ಮ ಸ್ನೇಹಿತರ ಜೊತೆಗೆ ಎರಡು ದಿನಗಳ ಹಿಂದೆ ಮಂತ್ರಾಲಯಕ್ಕೆ (Mantralaya)ತೆರಳಿದ್ದು, ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ದೇವಸ್ಥಾನದ ಪ್ರಾಂಗಣದಲ್ಲಿ ನಿಂತು ತೆಗೆದಂತಹ ಫೊಟೋಗಳು, ಸ್ನೇಹಿತರ ಜೊತೆಗಿನ ಫೋಟೊಗಳು, ಜರ್ನಿಯ ಫೋಟೊಗಳನ್ನು ಮೌನ ತಮ್ಮ ಇನ್’ಸ್ಟಾಗ್ರಾಂನಲ್ಲಿ ನಟಿ ಹಂಚಿಕೊಂಡಿದ್ದಾರೆ.
ಮೌನ ಗುಡ್ಡೆಮನೆ ಹೆಚ್ಚಾಗಿ ದೇವಸ್ಥಾನಗಳ ವಿಸಿಟ್ ಮಾಡುತ್ತಿರುತ್ತಾರೆ. ಈ ಹಿಂದೆ ಹೊಸ ಕಾರು ಖರೀದಿಸಿದಾಗ ಚಾಮುಂಡೇಶ್ವರಿ (Chamundeshwari Temple_ತಾಯಿ ದರ್ಶನ ಮಾಡಿದ್ದರು, ಮಂಗಳೂರಿಗೆ ಹೋದಾಗ ಮಂಗಳಾದೇವಿ, ಕದ್ರಿ ಮಂಜುನಾಥನ ದರ್ಶನ ಪಡೆದಿದ್ದರು, ಅದಕ್ಕೂ ಮುನ್ನ ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ ಜೊತೆಗೆ ಸಿಂಗಧೂರು ಚೌಡೇಶ್ವರಿ ತಾಯಿ ದರ್ಶನ ಕೂಡ ಪಡೆದಿದ್ದರು.
ವೀಕ್ಷಕರ ನೆಚ್ಚಿನ ಚಾರು ರಾಯರ ಸನ್ನಿಧಿಯಲ್ಲಿರೋದನ್ನ ನೋಡಿ ಖುಷಿ ಪಡ್ತಿರೋ ಅಭಿಮಾನಿಗಳು ರಾಯರು ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ , ಇಷ್ಟಾರ್ಥ ಅಭಿವೃದ್ಧಿ ಅನುಗ್ರಹ ಸಿದ್ದಿರಸ್ತು, ಡಿವೈನ್ ಸ್ಥಳದಲ್ಲಿ ಡಿವೈನ್ ಬ್ಯೂಟಿ, ನೀವು ಹೋಗೋದು ಗೊತ್ತಿದ್ದರೆ ನಾವು ಬರುತ್ತಿದ್ದೆವು, ಇನ್ನು ಮುಂದೆ ಹೋಗೋವಾಗ ಒಂದು ಸಂದೇಶ ಹಾಕಿ ಅಂತಾನೂ ಬರೆದಿದ್ದಾರೆ.
ಮೌನ ಗುಡ್ಡೆಮನೆ ಕೆಂಪು ಸೀರೆ ಮತ್ತು ಕೆಂಪು ಬ್ಲೌಸ್ ಧರಿಸಿದ್ದು ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ನಟಿಯ ಅಂದಕ್ಕೂ ಫಿದಾ ಆಗಿರುವ ನೆಟ್ಟಿಗರು ಕಾಮೆಂಟ್ ಮೂಲಕ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ. ಮುದ್ದು ಮುಖದ ಚೆಲುವೆ, ದೇವತೆ, ಯುವರಾಣಿ ತರ ಕಾಣಿಸ್ತಿದ್ದೀರಾ, ಈ ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದೀರಿ ಎಂದಿದ್ದಾರೆ. ಅಷ್ಟೇ ಅಲ್ಲ ರಾಘವೇಂದ್ರ ಸ್ವಾಮಿ ನಿಮ್ಮೆಲ್ಲಾ ಪ್ರಾಜೆಕ್ಟ್ ಗಳಿಗೆ ಒಳ್ಳೆದಾಗಲಿ ದೇವರ ಆಶೀರ್ವಾದ ಅಭಿಮಾನಿಗಳ ಪ್ರೀತಿ ಸದಾ ಹೀಗೆ ಇರಲಿ ಎಂದು ಹಾರೈಸಿದ್ದಾರೆ.