ನಿಮ್ಮ ಹಾರ್ಟ್ ತುಂಬಾ ದೊಡ್ಡದು; ತನಿಷಾ ಕುಪ್ಪಂಡ ಸೀರೆ ಫೋಟೋ ವೈರಲ್
ಸೀರೆಯಲ್ಲಿ ಮಿಂಚಿದ ಕುಪ್ಪಂಡ. ನೇರಳೆ ಬಣ್ಣ ಸೂಪರ್ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು.....
ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ, ಸ್ಯಾಂಡಲ್ವುಡ್ ನಟಿ ತನಿಷಾ ಕುಪ್ಪಂಡ ಇದೀಗ ನೇರಳೆ ಬಣ್ಣದ ಕಾಟನ್ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
'A diamond is a piece of coal that stuck to the job' ಎಂದು ತನಿಷಾ ಬರೆದುಕೊಂಡಿದ್ದಾರೆ. ಇದು ತನಿಷಾ ಅಂಗಡಿಯ ಆಭರಣಗಳು.
ಹೌದು! ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅಪ್ಪಟ ಬೆಳ್ಳೆ ಆಭರಣಗಳ ಅಂಗಡಿ ತೆರೆದರು. ಇದಾದ ಕೆಲವೇ ತಿಂಗಳಿನಲ್ಲಿ ಚಿನ್ನ ಮತ್ತು ವಜ್ರದ ಅಂಗಡಿ ತೆರೆದರು.
ಆಭರಣದ ಅಂಗಡಿ ಮಾತ್ರವಲ್ಲದೆ ಅಪ್ಪು ಹೆಸರಿನಲ್ಲಿ ಹೋಟೆಲ್ ಕೂಡ ಹೊಂದಿದ್ದಾರೆ. ಹೀಗಾಗಿ ತನಿಷಾ ಸಿನಿಮಾ ಸೀರಿಯಲ್ಗಳಲ್ಲಿ ಮಾತ್ರವಲ್ಲ ಬ್ಯುಸಿನೆಸ್ನಲ್ಲೂ ಸಖತ್ ಆಕ್ಟಿವ್.
ನೇರಳೆ ಬಣ್ಣದ ಸೀರೆಯಲ್ಲಿ ಕೋರಿಯನ್ ಹಾರ್ಟ್ ಮತ್ತು ನಾರ್ಮಲ್ ಹಾರ್ಟ್ ಫೋಸ್ ಕೊಟ್ಟಿದ್ದಾರೆ. ನಿಮ್ಮ ಹಾರ್ಟ್ ದೊಡ್ಡದು ಮೇಡಂ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ಇದೀಗ ಕೋಣ ಸಿನಿಮಾದಲ್ಲಿ ತನಿಷಾ ನಟಿಸುತ್ತಿದ್ದಾರೆ. ವಿಶೇಷ ಏನೆಂದರೆ ಇದು ತನಿಷಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ. ಹೀಗಾಗಿ ಜನರ ನಿರೀಕ್ಷೆ ಚಿತ್ರದ ಮೇಲೆ ಹೆಚ್ಚಿದೆ.