ಪಾರ್ಟಿಯಲ್ಲಿ ಪುನೀತ್ ರಾಜ್ಕುಮಾರ್ ಮತ್ತು ಅಶ್ವಿನಿ ಜೊತೆಗಿರುವ ಮೋಕ್ಷಿತಾ ಫೋಟೋ ವೈರಲ್!
ಪವರ್ ಸ್ಟಾರ್ ಫ್ಯಾಮಿಲಿ ಜೊತೆ ಕಾಣಿಸಿಕೊಂಡ ಮೋಕ್ಷಿತಾ? ಹೇಗೆ ಪರಿಚಯ? ಎಲ್ಲಿ ಭೇಟಿ ಮಾಡಿದ್ದು ಅನ್ನೋದು ಫ್ಯಾನ್ಸ್ಗಳ ಪ್ರಶ್ನೆ....
ಪಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟ ಮೋಕ್ಷಿತಾ ಪೈ ಇದೀಗ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಲ್ಲದೆ ಯಶಸ್ವಿಯಾಗಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.
ಇದೀಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್ಕುಮಾರ್ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಫ್ಯಾನ್ಸ್ ಚರ್ಚೆ ಶುರು ಮಾಡಿದ್ದಾರೆ.
ಈ ಫೋಟೋವನ್ನು ಮಾರ್ಚ್ 17,2022ರಂದು ಮೋಕ್ಷಿತಾ ಪೈ ಅಪ್ಲೋಡ್ ಮಾಡಿದ್ದು, ಹ್ಯಾಪಿ ಬರ್ತಡೇ ಪವರ್ ಸ್ಟಾರ್ ಎಂದು ಬರೆದುಕೊಂಡಿದ್ದಾರೆ.
ಈ ಫೋಟೋ ಮೇಲ್ನೋಟಕ್ಕೆ ಪಾರ್ಟಿಯಲ್ಲಿ ಕ್ಲಿಕ್ ಮಾಡಿದ್ದು ಎನ್ನಬಹುದು. ಯಾವ ಸಮಯದಲ್ಲಿ ಕ್ಲಿಕ್ ಮಾಡಿದ್ದು, ಯಾವ ಕಾರಣಕ್ಕೆ ಭೇಟಿ ಆಗಿದ್ದು, ಹೇಗೆ ಪರಿಚಯ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಪಾರು ಧಾರಾವಾಹಿಯಲ್ಲಿ ನಟಿಸುವಾಗಲೇ ಸುಮಾರು 9 ಸಿನಿಮಾಗಳ ಆಫರ್ ಮೋಕ್ಷಿತಾಳನ್ನು ಹುಡುಕಿ ಬಂದಿತ್ತು. ಆದರೆ ಪ್ರತಿಯೊಂದನ್ನು ರಿಜೆಕ್ಟ್ ಮಾಡಿದ್ದರು.
2020ರಲ್ಲಿ ದುನಿಯಾ ವಿಜಯ್ ಆಕ್ಷನ್ ಕಟ್ ಹೇಳಿದ ಸಿನಿಮಾ ಒಂದರಲ್ಲಿ ಮೋಕ್ಷಿತಾ ನಟಿಸಿದ್ದರು ಅದಾದ ಮೇಲೆ 2020ರಲ್ಲಿ ನಿರ್ಭಯಾ 2 ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಸದ್ಯ ಫಿನಾಲೆ ಸ್ಪರ್ಧಿಯಾಗಿರುವ ಮೋಕ್ಷಿತಾ ಬೆಂಬಲಕ್ಕೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಈ ಸೀಸನ್ ಮಹಿಳಾ ಸ್ಪರ್ಧಿನೇ ಟ್ರೋಫಿ ಗೆಲ್ಲಬೇಕು ಅನ್ನೋ ವೀಕ್ಷಕರ ಆಸೆ.