ಕನ್ನಡಿಗನ ಬಳಿ ಇದೆ 10.5 ಕೋಟಿ ರೂ ಫೆರಾರಿ ಪುರುಸಾಂಗ್ವೆ, ಈ ಕಾರು ಖರೀದಿಸಿದ ಮೊದಲ ಭಾರತೀಯ!
ಕನ್ನಡಿಗ ಭೂಪೇಶ್ ರೆಡ್ಡಿ ಬಳಿ ಇರುವ ದುಬಾರಿ ಕಾರುಗಳ ಕುರಿತು ಜಗತ್ತೆ ನಿಬ್ಬೆರಗಾಗಿದೆ. ಇದರ ನಡುವೆ ಮತ್ತೊಂದು ವಿಶೇಷ ಅಂದರೆ ಜಗತ್ತಿನ ಅತೀ ದುಬಾರಿ ಫೆರಾರಿ ಪುರಸಾಂಗ್ವೆ ಕಾರು ಖರೀದಿಸಿದ ಮೊದಲ ಹಾಗೂ ಏಕೈಕ ಭಾರತೀಯ ಇದೇ ಭೂಪೇಶ್ ರೆಡ್ಡಿ.
ಭಾರತದ ಶ್ರೀಮಂತ ಉದ್ಯಮಿಗಳು, ಸೆಲೆಬ್ರೆಟಿಗಳ ಬಳಿ ಹಲವು ದುಬಾರಿ ಕಾರುಗಳಿವೆ. ಅದರಲ್ಲೂ ಮುಕೇಶ್ ಅಂಬಾನಿ, ಶಾರುಖ್ ಖಾನ್ ಸೇರಿದಂತೆ ಹಲವರು ಶ್ರೀಮಂತರ ಬಳಿ ವಿಶ್ವದ ಅತೀ ದುಬಾರಿ ಕಾರುಗಳಿವೆ. ಆದರೆ ಇವರೆಲ್ಲರನ್ನು ಮೀರಿಸುವ ಕಾರು ಕನ್ನಡಿಗ ಭೂಪೇಶ್ ರೆಡ್ಡಿ ಬಳಿ ಇದೆ.
ಉದ್ಯಮಿ ಭೂಪೇಶ್ ರೆಡ್ಡಿ ಭಾರತದ ರಿಯಲ್ ಎಸ್ಟೇಟ್ ವ್ಯವಾಹರದಲ್ಲಿ ಅತೀ ದೊಡ್ಡ ಹೆಸರು. ಬೆಂಗಳೂರಿನಲ್ಲಿ ಬ್ರೆನ್ ಕಾರ್ಪೋರೇಶನ್ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿ ಉದ್ಯಮ ಸಾಮ್ರಾಜ್ಯ ಕಟ್ಟಿರುವ ಭೂಪೇಶ್ ರೆಡ್ಡಿ ಬಳಿ ಫೆರಾರಿ ಪುರುಸಾಂಗ್ವೆ ಕಾರಿದೆ. ಇದು ವಿಶ್ವದ ಅತೀ ದುಬಾರಿ ಕಾರು. ಎಕ್ಸ್ ಶೋ ರೂಂ ಬೆಲೆ 10.5 ಕೋಟಿ ರೂಪಾಯಿ.
ಫೆರಾರಿ ಪುರುಸಾಂಗ್ವೆ ಕಾರು ಖರೀದಿಸಿದ ಮೊದಲ ಭಾರತೀಯ ಭೂಪೇಶ್ ರೆಡ್ಡಿ. ಫೆಬ್ರವರಿ ತಿಂಗಳಲ್ಲಿ ಭೂಪೇಶ್ ರೆಡ್ಡಿ ಈ ದುಬಾರಿ ಸೂಪರ್ ಕಾರು ಖರೀದಿಸಿದ್ದಾರೆ. ಇದು ಸ್ಪೆಷಲ್ ಎಡಿಶನ್ ಕಾರಾಗಿದ್ದು, 2022ರಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿದೆ. ಆದರೆ ಈ ಕಾರು ಖರೀದಿಸುವ ಸಾಹಸ ಯಾರು ಮಾಡಿರಲಿಲ್ಲ.
ಆದರೆ ಕನ್ನಡಿಗ ಭೂಪೇಶ್ ರೆಡ್ಡಿ ಬಳಿ ಕಪ್ಪು ಬಣ್ಣದ ಫೆರಾರಿ ಪುರುಸಾಂಗ್ವೆ ಕಾರು ಖರೀದಿಸಿದ್ದಾರೆ. ಇದು ಲ್ಯಾಂಬೋರ್ಗಿನಿ ಉರುಸ್, ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ ಸೇರಿದಂತೆ ಇತರ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ವಿಶ್ವದಲ್ಲೂ ಕೆಲವೇ ಕೆಲವು ಮಂದಿ ಈ ಕಾರಿನ ಮಾಲೀಕರಾಗಿದ್ದಾರೆ. ಈ ಪೈಕಿ ಕನ್ನಡಿ ಭೂಪೇಶ್ ರೆಡ್ಡಿ ಕೂಡ ಒಬ್ಬರು.
ಫೆರಾರಿ ಪುರುಸಾಂಗ್ವೆ ಎಸ್ಯುವಿ ಕಾರು 6.5 ಲೀಟರ್ ವಿ12 ಎಂಜಿನ್ ಹೊಂದಿದೆ. 725 PS ಪವರ್ ಹಾಗೂ 716 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ 0-100 ಕಿ.ಮಿ ವೇಗವನ್ನು ಕೇವಲ 3.3 ಸೆಕೆಂಡ್ನಲ್ಲಿ ಪಡೆದುಕೊಳ್ಳಲಿದೆ. ಈ ಕಾರಿನ ಗರಿಷ್ಠ ವೇಗ 310 ಕಿ.ಮಿ ಪ್ರತಿ ಗಂಟೆಗೆ. ಪ್ರೀಮಿಯಂ ಕ್ಲಾಸ್ ಕಾರು ಅತ್ಯಂತ ಆಕರ್ಷಕವಾಗಿದ್ದು, ಬೆಂಗಳೂರಿನ ಸೂಪರ್ ಕಾರು ಬಳಗದ ಟಾಪ್ 1 ಕಾರಾಗಿದೆ.
ಭೂಪೇಶ್ ರೆಡ್ಡಿ ಬಳಿ ಇದೊಂದೆ ಕಾರಲ್ಲ, ಫೆರಾರಿ ಕಂಪನಿಯ ಬಹುತೇಕ ಎಲ್ಲಾ ಸೂಪರ್ ಕಾರುಗಳಿವೆ. ಇನ್ನು ಲ್ಯಾಂಬೋರ್ಗಿನಿ, ಮರ್ಸಿಡಿಸ್ ಬೆಂಜ್ನ ಪ್ರಮುಖ ಮಾಡೆಲ್ ಕಾರು, ಪೊರ್ಶೆಯ ಬಹುತೇಕ ಎಲ್ಲಾ ಟಾಪ್ ಬ್ರ್ಯಾಂಡ್ ಕಾರು, ಆಸ್ಟನ್ ಮಾರ್ಟಿನ್ ಡಿಬಿಎಸ್ ಕಾಬ್ರನ್ ಬ್ಲಾಕ್ ಸೇರಿದಂತೆ 20ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿವೆ.