Asianet Suvarna News Asianet Suvarna News

Wednesday Remedies: ಬುಧದೋಷವಿದ್ದರೆ, ಸಮಸ್ಯೆಗಳು ಹೆಚ್ಚಿದ್ದರೆ ಬುಧವಾರ ಮಾಡಿ ಈ ಕೆಲಸ

ನಿಮ್ಮ ಜೀವನದ ಪ್ರಮುಖ ಕೆಲಸವು ಯಶಸ್ವಿಯಾಗದಿದ್ದರೆ, ಪ್ರತಿ ಕೆಲಸದಲ್ಲಿ ಅಡೆತಡೆಗಳು ಇದ್ದಲ್ಲಿ, ನೀವು ಬುಧವಾರದಂದು ಗಣಪತಿಯನ್ನು ಪೂಜಿಸಬೇಕು. ಇದರೊಂದಿಗೆ ಗಣಪತಿಯನ್ನು ಮೆಚ್ಚಿಸುವಂತಹ ಕೆಲವು ಕೆಲಸಗಳನ್ನು ಮಾಡಬೇಕು.

Wednesday Astro Remedies to get lord Ganeshas blessings and get rid of problems skr
Author
First Published Nov 30, 2022, 1:03 PM IST

ವಾರದ ಪ್ರತಿ ದಿನವನ್ನೂ ಕೆಲವು ದೇವರು ಮತ್ತು ದೇವತೆಗಳಿಗೆ ಮೀಸಲಾಗಿರಿಸಲಾಗಿದೆ. ಅಂತೆಯೇ ಗಣೇಶ ಬುಧವಾರಕ್ಕೆ ಒಡೆಯ. ಬುಧವಾರ ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿ ಅಡೆತಡೆಗಳು ದೂರವಾಗುತ್ತವೆ. ಏಕೆಂದರೆ ಗಣಪತಿ ಸಿದ್ಧಿ, ಬುದ್ಧಿ ಪ್ರದಾತ ಮಾತ್ರವಲ್ಲ, ಆತ ವಿಘ್ನನಿವಾರಕ ಕೂಡಾ. ಗಣಪತಿಯನ್ನು ಪೂಜಿಸುವ ವ್ಯಕ್ತಿಗೆ ಚುರುಕಾದ ಬುದ್ಧಿಶಕ್ತಿ ಬರುತ್ತದೆ. ಅಂತಹ ಜನರು ಪ್ರತಿ ಪರಿಸ್ಥಿತಿಯನ್ನು ಬಹಳ ಶಾಂತವಾಗಿ ಮತ್ತು ಎಚ್ಚರಿಕೆಯಿಂದ ಎದುರಿಸುತ್ತಾರೆ ಮತ್ತು ಅತ್ಯಂತ ಕಷ್ಟಕರವಾದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತಾರೆ. ಅವರ ನಿರ್ಧಾರ ತೆಗೆದುಕೊಳ್ಳುವ ಉತ್ತಮ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಿಮ್ಮ ಜೀವನದ ಕೆಲಸವು ಯಶಸ್ವಿಯಾಗದಿದ್ದರೆ, ಪ್ರತಿ ಕೆಲಸದಲ್ಲಿ ಅಡಚಣೆಯಿದ್ದರೆ, ನೀವು ಬುಧವಾರದಂದು ಗಣೇಶನನ್ನು ಮೆಚ್ಚಿಸುವ ಪರಿಹಾರಗಳನ್ನು ಕೈಗೊಳ್ಳಬೇಕು. ಬುಧವಾರ ಕೈಗೊಳ್ಳಬೇಕಾದ ಅಂಥ ಕ್ರಮಗಳು(Wednesday remedies) ಯಾವೆಲ್ಲ ನೋಡೋಣ.

ಈ ಕೆಲಸಗಳನ್ನು ಮಾಡುವುದರಿಂದ ಗಣಪತಿಯು ಪ್ರಸನ್ನನಾಗುತ್ತಾನೆ
1. ನಾರದ ಪುರಾಣದಲ್ಲಿ ಹೇಳಿರುವ 12 ಗಣಪತಿ ನಾಮಗಳನ್ನು ಬುಧವಾರ ಬೆಳಗ್ಗೆ ಮತ್ತು ಸಂಜೆ 108 ಬಾರಿ ಜಪಿಸುವುದರಿಂದ ಗಣಪತಿಯ ಅನುಗ್ರಹ ಉಳಿಯುತ್ತದೆ ಮತ್ತು ಜೀವನದಲ್ಲಿ ಬರುವ ಪ್ರತಿಯೊಂದು ಅಡೆತಡೆಗಳು ದೂರವಾಗುತ್ತವೆ. ನೀವು ಪ್ರತಿದಿನ ಕೂಡಾ ಈ ಹೆಸರುಗಳನ್ನು ಹೇಳಬಹುದು. ಇದರ ಪರಿಣಾಮ ಇನ್ನೂ ಉತ್ತಮವಾಗಿರುತ್ತದೆ. ಈ 12 ಹೆಸರುಗಳು- ಸುಮುಖ, ಏಕದಂತ, ಕಪಿಲ, ಗಜಕರ್ಣಕ, ಲಂಬೋದರ, ವಿಕಟ, ಅಡ್ಡಿ-ನಾಶಕ, ವಿನಾಯಕ, ಧೂಮ್ರಕೇತು, ಗಣಾಧ್ಯಕ್ಷ, ಬಾಲಚಂದ್ರ, ಗಜಾನನ.

2. ‘ಓಂ ಗಂ ಹಂ ಕ್ಲೌಂ ಗ್ಲಾಂ ಉಚ್ಛಿಷ್ಟಗಣೇಶಾಯ ಮಹಾಯಕ್ಷಯಾಯಾಂ ಬಲಿಃ’ ಅಥವಾ ‘ಓಂ ಗಂ ಗಣಪತಯೇ ನಮಃ’ ಎಂಬ ಮಂತ್ರಗಳನ್ನು ಪಠಿಸುವುದರಿಂದ ಗಣಪತಿಯೂ ಬಹಳ ಪ್ರಸನ್ನನಾಗುತ್ತಾನೆ. ಈ ಮಂತ್ರಗಳನ್ನು ಪಠಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ವ್ಯಕ್ತಿಯ ಜೀವನದಲ್ಲಿ ಶುಭ ಮತ್ತು ಪ್ರಯೋಜನಕಾರಿ ಎರಡೂ ಬರುತ್ತವೆ.

Budh Gochar 2022: ಧನುವಿಗೆ ಬುಧ; 3 ರಾಶಿಗಳಿಗೆ ಡಿಸೆಂಬರ್ ಆರಂಭದಲ್ಲೇ ಲಾಭ, 4ಕ್ಕೆ ನಷ್ಟ, ಸಂಕಷ್ಟ

3. ದೂರ್ವೆ ಗಣಪತಿಗೆ ಬಹಳ ಪ್ರಿಯ. ಪ್ರತಿ ಬುಧವಾರದಂದು 21 ದೂರ್ವೆಯನ್ನು ಗಣೇಶನಿಗೆ ಅರ್ಪಿಸಿ. ದೂರ್ವೆಯನ್ನು ಅರ್ಪಿಸುವುದರಿಂದ ಗಣಪತಿಗೆ ಬಹಳ ಸಂತೋಷವಾಗುತ್ತದೆ. ಹಾಗೆಯೇ ಗಣಪತಿಗೆ ಸಿಂಧೂರವನ್ನು ಅರ್ಪಿಸಿ. 

4. ನೀವು ಕಠಿಣ ಪರಿಶ್ರಮದ ಪೂರ್ಣ ಫಲಿತಾಂಶವನ್ನು ಪಡೆಯದಿದ್ದರೆ, ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರ, ಶುಕ್ಲ ಪಕ್ಷದ ಬುಧವಾರ ಅಥವಾ ಸಂಕಷ್ಟಿ ಚತುರ್ಥಿಯಂದು ಗಣೇಶ ರುದ್ರಾಕ್ಷಿಯನ್ನು ಧರಿಸಿ. ಇದನ್ನು ಧರಿಸುವುದರಿಂದ ಗಣಪತಿಯ ಜೊತೆಗೆ ಮಾತೆ ಗೌರಿ ಮತ್ತು ಮಹಾದೇವನ ಆಶೀರ್ವಾದವೂ ದೊರೆಯುತ್ತದೆ.

5. ಬುಧವಾರ ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ. ಬಡ ವ್ಯಕ್ತಿಗೆ ಹಸಿರು ಬೆಂಡೆಕಾಯಿಯನ್ನು ದಾನ ಮಾಡಿ ಮತ್ತು ಗಣಪತಿಗೆ ಲಡ್ಡುಗಳನ್ನು ಅರ್ಪಿಸಿ.

6. ನಿಮ್ಮ ಜನ್ಮ ಕುಂಡಲಿಯಲ್ಲಿ ಬುಧ ದೋಷವಿದ್ದರೆ ಪ್ರತಿ ಬುಧವಾರದಂದು ಗಣೇಶನಿಗೆ ಮೋದಕ ಸಿಹಿಯನ್ನು ಅರ್ಪಿಸಿ.

Astro Tips: ಈ 5 ವಸ್ತು ಹಂಚಿಕೊಂಡ್ರೆ ಲಾಭದ ಬದಲು ನಷ್ಟವೇ ಹೆಚ್ಚು!

7. ನಿಮ್ಮ ಹೃದಯದಲ್ಲಿ ಯಾವುದೇ ಆಸೆ ಇದ್ದರೆ, ಬುಧವಾರದಂದು ಯಾವುದೇ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಭಗವಂತನಿಗೆ ಬೆಲ್ಲವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಖಂಡಿತವಾಗಿಯೂ ಈಡೇರುತ್ತವೆ.

8. ಬುಧವಾರ ತೃತೀಯ ಲಿಂಗಿಗಳಿಗೆ ಸ್ವಲ್ಪ ಹಣವನ್ನು ದಾನ ಮಾಡಿ. ನಂತರ ಅವರಿಂದ ಯಾವುದೇ ನಾಣ್ಯವನ್ನು ಹಿಂದೆ ತೆಗೆದುಕೊಳ್ಳಿ. ಈ ಹಣವನ್ನು ಪೂಜಿಸಿ ಸೂರ್ಯನಿಗೆ ತೋರಿಸಿ, ನಂತರ ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ, ಇದರಿಂದ ಎಂದಿಗೂ ಹಣದ ಕೊರತೆಯಾಗುವುದಿಲ್ಲ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios