Asianet Suvarna News Asianet Suvarna News

ಬುದ್ಧಿವಂತಿಕೆಯಿಂದಲೇ ಕೆಲಸದಲ್ಲಿ ಯಶ ಸಾಧಿಸೋ ರಾಶಿಗಳಿವು!

ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳಿದ್ದು, ಒಂದಕ್ಕಿಂತ ಒಂದು ರಾಶಿಯ ವ್ಯಕ್ತಿಗಳು ಭಿನ್ನರಾಗಿರುತ್ತಾರೆ. ಈ ರಾಶಿಗಳ ಪ್ರಭಾವವು ಆಯಾ ವ್ಯಕ್ತಿಗಳ ಗುಣ – ಸ್ವಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದೇ ಕಾರಣದಿಂದ ಕೆಲವರು ಬಹಳ ಬುದ್ಧಿವಂತರಾಗಿದ್ದು, ಅದರ ಶಕ್ತಿಯಿಂದಲೇ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶ ಸಾಧಿಸುತ್ತಾರೆ. ಅಂತಹ ನಾಲ್ಕು ರಾಶಿಯ ವ್ಯಕ್ತಿಗಳ ಬಗ್ಗೆ ನೋಡೋಣ...

 These 4 zodiac signs are the most intelligent
Author
Bangalore, First Published Jun 25, 2022, 5:33 PM IST

ಒಬ್ಬ ವ್ಯಕ್ತಿ ಹುಟ್ಟಿನಿಂದಲೇ (Birth) ಏನು, ಎತ್ತ ಎಂಬದನ್ನು ಅಂದಾಜಿಸಬಹುದಾಗಿದೆ. ಅಂದರೆ, ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ ಹುಟ್ಟಿದ ಘಳಿಗೆ, ದಿನಾಂಕ ಹೀಗೆ ಇನ್ನಿತರ ಕೆಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ಅವರ ಗುಣ, ಸ್ವಭಾವ, ಭವಿಷ್ಯ ಸೇರಿದಂತೆ ಜೀವನದಲ್ಲಿ (Life) ಪ್ರಗತಿ, ಆರೋಗ್ಯ (Helath) ಮತ್ತಿತರ ಅಂಶಗಳನ್ನು ಲೆಕ್ಕ ಹಾಕಬಹುದಾಗಿದೆ. 

ಈ ಸಂದರ್ಭದಲ್ಲಿ ಆ ವ್ಯಕ್ತಿಯ ಶೈಕ್ಷಣಿಕ ಬದುಕು ಸೇರಿದಂತೆ ಬುದ್ಧಿವಂತಿಕೆಯನ್ನೂ ಸಹ ತಿಳಿದುಕೊಳ್ಳಬಹುದಾಗಿದೆ. ಹುಟ್ಟಿನ ರಾಶಿಚಕ್ರಗಳಿಗೆ (Zodiac) ಅನುಸಾರವಾಗಿ ಅನೇಕ ಸಂಗತಿಗಳನ್ನು ನಾವು ತಿಳಿಯಬಹುದಾಗಿದೆ. ಅಲ್ಲದೆ, ರಾಶಿಗಳು ಮತ್ತು ಅವುಗಳ ಅಧಿಪತಿ ಗ್ರಹಗಳು (Planets) ಸಹ ಅವುಗಳಿಗೆ ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ. ಇದೇ ರೀತಿಯಲ್ಲಿ ಕೆಲವರು ಹುಟ್ಟಿನಿಂದಲೇ ಬುದ್ಧಿವಂತರಿರುತ್ತಾರೆ. ಇವರು ತಮ್ಮ ಬುದ್ಧಿ ಶಕ್ತಿಯಿಂದಲೇ (Intelligent) ಜೀವನದಲ್ಲಿ ಏನನ್ನಾದರೂ ಸಾಧಿಸುವವರಾಗಿದ್ದಾರೆ. ಇವರಿಗೆ ಎಂದೂ ಸಹ ಯಾವುದಕ್ಕೂ ಕೊರತೆ ಎಂಬುದು ಕಾಡುವುದಿಲ್ಲ. ಇಂತಹ ನಾಲ್ಕು ರಾಶಿಗಳು ಇದ್ದು, ಆ ರಾಶಿಯವರು ಯಾರು..? ಅವರ ವ್ಯಕ್ತಿತ್ವ ಏನು ಎಂಬುದರ ಬಗ್ಗೆ ತಿಳಿಯೋಣ...

ಮೇಷ ರಾಶಿ (Aries)
ಮೇಷ ರಾಶಿಯ ವ್ಯಕ್ತಿಗಳು ಬಹಳ ಬುದ್ಧಿವಂತರಾಗಿರುವುದಲ್ಲದೆ, ತೀಕ್ಷ್ಣ ಮನಸ್ಸನ್ನು ಹೊಂದಿರುವವರು. ಇವರು ಪ್ರತಿ ವಿಷಯದಲ್ಲೂ ಜಾಗರೂಕರಾಗಿರಲು ಇಷ್ಟಪಡುತ್ತಾರೆ. ಇವರು ಸಕಾರಾತ್ಮಕ (Positive) ಚಿಂತನೆಯನ್ನು ಹೊಂದಿರುವುದಲ್ಲದೆ, ಮುನ್ನಡೆಸುವ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಷ್ಟಪಟ್ಟು ದುಡಿಯುವ ಮೂಲಕ, ತಮ್ಮ ವೃತ್ತಿಜೀವನದಲ್ಲಿ (Career) ಉನ್ನತ ಸ್ಥಾನಕ್ಕೆ ಏರುತ್ತಾರೆ. ಒಂದು ಕೆಲಸವನ್ನು ಇವರು ಕೈಗೆತ್ತಿಕೊಂಡರೆಂದರೆ ಅದು ಯಶ ಕಾಣುವವರೆಗೂ ಇವರು ವಿಶ್ರಾಂತಿಯನ್ನು ಪಡೆಯುವವರಲ್ಲ. 

ಯಾವ ರಾಶಿಯವರಿಗೆ ಎಷ್ಟು ಮಕ್ಕಳ ಭಾಗ್ಯ?

ಮಿಥುನ ರಾಶಿ (Gemini)
ಈ ರಾಶಿಯ ವ್ಯಕ್ತಿಗಳು ಬಹಳ ಬುದ್ಧಿವಂತರು. ಇವರ ಈ ಬುದ್ಧಿವಂತಿಕೆಯೇ ಇವರಿಗೆ ಜೀವನದಲ್ಲಿ ಸಾಕಷ್ಟು ಹೆಸರನ್ನು ತಂದುಕೊಡುತ್ತದೆ. ಇವರು ವಾದಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದು, ಇವರನ್ನು ಮೂರ್ಖರನ್ನಾಗಿ ಮಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಯಾರಾದರೂ ತಮ್ಮ ಬಳಿ ಕುತಂತ್ರ ನಡೆಸುತ್ತಿದ್ದರೆ, ಅದನ್ನು ಬಹುಬೇಗ ಕಂಡುಹಿಡಿದುಬಿಡುತ್ತಾರೆ. ಇವರು ಮಾಡುವ ಪ್ರತಿ ಕೆಲಸವನ್ನು (Work) ಯೋಚಿಸಿಯೇ ಮಾಡುತ್ತಾರೆ. ಈ ಕಾರಣದಿಂದಾಗಿ ಇವರ ಗೆಲುವಿನ ಅವಕಾಶಗಳು ಪ್ರತಿ ಬಾರಿಯೂ ಹೆಚ್ಚೇ ಇರುತ್ತದೆ. 

ವೃಶ್ಚಿಕ ರಾಶಿ (Scorpio)
ಈ ರಾಶಿಯ ಅಧಿಪತಿ ಗ್ರಹ ಮಂಗಳ (Mars) ಗ್ರಹವಾಗಿದೆ. ಮಂಗಳನ ಪ್ರಭಾವದಿಂದಾಗಿ ಈ ರಾಶಿಯ ಜನ ಚಾಣಾಕ್ಷರಾಗಿರುತ್ತಾರೆ. ಅಷ್ಟೇ ಬುದ್ಧಿವಂತರಾಗಿಯೂ ಇರುತ್ತಾರೆ. ಇವರನ್ನು ಮೂರ್ಖರನ್ನಾಗಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಇವರು ತೀಕ್ಷ್ಣಮತಿಗಳಾಗಿದ್ದು, ಯಾವುದೇ ಕೆಲಸವನ್ನು ಮಾಡುವುದಿದ್ದರೂ ತಮ್ಮ ಬುದ್ಧಿಬಲದಿಂದಲೇ ಮಾಡುತ್ತಾರೆ. ಇವರು ಎಷ್ಟೇ ಜನರ ಮಧ್ಯೆ ಇದ್ದರೂ ಸಹ ತಮ್ಮದೇ ಆದ ಗುರುತನ್ನು ಹೊಂದಿರುತ್ತಾರೆ. ಅಲ್ಲದೆ, ಇತರರ ಮನಸ್ಸನ್ನು ಗೆಲ್ಲುವುದು ಇವರಿಗ ಬಲು ಸುಲಭ. 

ಆದ್ರಾ ನಕ್ಷತ್ರಕ್ಕೆ ಸೂರ್ಯ ಪ್ರವೇಶ, ಈ 3 ರಾಶಿಯವರಿಗೆ ಸಖತ್ ಲಕ್

ಕನ್ಯಾ ರಾಶಿ (Virgo)
ಈ ರಾಶಿಯ ವ್ಯಕ್ತಿಗಳು ಒಂದು ಬಾರಿ ನಿರ್ಧಾರ ಮಾಡಿದರೆ ಅದು ಪೂರ್ಣಗೊಳ್ಳುವವರೆಗೆ ಸುಮ್ಮನಿರಲಾರರು. ಆ ಮೂಲಕ ಆ ಕೆಲಸವನ್ನು ಸವಾಲಿನ ರೀತಿ ಪರಿಗಣಿಸಿರುತ್ತಾರೆ. ಜೊತೆಗೆ ಬಹಳ ಉತ್ಸಾಹದಿಂದಲೇ ಕಾರ್ಯತಂತ್ರವನ್ನು ಹೆಣೆಯುತ್ತಾರೆ. ಅದರಂತೆಯೇ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ಬುಧ ಗ್ರಹದ (Planet Mercury) ವಿಶೇಷ ಅನುಗ್ರಹವೂ ಇರಲಿದೆ. ಬುಧನು ಬುದ್ಧಿವಂತಿಕೆಯ ಮತ್ತೊಂದು ರೂಪವಾಗಿದೆ. ಅಲ್ಲದೆ, ಈ ರಾಶಿಯವರು ನಾಯಕತ್ವ ಗುಣವನ್ನು (Leadership qualities) ಹೊಂದಿದ್ದು, ಉತ್ತಮ ನಾಯಕರೆಂದು ಸಾಬೀತು ಪಡಿಸುತ್ತಾರೆ. ಪ್ರತಿ ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುವ ಎಲ್ಲ ಲಕ್ಷಣಗಳೂ ಇವರಲ್ಲಿರುತ್ತದೆ. 

Follow Us:
Download App:
  • android
  • ios