Asianet Suvarna News Asianet Suvarna News

Mysuru Dasara: ದಸರಾ ಗಜಪಯಣಕ್ಕೆ ಚಾಲನೆ

 ನಾಡಹಬ್ಬ ಮೈಸೂರು ದಸರಾಗೆ  ಗಜಪಯಣಕ್ಕೆ ಇಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್() ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಚಾಲನೆ ನೀಡಿದರು 

Mysuru dasara Inauguration st somashekhar umesh katti rav
Author
Bangalore, First Published Aug 7, 2022, 1:18 PM IST

ನಾಗರಹೊಳೆ, (ಆ.7) : ನಾಡಹಬ್ಬ ಮೈಸೂರು ದಸರಾ 2022((Mysuru Dasara 2022)ಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಇಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್(S.T.Somashekhar) ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ(Umesh Katti) ಅವರು ಚಾಲನೆ ನೀಡಿದರು. ಮೈಸೂರು(Mysuru) ಜಿಲ್ಲೆ ಹುಣಸೂರು(Hunasuru) ತಾಲೂಕಿನ ವೀರನಹೊಸಹಳ್ಳಿ(Veeranahosahalli)ಗ್ರಾಮದಲ್ಲಿ ಬೆಳಗ್ಗೆ 9.01ರಿಂದ 9.35ರ ಕನ್ಯಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವುದರ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.  

Mysuru Dasara ಮೈಸೂರು ದಸರಾ ಸಿದ್ಧತೆ ಜೋರು: ಗಜಪಡೆ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜು

ಅಭಿಮನ್ಯು(Abhimanyu), ಅರ್ಜುನ(Arjuna), ಧನಂಜಯ(Dhananjaya), ಮಹೇಂದ್ರ(Mahendra), ಭೀಮ(Bhima), ಚೈತ್ರಾ(Chaitra), ಗೋಪಾಲಸ್ವಾಮಿ(Gopalaswamy),  ಕಾವೇರಿ(Kaveri), ಲಕ್ಷ್ಮೀ((Lakshmi) ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲತಾಂಬೂಲ ನೀಡಲಾಯಿತು.

ಕಲಾತಂಡಗಳು, ಮಂಗಳವಾದ್ಯಗಳ ಜೊತೆಗೆ ವರುಣನ ಸಿಂಚನದ ನಡುವೆ ಗಜಪಡೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆಹಾಕಿದವು.

ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರಾದ ಎಸ್.ಟಿ.ಸೋಮಶೇಖರ್, ಗಜಪಯಣಕ್ಕೆ ಇಂದು ವಿಜೃಂಭಣೆಯಿಂದ ಚಾಲನೆ ನೀಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ನೇತೃತ್ವದಲ್ಲಿ ಆನೆಗಳನ್ನು ಮೈಸೂರಿಗೆ ಕರೆತರುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.

Mysuru Dasara ಈ ಬಾರಿ ಮೈಸೂರು ದಸರಾ ವೈಭವ ಜೋರು, ಸಭೆಯಲ್ಲಿ ನಿರ್ಧಾರ

ಶಾಸಕರಾದ ಮಂಜುನಾಥ್(MLA Manjunath), ವಿಧಾನಪರಿಷತ್ ಸದಸ್ಯರಾದ ವಿಶ್ವನಾಥ್(Vishwanath), ಮಂಜೇಗೌಡ(Manjegowda), ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್(Dr Bagadi Gautham), ಜಿಪಂ ಸಿಇಒ ಪೂರ್ಣಿಮಾ(Poornima), ಎಸ್.ಪಿ.ಚೇತನ್(SP Chetan) ಸೇರಿದಂತೆ ನಾನಾ ನಿಗಮ ಮಂಡಳಿಗಳ ಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು. ಆ.10ರಂದು ಅರಮನೆಗೆ ಗಜಪಡೆಗಳ ಆಗಮನವಾಗಲಿದೆ. ಅಂದು ಬೆಳಗ್ಗೆ 9.20ರಿಂದ 10.00ರ ಕನ್ಯಾ ಲಗ್ನದಲ್ಲಿ ಗಜಪಡೆಗಳನ್ನು ಬರಮಾಡಿಕೊಳ್ಳಲಾಗುತ್ತದೆ.

Follow Us:
Download App:
  • android
  • ios