ಬೆಂಗಳೂರಿನಲ್ಲಿ ಬಿಬಿಎಂಪಿ ನೌಕರನ ಪತ್ನಿಯ ರೇಪ್ ಅಂಡ್ ಮರ್ಡರ್!

ಬೆಂಗಳೂರಿನಲ್ಲಿ ಬಿಬಿಎಂಪಿ ನೌಕರನ ಪತ್ನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಕಲ್ಕೆರೆ ಕೆರೆ ಬಳಿ ಈ ಘಟನೆ ನಡೆದಿದ್ದು, ಮಹಿಳೆ ಮನೆಗೆ ಹೋಗುವಾಗ ದಾರಿ ಮಧ್ಯೆ ಅಪಹರಣಕ್ಕೊಳಗಾಗಿದ್ದರು.

BBMP employee wife raped and murdered in Bengaluru sat

ಬೆಂಗಳೂರು (ಜ.24): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಂಡ ಬಿಬಿಎಂಪಿ ನೌಕರನಾಗಿದ್ದು, ಈಕೆ ಮನೆಗೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ, ಮಹಿಳೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ದಾರಿ ಮಧ್ಯದಲ್ಲಿಯೇ ಎಳೆದೊಯ್ದ ಕಿಡಿಗೇಡಿಗಳು, ಆಕೆಯನ್ನು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿ ಕೊನೆಗೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಬೀಸಾಡಿ ಹೋಗಿದ್ದಾರೆ.

ಈ ಘಟನೆ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆ ಬಳಿ ನಿನ್ನೆ ಸಂಜೆ ವೇಳೆ ನಡೆದಿದೆ. ಇನ್ನು ರೇಪ್ ಅಂಡ್ ಮರ್ಡರ್ ಆಗಿರುವ ಮಹಿಳೆ ಬಾಂಗ್ಲಾದೇಶ ಮೂಲದ ನಜ್ಮಾ ಎಂದು ಗುರುತಿಸಲಾಗಿದೆ. ಈಕೆ ಕಳೆದ ಕೆಲವು ವರ್ಷಗಳ ಹಿಂದೆ ಸ್ಥಳೀಯ ಸುಮನ್ ಎಂಬಾತನ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಈಕೆ ಡಿಎಸ್ಆರ್ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಘಟನಾ ಸ್ಥಳಕ್ಕೆ ಡಿಸಿಪಿ ದೇವರಾಜ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ, ಡಾಗ್ ಸ್ಕ್ವಾಡ್ ಹಾಗೂ ಎಫ್ ಎಸ್ಎಲ್ ತಂಡದಿಂದ ಪರಿಶೀಲನೆ ಮಾಡಲಾಗುತ್ತಿದೆ.

ನಜ್ಮಾಳನ್ನು ಕಲ್ಕೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಿ, ಬಿಸಾಡಲಾಗಿದೆ. ನಿನ್ನೆ ಸಂಜೆ ಹಾಗೂ ರಾತ್ರಿ ವೇಳೆ ಈ ಘಟನೆ ನಡೆದಿರುವ ಶಂಕೆಯಿದೆ. ಬೆಳಗ್ಗೆ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಈ ಘಟನಾ ಸ್ಥಳದ 1 ಕಿಲೋ ಮೀಟರ್ ದೂರದಲ್ಲಿ ಈ ಮಹಿಳೆ ಕೆಲಸ ಮಾಡುತ್ತಿದ್ದಳು. ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಇನ್ನು ಮೃತ ನಾಜ್ಮಾ ಪತಿ ಸುಮನ್ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಮನೆಗೆ ಬಾರದ ಹಿನ್ನೆಲೆಯಲ್ಲಿ ನಿನ್ನೆಯೇ ಪತಿ ಹಾಗೂ ಮಕ್ಕಳು ಆತಂಕಕ್ಕೀಡಾಗಿದ್ದರು. ಬೆಳಗ್ಗೆ ಮನೆಗೆ ಬರಬಹುದು ಎಂದು ನಿರೀಕ್ಷೆಯಲ್ಲಿದ್ದ ಮನೆಯವರಿಗೆ ಈ ಘಟನೆಯಿಂದ ಆಘಾತ ಉಂಟಾಗಿದೆ. ಇದೀಗ ಮಹಿಳೆ ಮೃತ ದೇಹವನ್ನು ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಹುಡುಗಿಯರ ಶೋಕಿಗೆ ಹಸುಗಳ ಕದ್ದ ಖತರ್ನಾಕ್ ಖದೀಮ ಸೋಮ ಸೆರೆ

ಸ್ಥಳ ಪರಿಶೀಲನೆ ಮಾಡಿದ ಬಳಿಕ ಮಾತನಾಡಿದ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಅವರು, ಇಂದು ಬೆಳಗ್ಗೆ 112ಗೆ ಕರೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದು ನೋಡಲಾಗಿದೆ. ಆಗ ಮಧ್ಯವಯಸ್ಕ ಮಹಿಳೆ ಕೊಲೆಯಾಗಿರುವ ವಿಚಾರ ತಿಳಿದುಬಂದಿದ್ದು, ಪರಿಶೀಲನೆ ಮಾಡಲಾಗಿದೆ. ಆಗ ಈ ಮಹಿಳೆಯನ್ನ ರೇಪ್ ಮಾಡಿ ನಂತರ ಕೊಲೆ ಮಾಡಿರೊದು ಗೋತ್ತಾಗಿದೆ. ಈಕೆ ಡಿಎಸ್ ಅರ್  ಅಪಾರ್ಟ್‌ಮೆಂಟ್ ನಲ್ಲಿ ಕೆಲಸ ಮಾಡಿಕೊಂಡಿರೊದು ತಿಳಿದುಬಂದಿದೆ. ನಿನ್ನೆ ಮಧ್ಯಾಹ್ನ ಮಹಿಳೆಯು ಇನ್ನು ಅರ್ಧ ಗಂಟೆಯಲ್ಲಿ ಮನೆಗೆ ಬರುವುದಾಗಿ ಹೇಳಿ ಈ ರಸ್ತೆಯಲ್ಲಿ ಬಂದಿದ್ದಾರೆ. ಆದರೆ, ಸಂಜೆಯಾದರೂ ಮನೆಗೆ ಹೋಗಿಲ್ಲ.

ಆಗ ಮನೆಯವರಯ ಅನುಮಾನ ಬಂದು ಹುಡುಕಾಟ‌ ನಡೆಸಿದರೂ, ಈಕೆಯ ಸುಳಿವು ಸಿಕ್ಕಿಲ್ಲ. ಹಾಗಾಗಿ, ರಾತ್ರಿ ಆಗುತ್ತಿದ್ದಂತೆ ರಾಮಮೂರ್ತಿ ನಗರ ಪೊಲೀಸರಿಗೆ ಮನೆಯವರು ಬಂದು ದೂರು ಕೊಟ್ಟಿದ್ದಾರೆ. ಸದ್ಯ ರೇಪ್ ಅಂಡ್ ಮರ್ಡರ್ ಆಗಿರೋದು ಗೋತ್ತಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಈಕೆ ಬಾಂಗ್ಲಾ ದೇಶದ ಮಹಿಳೆ ಅನ್ನೋದು ತಿಳಿದು ಬಂದಿದೆ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪತ್ನಿ ಮನೆ ಮುಂದೆ ಕ್ಯಾಬ್ ಚಾಲಕ ಆತ್ಮಹತ್ಯೆ!

Latest Videos
Follow Us:
Download App:
  • android
  • ios