Asianet Suvarna News Asianet Suvarna News

Ranji Trophy ನಾಕೌಟ್ ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ ಟೆರರ್ ಬ್ಯಾಟಿಂಗ್

* ರಣಜಿ ಟ್ರೋಫಿ ನಾಕೌಟ್ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ತೋರುತ್ತಿರುವ ಯಶಸ್ವಿ ಜೈಸ್ವಾಲ್
* ಯಶಸ್ವಿ ಜೈಸ್ವಾಲ್ ಲೀಗ್ ಪಂದ್ಯದಲ್ಲಿ ಮಿಂಚಿದ್ದಕ್ಕಿಂತ ನಾಕೌಟ್ ಪಂದ್ಯಗಳಲ್ಲಿ ಅಬ್ಬರಿಸಿದ್ದೇ ಹೆಚ್ಚು
* ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಯಶಸ್ವಿ ಜೈಸ್ವಾಲ್

Ranji Trophy Yashasvi Jaiswal shines in knock out Stage matches kvn
Author
Bengaluru, First Published Jun 25, 2022, 5:06 PM IST

ಬೆಂಗಳೂರು(ಜೂ.25): ಬಹು ತಂಡಗಳು ಭಾಗವಹಿಸೋ ಟೂರ್ನಿಗಳಲ್ಲಿ ಸ್ಟಾರ್ ಪ್ಲೇಯರ್ಸ್ ಅನಿಸಿಕೊಂಡೋರು ಲೀಗ್​ನಲ್ಲಿ ಆರ್ಭಟಿಸಿ, ನಾಕೌಟ್ಗಳಲ್ಲಿ ಮುಗ್ಗರಿಸ್ತಾರೆ. ಏಷ್ಯಾಕಪ್, ವಿಶ್ವಕಪ್, ಅಂಡರ್​-19 ವಿಶ್ವ​ಕಪ್, ರಣಜಿ​ ಟೂರ್ನಿ ಹೀಗೆ ಬಿಗ್ ಟೂರ್ನಿಗಳ ಲೀಗ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು, ನಾಕೌಟ್ ಮ್ಯಾಚ್​ಗಳಲ್ಲಿ ಮಾತ್ರ ವಿಫಲರಾಗ್ತಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಅದೆಷ್ಟೋ ದಿಗ್ಗಜ ಕ್ರಿಕೆಟರ್ಸ್ ನಾಕೌಟ್ ಪಂದ್ಯದಲ್ಲಿ ಮಕಾಡೆ ಮಲಗಿದ್ದು ಉಂಟು. ಆದ್ರೆ ಇಲ್ಲೊಬ್ಬ ಕ್ರಿಕೆಟರ್​ ನಾಕೌಟ್ ಮ್ಯಾಚ್​ಗಳೆಂದರೆ ಆರ್ಭಟಿಸಿಬಿಡುತ್ತಾನೆ. ಆತನೇ ಮುಂಬೈನ ಯಶಸ್ವಿ ಜೈಸ್ವಾಲ್​ (Yashasvi Jaiswal).

ಯಶಸ್ವಿ ಜೈಸ್ವಾಲ್ ಯಶಸ್ಸಿನ ಗುಟ್ಟು..!: 

ಯಶಸ್ವಿ ಜೈಸ್ವಾಲ್. ಅಂಡರ್​-19 ಪ್ಲೇಯರ್. ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಓಪನರ್. ಡೊಮೆಸ್ಟಿಕ್​ನಲ್ಲಿ ಮುಂಬೈ ಆರಂಭಿಕ ಬ್ಯಾಟರ್. ಈತನಿಗೆ ನಾಕೌಟ್ ಪಂದ್ಯಗಳೆಂದರೆ ಅದೇನು ಪ್ರೀತಿನೋ ಗೊತ್ತಿಲ್ಲ. ನಾಕೌಟ್ ಮ್ಯಾಚ್​ಗಳಲ್ಲಿ ಪ್ಯಾಡ್​ ಕಟ್ಟಿ ಕ್ರೀಸಿಗೆ ಇಳಿದ್ರೆ ಮುಗೀತು. ಬಿಗ್ ಇನ್ನಿಂಗ್ಸ್ ಆಡದೆ ವಾಪಾಸ್ ಆಗೋ ಮಾತೇ ಇಲ್ಲ. ಕೇವಲ ಒಂದು ಟೂರ್ನಿ, ಒಂದು ಪಂದ್ಯದಲ್ಲಿ ಮಾತ್ರವಲ್ಲ, ಹಲವಾರು ನಾಕೌಟ್ ಮ್ಯಾಚ್​ಗಳಲ್ಲಿ ಯಶಸ್ವಿ ಜೈಸ್ವಾಲ್ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಡರ್​-19 ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಜೈಸ್ವಾಲ್ ಅಬ್ಬರ: 

ಅಂಡರ್​-19 ವರ್ಲ್ಡ್​ಕಪ್​ನಲ್ಲಿ (ICC U-19 World Cup) ಆಡಿದ್ದ ಯಶಸ್ವಿ ಜೈಸ್ವಾಲ್, ನಾಕೌಟ್ ಪಂದ್ಯಗಳಲ್ಲಿ ರನ್ ಹೊಳೆಯನ್ನೇ ಹರಿಸಿದ್ರು. ಕ್ವಾರ್ಟರ್​ ಫೈನಲ್​ನಲ್ಲಿ ಹಾಫ್ ಸೆಂಚುರಿ, ಸೆಮಿಸ್​ನಲ್ಲಿ ಸೆಂಚುರಿ ಮತ್ತು ಫೈನಲ್​​ನಲ್ಲಿ ಅರ್ಧಶತಕ ಸಿಡಿಸಿದ್ದರು. ಈ ಮೂಲಕ ಭಾರತ ಜೂನಿಯರ್ ತಂಡಕ್ಕೆ ಆಸರೆಯಾಗಿದ್ದರು.

ರಣಜಿ ನಾಕೌಟ್ ಮ್ಯಾಚ್​​ಗಳಲ್ಲಿ ಯಶಸ್ವಿ ಆರ್ಭಟ: 

ಸದ್ಯ ಬೆಂಗಳೂರಿನಲ್ಲಿ ರಣಜಿ ಟ್ರೋಫಿ ಫೈನಲ್ (Ranji Trophy Final) ಮ್ಯಾಚ್ ನಡೆಯುತ್ತಿದೆ. ಮುಂಬೈ ಮತ್ತು ಮಧ್ಯ ಪ್ರದೇಶ ತಂಡಗಳು ರಣಜಿ ಕಪ್ ಗೆಲ್ಲಲು ಹೋರಾಟ ನಡೆಸುತ್ತಿವೆ. ಫಸ್ಟ್ ಇನ್ನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್​ ಹಾಫ್ ಸೆಂಚುರಿ ಬಾರಿಸಿದ್ದಾರೆ. ಕೇವಲ ಫೈನಲ್​ನಲ್ಲಿ ಮಾತ್ರವಲ್ಲ, ಸೆಮಿಫೈನಲ್ ಪಂದ್ಯದ ಎರಡು ಇನ್ನಿಂಗ್ಸ್​ನಲ್ಲಿ ಜೈಸ್ವಾಲ್ ಶತಕ ಸಿಡಿಸಿದ್ದರು. ಕ್ವಾರ್ಟರ್​ ಫೈನಲ್​​​ನಲ್ಲೂ ಸೆಂಚುರಿ ಬಾರಿಸಿದ್ದರು. ಆ ಆರ್ಭಟ ನೋಡಿದ್ದ ಮಧ್ಯಪ್ರದೇಶ ತಂಡ, ಫೈನಲ್​ನಲ್ಲೂ ಶತಕ ಸಿಡಿಸ್ತಾರೆ ಅಂದುಕೊಂಡಿತ್ತು. ಆದರೆ ಅರ್ಧಶತಕ್ಕೆ ತಮ್ಮ ಆಟ ನಿಲ್ಲಿಸಿದ್ರು. ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಸೆಂಚುರಿ ಹೊಡೆದ್ರೂ ಆಶ್ಚರ್ಯವಿಲ್ಲ ಬಿಡಿ.

Ranji Trophy Final ಬಲಿಷ್ಠ ಮುಂಬೈಗೆ ತಿರುಗೇಟು ನೀಡಿದ ಮಧ್ಯಪ್ರದೇಶ..!

ಯಶಸ್ವಿ ಜೈಸ್ವಾಲ್, ಈ ಸೀಸನ್ ರಣಜಿಯಲ್ಲಿ​ ಆಡಿರೋ ಜಸ್ಟ್​ 3 ಪಂದ್ಯದಲ್ಲಿ 497 ರನ್ ಹೊಡೆದಿದ್ದಾರೆ. ಮೂರು ಸೆಂಚುರಿ, ಒಂದು ಹಾಫ್ ಸೆಂಚುರಿ ಅವರ ಖಾತೆಯಲ್ಲಿದೆ. ಇನ್ನು ಜೈಸ್ವಾಲ್ ಇದುವರೆಗೂ ಆಡಿರೋದು ಕೇವಲ ನಾಲ್ಕೇ ನಾಲ್ಕು ಫಸ್ಟ್ ಕ್ಲಾಸ್ ಮ್ಯಾಚ್​ಗಳು ಅನ್ನೋದೇ ವಿಶೇಷ.

Follow Us:
Download App:
  • android
  • ios